Advertisement

ಕಾರಿನಲ್ಲಿ ಮಹಿಳಾ ಕಾನ್ಸ್ ಟೇಬಲ್ ಶವ ಪತ್ತೆ, ಪತಿ ನಾಪತ್ತೆ: ತನಿಖೆ ಆರಂಭ

08:05 AM May 06, 2020 | Nagendra Trasi |

ನವದೆಹಲಿ: ತಲೆಗೆ ಬಲವಾದ ಏಟು ಬಿದ್ದಿದ್ದ ಮಹಿಳಾ ಕಾನ್ಸ್ ಟೇಬಲ್ ಶವ ಲೋಧಿ ಕಾಲೋನಿ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಪತ್ತೆಯಾಗಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಮೃತ ಕಾನ್ಸ್ ಟೇಬಲ್ ರಾಜಧಾನಿಯ ಉತ್ತರ ಜಿಲ್ಲೆಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಕೆಯ ಪತಿ ಈಗ ನಾಪತ್ತೆಯಾಗಿದ್ದು, ಆತನೂ ದೆಹಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಎಂದು ವರದಿ ತಿಳಿಸಿದೆ.

Advertisement

ಮೇಲ್ನೋಟದ ವರದಿ ಪ್ರಕಾರ, ಇದೊಂದು ಗಂಡ-ಹೆಂಡತಿ ಜಗಳ ಎಂದು ಕಂಡು ಬಂದಿದ್ದು, ಕಾನ್ಸ್ ಟೇಬಲ್ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಮಹಿಳೆಯ ಶವ ಕಾರಿನೊಳಗೆ ಪತ್ತೆಯಾಗಿದ್ದು, ಆಕೆಗೆ 30 ವರ್ಷ ಇದ್ದಿರಬಹುದು. ಅಲ್ಲದೇ ಆಕೆಯ ತಲೆಗೆ ಗಾಯವಾಗಿರುವುದಾಗಿ ವರದಿ ತಿಳಿಸಿದೆ. ಗಾಯ ಹೇಗಾಯಿತು ಎಂಬ ಬಗ್ಗೆ ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ಖಚಿತವಾಗಲಿದೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next