Advertisement

ನದಿಗೆ ಬಿದ್ದ ನಾಲ್ಕು ದಿನಗಳ ಅನಂತರ ಮಹಿಳೆಯ ಶವ ಪತ್ತೆ

04:29 PM Aug 25, 2020 | keerthan |

ಪಾಲ್ಗಾರ್ (ಮಹಾರಾಷ್ಟ್ರ): ಸುಮಾರು ನಾಲ್ಕು ದಿನಗಳ ಹಿಂದೆ ಪ್ರವಾಹದಿಂದ ಕೂಡಿದ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ಪಾಲ್ಗಾರ್ ಜಿಲ್ಲೆಯ 58ರ ಹರೆಯದ ಮಹಿಳೆಯ ಶವ ರವಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ಮಹಿಳೆಯನ್ನು ವತ್ಸಲಾ ಇಬಾದ್‌ ಎಂದು ಗುರುತಿಸಲಾಗಿದೆ. ಈಕೆ ಆ.19 ರಂದು ಆಡುಗಳನ್ನು ಮೇಯಿಸಲು ಮನೆಯಿಂದ ಹೊರಗೆ ಹೋಗಿದ್ದಳು, ಆದರೆ ನಂತರ ನಾಪತ್ತೆಯಾಗಿದ್ದಳು. ಕೊಕ್ನೆರೆ ಗ್ರಾಮದ ಮೀನುಗಾರರು ಸೂರ್ಯ ನದಿಯ ದಡದಲ್ಲಿ ಮಹಿಳೆಯ ಶವವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೇಲ್ನೋಟದಲ್ಲಿ ವತ್ಸಲಾ ಇಬಾದ್‌ ಆಕಸ್ಮಿಕವಾಗಿ ನದಿಗೆ ಬಿದ್ದು ಭಾರಿ ಮಳೆಯಿಂದಾಗಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿರುವಂತೆ ತೋರಿಬರುತ್ತದೆ. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next