Advertisement
ಸಂವಹನದಲ್ಲಿ ದೇಹ ಭಾಷೆ ((body language) ಅತಿ ಮುಖ್ಯವಾದದ್ದು. ನಮ್ಮ ಗುಣನಡತೆಯನ್ನು ಇದು ಸೂಚಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುವಾಗ ಆ ಪ್ರದೇಶಗಳಲ್ಲಿ ನಮ್ಮ ವರ್ತನೆ ಮಹತ್ವವೆನಿಸುತ್ತದೆ. ಕೆಲವೊಂದು ಬಾರಿ ಇದು ಯಶಸ್ಸಿಗೂ ಅಥವಾ ಬದುಕಿನ ಸೋಲಿಗೂ ಕಾರಣವಾಗಬಹುದು. ಈ ಕಾರಣದಿಂದಲೇ ಪ್ರತಿಯೊಬ್ಬರೂ ತಮ್ಮ ಕೆಲಸಗಳ ಮೂಲಕ ವರ್ತನೆಗಳನ್ನು ತೋರ್ಪಡಿಸುವ ಅನಿವಾರ್ಯತೆ ಇದೆ.
ನಾವು ಕುಳಿತುಕೊಳ್ಳುವ ಸಮಯದಿಂದಲೇ ನಮ್ಮನ್ನು ಗಮನಿಸುವ ವ್ಯಕ್ತಿಗಳಿರುತ್ತಾರೆ. ಅದರಲ್ಲಿಯೂ, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಬಳಿ ಮಾತನಾಡುವಾಗಲಂತೂ ತುಂಬಾ ಜಾಗರೂಕರಾಗಿರಬೇಕು. ಆ ಸಮಯದಲ್ಲಿ ನಮ್ಮ ಹಾವಭಾವಗಳು ಪರಿಗಣನೆಗೆ ಬರುತ್ತವೆ. ಕುಳಿತುಕೊಳ್ಳುವ ಸಮಯದಲ್ಲಿ ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಬೇಕು. ಉತ್ತಮವಾಗಿ ಮಾತನಾಡುವವರು ಮೊದಲು ವಿಚಾರಗಳನ್ನು ಕೇಳಲು ಕಲಿಯಬೇಕು. ಆದ್ದರಿಂದ ಮಾತಿನ ಮಧ್ಯೆ ಅನಗತ್ಯವಾಗಿ ವಾದ ಮಾಡಬಾರದು. ಇದು ನಮ್ಮ ವರ್ತನೆಯನ್ನು ಪ್ರತಿಬಿಂಬಿಸುತ್ತದೆ.
Related Articles
Advertisement
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಗಳ ಜತೆ ಮಾತನಾಡುವ ಸಮಯದಲ್ಲಿ ಕೈಕಟ್ಟಿ ನಿಲ್ಲುವುದನ್ನು ಕಾಣುತ್ತೇವೆ. ಇದು ಸರಿಯಲ್ಲ. ಮೊದಲು, ಆರಾಮವಾಗಿ ನಿಲ್ಲುವುದನ್ನು ಕರಗತ ಮಾಡಿಕೊಳ್ಳಬೇಕು. ಯಾವುದೇ ಹಾಸ್ಯ ಚಟಾಕಿಗೆ ನಗಬೇಕಾದಾಗ ಆ ಸಮಯದಲ್ಲಿ ನಗದೆ ಉಳಿದ ವೇಳೆ ಜೋರಾಗಿ ನಗುವ ಪ್ರವೃತ್ತಿಯವರು ಕೂಡ ಇದ್ದಾರೆ. ಇದು ಉದ್ಯೋಗ ಸಂದರ್ಶನ ಸಹಿತ ಗಣ್ಯರ ಜತೆ ಮಾತನಾಡುವ ಸಮಯದಲ್ಲಿ ಸಲ್ಲದು. ಏಕೆಂದರೆ ಕೆಲವೊಂದು ಬಾರಿ ಜೀವನದ ತಿರುವಿಗೆ ಇದೇ ಮುಳ್ಳಾಗಬಹುದು. ಅಷ್ಟೇ ಏಕೆ ಸಂದರ್ಶನದಲ್ಲಿದ್ದರೂ, ಕೂದಲು ಸರಿ ಮಾಡುವ ಯುವತಿಯರೂ ಇದ್ದಾರೆ. ಚರ್ಚೆಯ ವಿಷಯಕ್ಕಿಂತ ಕೂದಲಿನ ಬಗ್ಗೆ ಗಮನವಿರುವುದು ಸರಿಯಲ್ಲ. ಕಣ್ಣುಗಳೇ ಮಾತನಾಡುತ್ತವೆ ಎಂದು ಹೇಳುವವರಿದ್ದಾರೆ. ಅದರಂತೆಯೇ ಯಾರ ಜತೆಗಾದರೂ ಮಾತನಾಡುವ ಸಮಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು.ಹೆಚ್ಚಿನ ಮಂದಿ ಇದನ್ನು ಅನುಸರಿಸುವುದಿಲ್ಲ.
ಕಲಿಸಬೇಕಿದೆ ಬಾಡಿ ಲ್ಯಾಂಗ್ವೇಜ್ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಪ್ರಪಂಚ ವಿಶಾಲವಾದಂತೆ ನಮ್ಮ ನಡವಳಿಕೆಗಳೂ ಬದಲಾಗಿವೆ. ವರ್ತನೆಯ ವಿಚಾರವಾಗಿನ ಪ್ರತ್ಯೇಕ ಕಲಿಕೆಯ ಅಗತ್ಯವಿದೆ. ಏಕೆಂದರೆ, ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ಯಾವ ರೀತಿ ಹಾವಭಾವ ಇರಬೇಕು, ಗಣ್ಯರು, ಶಾಲೆಯಲ್ಲಿ ಅಧ್ಯಾಪಕರು, ಸ್ನೇಹಿತರು, ಪೋಷಕರ ಜತೆ ಮಾತನಾಡುವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಆವಶ್ಯಕತೆ ಹೆಚ್ಚಾಗಿದೆ. ಇದೇ ಕಾರಣಕ್ಕಿಂದು ಸಂದರ್ಶನಕ್ಕೆ ತಯಾರಾಗುವುದು ಹೇಗೆ? ಎಂಬ ಕಾರ್ಯಾಗಾರಗಳು ವಿಶೇಷ ಪ್ರಾಮುಖ್ಯ ಪಡೆದುಕೊಂಡಿವೆ. ಮನೆಯಲ್ಲೂ ಕಲಿಸಬಹುದು
ಬಾಡಿ ಲ್ಯಾಂಗ್ವೇಜ್ ಎನ್ನುವುದು ಕೇವಲ ಪುಸ್ತಕದಿಂದ ಕಲಿಯಲು ಸಾಧ್ಯವಿಲ್ಲ. ಮನೆಯಲ್ಲಿ ಹೆತ್ತವರೂ ಮಕ್ಕಳಿಗೆ ಇದನ್ನು ಕಲಿಸಿಕೊಡಬಹುದು. ಹಿರಿಯರಿಗೆ ಗೌರವಕೊಡುವುದು, ಹಿರಿಯರೆದುರು ಕುಳಿತು ಕೊಳ್ಳುವುದು, ಮಾತನಾಡುವುದು, ಎಲ್ಲಿ, ಯಾವಾಗ ಹೇಗೆ ವರ್ತಿಸಬೇಕು ಎಂಬುದನ್ನು ತಾವು ಪಾಲಿಸಿ, ಮಕ್ಕಳಿಗೆ ಹೇಳಿಕೊಡುವ ಮೂಲಕ ಬಾಡಿ ಲ್ಯಾಂಗ್ವೇಜ್ ಅನ್ನು ಕಲಿಸಲು ಸಾಧ್ಯವಿದೆ. ಏನಿರುತ್ತವೆ?
ಕೆಲಸದ ಸಂದರ್ಶನದ ಸಮಯದಲ್ಲಿ ಹಾವ ಭಾವ ಅತೀ ಮುಖ್ಯವಾಗಿರುತ್ತದೆ. ಎದುರಿನಲ್ಲಿ ಕುಳಿತಿರುವ ವ್ಯಕ್ತಿ ಏನು ಹೇಳುತ್ತಾರೆ ಎಂಬುವುದನ್ನು ಸರಿಯಾಗಿ ಕೇಳುವಂಥ ವ್ಯವದಾನ ಬೇಕು. ಈ ವೇಳೆ ಮುಖದ ಹಾವಭಾವದ ಮೇಲೆ ಹಿಡಿತವಿರಬೇಕಾಗುತ್ತದೆ. ಸಂದರ್ಶನದ ಸಮಯದಲ್ಲಿ ಮುಖದ ಭಾವಗಳಿಂದ ನಮ್ಮನ್ನು ಅಳೆಯಬಹುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೇಹದ ನಿಲುವು, ಚಲನೆ, ಸಕಾರಾತ್ಮಕ ಆಲೋಚನೆಗಳು ಕೂಡ ಪ್ರತಿಯೊಂದು ಕಾರ್ಯ ಯಶಸ್ವಿಯಾಗಲು ಸಾಧ್ಯ. ಹೀಗಿದ್ದಾಗ, ನಮ್ಮ ಬಾಡಿ ಲಾಂಗ್ವೇಜ್ ಹೇಗಿರಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ನವೀನ್ ಭಟ್ ಇಳಂತಿಲ