Advertisement
ಅಷ್ಟಕ್ಕೂ, ಲಲನೆಯರಿಗೆ ಘಮ್ಮೆನ್ನಲು ಪರ್ಫ್ಯೂಮೇ ಬೇಕಂತಲೂ ಇಲ್ಲ. “ಪರ್ಫ್ಯೂಮ್ ಫ್ರೀ’ ಎನ್ನುವ ಪರಿಕಲ್ಪನೆಯಲ್ಲೂ ಮಿಂಚಬಹುದು ಎಂಬುದು ನಿಮ್ಗೆ ಗೊತ್ತೇ? ಪರ್ಫ್ಯೂಮ್ ಪೂಸಿಕೊಂಡರೆ ಹೆಚ್ಚೆಂದರೆ, ನಾಲ್ಕೈದು ತಾಸು ಮಾತ್ರ ಅದರ ಪರಿಮಳವಷ್ಟೇ. ಆದರೆ, ಅದನ್ನು ಪೂಸಿಕೊಳ್ಳದೆಯೂ ದಿನಪೂರ್ತಿ ಪರಿಮಳಯುಕ್ತವಾಗಿರಬಹುದು. ಅದು ಹೇಗೆ ಗೊತ್ತೇ?
ಸ್ನಾನಕ್ಕೆ 30 ನಿಮಿಷ ಮೊದಲು ನೀರಿನಲ್ಲಿ ಗುಲಾಬಿ ದಳಗಳನ್ನು ನೆನೆಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಮಾಮೂಲಿ ಮೈಸೋಪ್‌ಗಿಂತ, ಗಾಢ ಪರಿಮಳಯುಕ್ತ ಸೋಪ್ ಅನ್ನು ಬಳಸಿ. ಇವೆರಡರ ಕಾಂಬಿನೇಷನ್ ನಿಮ್ಮ ದೇಹವನ್ನು ಹೆಚ್ಚು ಹೊತ್ತು ಸುಗಂಧದಲ್ಲಿ ಮೀಯುವಂತೆ ಮಾಡುತ್ತದೆ. 2. ಲೋಶನ್ ಅಥವಾ ಮಾಯಿಶ್ಚರೈಸರ್
ಲೋಶನ್ ಇಲ್ಲವೇ ಮಾಯಿಶ್ಚರೈಸರ್ ಕೂಡ ಸುಗಂಧದ್ರವ್ಯಕ್ಕೆ ಪರ್ಯಾಯ ವಸ್ತುಗಳೇ ಆಗಿವೆ. ಆದರೆ, ಹಾಗೆ ಪರಿಮಳ ನೀಡುವ ಎಲ್ಲ ಲೋಶನ್‌ಗಳೂ ನಿಮ್ಮ ಚರ್ಮಕ್ಕೆ ಆಗಿಬರುತ್ತವೆ ಎಂದು ಹೇಳಲಾಗದು. ನಿಮ್ಮ ಚರ್ಮದ ಗುಣಕ್ಕೆ ಹೊಂದಿಕೊಳ್ಳುವಂಥ ಪರಿಮಳಯುಕ್ತ ಲೋಶನ್‌ಗೆ ಆದ್ಯತೆ ನೀಡಿ.
Related Articles
ಕೈ ಬೆರಳಲ್ಲೂ ಹೂವಿನ ಪರಿಮಳವನ್ನು ಹುದುಗಿಸಬಹುದು. ಇಂಥ ಪರಿಮಳದ ಮ್ಯಾಜಿಕ್ ಅನ್ನು ಸೃಷ್ಟಿಸಬಲ್ಲಂಥ ಸುಗಂಧಯುಕ್ತ ನೈಲ್ ಪಾಲಿಶ್‌ಗಳು ಈಗ ಟ್ರೆಂಡ್ ಆಗಿವೆ. ಮೈಗೆ ಸುಗಂಧ ಪೂಸಿಕೊಂಡಂತೆ ಅನುಮಾನ ಹುಟ್ಟಿಸಬಲ್ಲ ಇವು 20ಕ್ಕೂ ಅಧಿಕ ಪರಿಮಳಗಳಲ್ಲಿ ಲಭ್ಯ.
Advertisement
4. ಟೋನರ್ಗಳುಟೋನರ್ಗಳನ್ನು ಮುಖಕ್ಕೆ ಮಾತ್ರವೇ ಹಚ್ಚಿಕೊಳ್ಳಬಹುದಾದರೂ, ಪರ್ಫ್ಯೂಮ್‌ಗಿಂತ ಇವು ಉತ್ತಮ. ಇವುಗಳ ಪರಿಮಳವು ಮೂಗಿಗೆ ರಾಚುವುದೂ ಇಲ್ಲ. ನಿತ್ಯವೂ ಕಚೇರಿಯಲ್ಲಿ ದುಡಿಯುವವರು, ದಿನಕ್ಕೊಂದು ಟೋನರ್‌ಗಳನ್ನು ಹಚ್ಚಿಕೊಂಡು ಸಂಭ್ರಮಿಸಬಹುದು. ಈಗ ಬಗೆಬಗೆಯ ಟೋನರ್‌ಗಳೂ ಮಾರುಕಟ್ಟೆಯಲ್ಲಿವೆ. 5. ಹೇರ್ ಸ್ಪ್ರೆ
ಶಾಂಪೂ ಇಲ್ಲವೇ ಕಂಡೀಶನರ್‌ಗಳನ್ನೂ ಪರ್ಫ್ಯೂಮ್ ಬದಲಿಗೆ ಬಳಸಬಹುದು. ಆದರೆ, ಇವನ್ನು ನಿತ್ಯವೂ ಬಳಸಲಾಗುವುದಿಲ್ಲ ಎಂಬುದೇ ಒಂದು ಚಿಂತೆ. ಇವುಗಳ ಬದಲಿಗೆ ತಲೆಕೂದಲಿಗೆ ಪರಿಮಳಯುಕ್ತ ಹೇರ್‌ಸ್ಪ್ರೆàಗಳನ್ನು ಉಪಯೋಗಿಸಬಹುದು. ಇವುಗಳ ಪರಿಮಳವು ಅತ್ಯಂತ ಮಧುರ. 6. ಬಾಡಿ ಬಟರ್
ಚರ್ಮಕ್ಕೆ ಮೃದುತ್ವ ನೀಡಲು ನೆರವಾಗುವ ಬಾಡಿ ಬಟರ್‌ಗಳು ಕೂಡ ಪರ್ಫ್ಯೂಮ್‌ನಂತೆಯೇ ಕೆಲಸ ಮಾಡುತ್ತವೆ. ಯೋಗ್ಯ ಬ್ರ್ಯಾಂಡ್‌ಗಳಿಗೆ ಹೋದರಷ್ಟೇ ನೀವು ಈ ಬಟರ್‌ಗಳಿಂದ ಪರಿಮಳವನ್ನು ನಿರೀಕ್ಷಿಸಬಹುದು. ಶರೀರವನ್ನು ಮಲ್ಲಿಗೆ ಹೂವಿನಂತೆ ಕಾಪಿಡಲು ಇವೂ ಉತ್ತಮ. -ಸುವಾಸಿನಿ