Advertisement
ಇದನ್ನು ಬಿಡಿಡಿ ಎಂದು ಕೂಡ ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಲ್ಲೂ ಈ ಸಮಸ್ಯೆ ಇದ್ದೇ ಇರುತ್ತದೆ. ಟೀನ್ ಏಜ್ ಅಥವಾ ಹರೆಯದ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಹೆಚ್ಚಾಗಿರುತ್ತದೆ.
Related Articles
Advertisement
ಈ ಸಮಸ್ಯೆ ಇರುವವರಲ್ಲಿ ಸಾಮಾನ್ಯವಾಗಿ ಈಟಿಂಗ್ ಡಿಸ್ ಆರ್ಡರ್, ಸೆಲ್ಫ್ ವಾಮಿಟಿಂಗ್, ಡ್ರಗ್ಸ್, ಆಲ್ಕೋ ಹಾಲ್ ಚಟಕ್ಕೆ ಒಳಗಾಗುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಸಿಟ್ಟು, ಕೋಪ ಸಾಮಾನ್ಯವಾಗಿ ಹಚ್ಚಾಗಿರುತ್ತದೆ.
ಪದೇ ಪದೇ ಕನ್ನಡಿ ನೋಡಿಕೊಳ್ಳುವುದು, ತಮ್ಮ ದೈಹಿಕ ಬಾಹ್ಯ ಸೌಂದರ್ಯದ ಬಗ್ಗೆಯೇ ಹೆಚ್ಚಾಗಿ ಕೊರಗುವುದರಿಂದ ಅವರು ಸೋಶಿಯಲ್ ಡಿಸ್ಟ್ಯಾನ್ಸ್ ನಿಂದ ಇರುತ್ತಾರೆ. ಅಂದರೇ, ಹೆಚ್ಚಾಗಿ ಒಬ್ಬಂಟಿಯಾಗಿ ಇರಲು ಬಯಸುತ್ತಾರೆ.
ಸಾಮಾನ್ಯವಾಗಿ ಇದು ಇಪ್ಪತ್ತು ವರ್ಷ ಕಳೆಯುವ ತನಕ ಅಂದರೇ ಪದವಿ ಕಾಲೇಜು ಜೀವನ ಕಳೆಯುವುದರ ತನಕ ಹೆಚ್ಚಾಗಿ ಇರುತ್ತದೆ.
ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ದೇಹದ ಕುರಿತು ತೃಪ್ತಿ ಇರುವುದಿಲ್ಲ. ತಮ್ಮ ದೇಹ ಅಥವಾ ದೈಹಿಕ ಆಕೃತಿಯ ಬಗ್ಗೆ ಸಂತೃಪ್ತಿ ಇರುವವರು ಬಹಳ ಕಡಿಮೆ. ಕೆಲವರು ಎತ್ತರವಾಗಲು ಬಯಸಿದರೆ, ಕೆಲವರು ಗಿಡ್ಡವಾಗಲು ಬಯಸುತ್ತಾರೆ. ಇನ್ನು ಕೆಲವರಿಗೆ ಪುಷ್ಟವಾದ ಮೈಕಟ್ಟು ಮತ್ತು ದಪ್ಪ ಕೂದಲಿನ ಬಯಕೆಯಿರುತ್ತದೆ. ಆದರೆ ಕೆಲವರಲ್ಲಿ ಈ ಬಯಕೆಗಳು ಅತ್ಯಂತ ತೀವ್ರವಾಗಿ ಅದೊಂದು ಗೀಳಾಗಿ ಬದಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಶಾಲೆ, ಕಾಲೇಜು ಅಥವಾ ಕಛೇರಿಗೆ ಹೋಗುವುದನ್ನೇ ನಿಲ್ಲಿಸಬಹುದು.
ಬಾಡಿ ದಿಸ್ಮಾರ್ಫಿಕ್ ಡಿಸ್ ಆರ್ಡರ್ ಒಂದು ಕ್ಲಿನಿಕಲ್ ಪರಿಸ್ಥಿತಿಯಾಗಿದ್ದು, ಇದರಿಂದಾಗಿ ವ್ಯಕ್ತಿಯು ತನ್ನ ದೇಹದ ಆಕೃತಿ ಅಥವಾ ಮೂಗು, ಬಣ್ಣ, ಕಿವಿ, ತುಟಿಗಳಂತಹ ನಿರ್ದಿಷ್ಟ ಅಂಗಾಂಗಗಳ ಆಕಾರಗಳ ಬಗ್ಗೆ ಅತಿಯಾಗಿ ಮತ್ತೆ ಮತ್ತೆ ಚಿಂತೆ ಮಾಡುತ್ತಾರೆ.
ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ನಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಬಗ್ಗೆ ಅತಿಯಾದ ನಿರೀಕ್ಷೆಯನ್ನು ಹೊಂದಿರುತ್ತಾರೆ ಅಥವಾ ತಮ್ಮನ್ನು ತಾವು ಪರಿಪೂರ್ಣರಾಗಿಸಲು ಪ್ರಯತ್ನಿಸುತ್ತಾರೆ. ಇದರಿಂದ ತಮ್ಮ ತಪ್ಪುಗಳ ಬಗ್ಗೆ ಇತರರಿಂದ ಮತ್ತೆ ಮತ್ತೆ ಅಭಿಪ್ರಾಯಗಳನ್ನು ಪಡೆಯಬಹುದು. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗುವಂತೆ ಮಾಡುವಲ್ಲಿ ಕುಟುಂಬದ ಪಾತ್ರ ಪ್ರಮುಖವಾಗಿರುತ್ತದೆ. ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿರುವಾಗ ಕುಟುಂಬದವರು ಅವರನ್ನು ಅರ್ಥಮಾಡಿಕೊಂಡು ಅಗತ್ಯ ಬೆಂಬಲ ನೀಡುವುದರಿಂದ ಅವರು ಆ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತದೆ.
ಮಾಹಿತಿ : ಸವಿತಾ ಕೆ.
ಮನಃಶಾಸ್ತ್ರ ಉಪನ್ಯಾಸಕರು, ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ