Advertisement
ಮಂಗಳೂರಿನ ಬೊಕ್ಕಪಟ್ಣದ ಈ ಕ್ರೀಡಾ ಸಾಧಕನ ಹೆಸರು ನಿಶಾನ್ ಕುಮಾರ್. ನಿಶಾನ್ 65 ಕೆ.ಜಿ ವಿಭಾಗದ ಅಂತಾರಾಷ್ಟ್ರೀಯ ದೇಹದಾಡ್ಯì ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಡು ಬಡತನದಲ್ಲಿ ಹುಟ್ಟಿದ ಇವರ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು.
Related Articles
Advertisement
ಬಳಿಕ ಕೊಯಂಬತ್ತೂರಿನಲ್ಲಿ ನಡೆದ 65 ಕೆ.ಜಿ. ವಿಭಾಗದ “ಮಿಸ್ಟರ್ ಇಂಡಿಯಾ ಜೂನಿಯರ್ ಟೈಟಲ್’ ಜತೆ ಚಿನ್ನದ ಪದಕ, ಮಿಸ್ಟರ್ ಇಂಡಿಯಾ ಬೆಸ್ಟ್ ಪೋಸರ್ ಜತೆ ಓವರ್‌ಆಲ್ ರನ್ನರ್ ಆಪ್ ಪ್ರಶಸ್ತಿ ಕೂಡ ಗೆದ್ದರು. 2017ರಲ್ಲಿ “ಮಿಸ್ಟರ್ ಕರ್ನಾಟಕ’ ಪಟ್ಟವೂ ಒಲಿಯಿತು. ಬ್ಯಾಂಕಾಕ್‌ನಲ್ಲಿ “ಮಿಸ್ಟರ್ ಏಶ್ಯ ಜ್ಯೂನಿಯರ್’ ಪ್ರಶಸ್ತಿ ಜತೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನೂ ಗಳಿಸಿದರು. ಸಿಂಗಾಪುರದಲ್ಲಿ 3 ದಿನಗಳ ಹಿಂದೆ “ಮಿಸ್ಟರ್ ಯೂನಿವರ್ಸ್’ ವಿಶ್ವ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ದೇಶದ ಗಮನಸೆಳೆದಿರುವುದು ಗಮನಾರ್ಹ.
ಡೆಂಗ್ಯೂನಿಂದ ತಪ್ಪಿದ ಅವಕಾಶ: ನಿಶಾನ್ ಕುಮಾರ್‌ಗೆ ಜೂನ್ ತಿಂಗಳಿನಲ್ಲಿ ನಡೆದ ಮಿಸ್ಟರ್ ವಲ್ಡ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಅದೇ ಸಮಯದಲ್ಲಿ ಡೆಂಗ್ಯೂ ಜ್ವರ ಬಂದಿದ್ದ ಕಾರಣ ಮತ್ತು ವೀಸಾ ಸಮಸ್ಯೆಯಿಂದಾಗಿ ಅವಕಾಶ ಕೈತಪ್ಪಿತ್ತು. ಮುಂದಿನ ಮಿಸ್ಟರ್ ಇಂಡಿಯಾ, ಮಿಸ್ಟರ್ ವರ್ಲ್ಡ್ ಸೀನಿಯರ್‌ಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ನವೀನ್ ಭಟ್ ಇಳಂತಿಲ