Advertisement

ಗಂಗೆಯಲ್ಲಿ ಕೋವಿಡ್ ಮೃತ ದೇಹಗಳನ್ನು ಎಸೆದಿದ್ದು, ‘ಅತ್ಯಂತ ಗಂಭೀರ ಸಮಸ್ಯೆ’ : ಸುಪ್ರೀಂ

08:03 PM Jun 28, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕು ಅತ್ಯಂತ ಬೀಕರ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಪವಿತ್ರ ಗಂಗಾ ನದಿಯಲ್ಲಿ ತೇಲಿ ಬಂದ ಮೃತ ದೇಹಗಳ ಬಗ್ಗೆ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಇದು ‘ಅತ್ಯಂತ ಗಂಭೀರ ಸಮಸ್ಯೆ’ ಎಂದು ಇಂದು(ಸೋಮವಾರ, ಜೂನ್ 28) ಹೇಳಿದೆ.

Advertisement

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರ ದ್ವೀ ಸದ್ಸಯ ನ್ಯಾಯ ಪೀಠವು ಅರ್ಜಿದಾರರಿಗೆ ಎನ್‌ ಎಚ್‌ ಆರ್‌ ಸಿ ಯನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಿದೆ.

ಅರ್ಜೀದಾರರನ್ನು ಉದ್ದೇಶಿಸಿ ನಿರ್ದೇಶಿಸಿದ ನ್ಯಾಯ ಪೀಠ, “ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದೆ ಹೋಗಿ. ನೀವು ಎಷ್ಟು ವೇದಿಕೆಗಳನ್ನು ಸಂಪರ್ಕಿಸಬಹುದು? ಇದು ಗಂಭೀರ ಸಮಸ್ಯೆ. ನಮಗೆ ತಿಳಿದಿದೆ. ಅದೃಷ್ಟವಶಾತ್ ಈಗ ಪರಿಸ್ಥಿತಿ ಇಲ್ಲ. ನೀವು ಎನ್‌ಎಚ್‌ಆರ್‌ಸಿ ಶಿಫಾರಸುಗಳನ್ನು ಉಲ್ಲೇಖಿಸಿದ್ದೀರಿ . ಎನ್‌ಎಚ್‌ ಆರ್‌ ಸಿಗೆ  ಸಂಪರ್ಕಿಸಿ” ಎಂದು ಹೇಳಿದೆ.

ಇದನ್ನೂ ಓದಿ : ಚಾರ್‌ಧಾಮ್‌ ಯಾತ್ರೆಗೆ ಹೈಕೋರ್ಟ್ ತಡೆ : ದೇಗುಲದಲ್ಲಿ ನಡೆಯುವ ಪೂಜೆಯ ನೇರ ಪ್ರಸಾರಕ್ಕೆ ಆದೇಶ

ಕೊವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚಿನ ಶುಲ್ಕ ವಿಧಿಸುವುದರ ವಿರುದ್ಧ ಕ್ರಮ ಸೇರಿದಂತೆ ಮೃತರ ಹಕ್ಕುಗಳನ್ನು ರಕ್ಷಿಸಲು ನೀತಿಗಳನ್ನು ರೂಪಿಸುವಲ್ಲಿ ಸಹಾಯಕ್ಕಾಗಿ ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Advertisement

ಈ ವಿಚಾರದ ವಾದದಲ್ಲಿ ಅರ್ಜಿದಾರ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ ಎಂಬ ಎನ್ ಜಿ ಒ ಮೇ ತಿಂಗಳಲ್ಲಿ ಗಂಗಾ ನದಿಯಲ್ಲಿ ಎಸೆಯಲ್ಪಟ್ಟ ಕೋವಿಡ್ ನಿಂದದ ಮೃತಪಟ್ಟ ಜನರ ಮೃತದೇಹಗಳನ್ನು ಉಲ್ಲೇಖಿಸಿದೆ.

ಮೇ ಆರಂಭದಲ್ಲಿ ಎರಡನೇ ಅಲೆಯ ಕಾರಣದಿಂದಾಗಿ ಪ್ರತಿದಿನ (ಅಧಿಕೃತವಾಗಿ) 3,000-4,000 ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗುತ್ತಿದ್ದವು ,ಶಂಕಿತ ಕೋವಿಡ್ ಸೋಂಕಿತರ ಮೃತ ದೇಹಗಳು ಬಿಹಾರ ಮತ್ತು ಉತ್ತರ ಪ್ರದೇಶದ ಗಂಗಾ ತೀರದಲ್ಲಿ ಪತ್ತೆಯಾಗದ್ದವು.

ಈ ಬಗ್ಗೆ ಅವ್ಯಾಹತವಾಗಿ ವರದಿಗಳು ಜನರು ಕೋವಿಡ್ ನಿಂದ ಮೃತ  ಪಟ್ಟವರ ದೇಹವನ್ನು ಗಂಗಾ ನದಿಯಲ್ಲಿ ಎಸೆಯಲಾಗುತ್ತಿದೆ ಎಂದು ಹಲವಾರು ರಾಷ್ಟ್ರೀಯ ಮಾಧ್ಯಮಗಳು ವರದಿಗಳು ಮಾಡಿದ್ದರೂ ಸರ್ಕಾರ ಆ ವರದಿಗಳನ್ನು ನಿರಾಕರಿಸಿತ್ತು.

ಇದನ್ನೂ ಓದಿ : ಕೋವಿಡ್ : ಆರ್ಥಿಕ ನಷ್ಟ ಅನುಭವಿಸಿದ ಕ್ಷೇತ್ರಗಳ ಪುನಶ್ಚೇತನಕ್ಕೆ 6.28 ಲಕ್ಷ ಕೋಟಿ ಪ್ಯಾಕೇಜ್

Advertisement

Udayavani is now on Telegram. Click here to join our channel and stay updated with the latest news.

Next