ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಬೋಡಬಂಡೇನಹಳ್ಳಿಯ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವವು 9 ಹಳ್ಳಿಯ ಗ್ರಾಮಸ್ಥರಿಂದ ಬುಧವಾರ ಅದ್ಧೂರಿಯಾಗಿ ನಡೆಯಿತು.
ಇತಿಹಾಸ ಪ್ರಸಿದ್ದ ಬೋಡಬಂಡೇನಹಳ್ಳಿಯ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಮೂರು ವರ್ಷಕ್ಕೋಮ್ಮೆ ನಡೆಯಲಿದೆ, ಸುತ್ತ ಮುತ್ತಲಿನ 9 ಹಳ್ಳಿಯ ಗ್ರಾಮಸ್ಥರ ಗ್ರಾಮದೇವತೆಯಾಗಿದ್ದು, ಅಷಾಡ ಮಾಸದಲ್ಲಿ ಗಂಡನ ಮನೆಯಿಂದ ತವರು ಮನೆಗೆ ಹೆಣ್ಣುಮಕ್ಕಳು ಬಂದು ಕುಟುಂಬದವರೊಂದಿಗೆ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ.
ಜಾತ್ರೆಯ ವಿಶೇಷವೆಂದರೆ ೯ಹಳ್ಳಿಗಳಿಂದ ಹೆಣ್ಣು ಮಕ್ಕಳು ಆರತಿಗಳನ್ನು ಹೊತ್ತು ತಂದು ಶ್ರೀ ಚೌಡೇಶ್ವರಿ ತಾಯಿಗೆ ಆರತಿ ಬೆಳಗಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುವುದು ಇಲ್ಲಿನ ಜಾತ್ರೆಯ ಆಚರಣೆಯ ವಿಶೇಷ.
ಶ್ರೀ ಚೌಡೇಶ್ವರಿ ದೇವಲಾಯದ ಅರ್ಚಕ ಮಾತನಾಡಿ, ಬೋಡಬಂಡೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀಚೌಡೇಶ್ವರಿಯು ಸುತ್ತಮುತ್ತಲಿನ ೯ ಹಳ್ಳಿಯ ಗ್ರಾಮದೇವತೆ, ಈ ದೇವಿಗೆ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಮೂರು ವರ್ಷಕ್ಕೋಮ್ಮೆ ಜಾತ್ರೆಯನ್ನು ಅದ್ಧೂರಿಯಾಗಿ ಮಾಡಲಿದ್ದು ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಮನೆಯಿಂದ ಆರತಿ ಹೊತ್ತು ತಂದು ತಾಯಿಗೆ ಬೆಳಗುತ್ತಾರೆ ಊರಿನ ಗ್ರಾಮಸ್ಥರು ವಿಶೇಷ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ತಮ್ಮ ಕಷ್ಟಗಳನ್ನು ತಾಯಿ ಬಳಿ ಹೇಳಿಕೊಳ್ಳುತ್ತಾರೆ, ಆ ತಾಯಿಯು ಸಹ ಭಕ್ತರ ಕಷ್ಟವನ್ನು ನೆರವೇರಿಸುತ್ತಾ ಬಂದಿದ್ದಾಳೆ ಈ ಭಾಗದ ರೈತರು ಉತ್ತಮ ಫಸಲು ಕಾಣಲು ದೇವಿಯ ಆಶೀರ್ವಾದವೇ ಬಹುಮುಖ್ಯ ಕಾರಣ ಎಂದು ಹೇಳಿದರು.
9 ಹಳ್ಳಿಯ ಗ್ರಾಮಸ್ಥರೆಲ್ಲಾ ಸೇರಿ 3 ವರ್ಷಕ್ಕೊಮ್ಮೆ ಶ್ರೀಚೌಡೇಶ್ವರಿ ದೇವಿಯ ಜಾತ್ರೆಯನ್ನು ಹಿರಿಯರ ಮಾರ್ಗದರ್ಶನದೊಂದಿಗೆ ಅದ್ದೂರಿಯಾಗಿ ಮಾಡಿಕೊಂಡು ಬರುತ್ತಿದ್ದೇವೆ, ೯ ಗ್ರಾಮಗಳ ಗ್ರಾಮದೇವತೆಯಾಗಿದ್ದು ಎಲ್ಲರಿಗೂ ತಾಯಿ ಆಶೀರ್ವಾದವನ್ನು ಕರುಣಿಸುತ್ತಾ ಬರುತ್ತಿದ್ದಾಳೆ ಎಂದು ಸುತ್ತೂರಿನ ಹಿರಿಯ ಗೌಡರು ತಿಳಿಸಿದರು.
ಜಲದಿ ಜಾತ್ರಾ ಮಹೋತ್ಸವದ ವಿಶೇಷ ಪೂಜೆ ವೇಳೆ ಸುತ್ತಮುತ್ತಲಿನ ಒಂಬತ್ತು ಹಳ್ಳಿಯ ಮುಖಂಡರು,ಗೌಡರು, ಗ್ರಾಮಸ್ಥರು, ರೈತರು, ಮಹಿಳೆಯರು ಹಾಜರಿದ್ದರು.