ಕಾಂಕಿಯೋ (ಪೋರ್ಚುಗಲ್): ಪೋರ್ಚುಗಲ್‌ನ ರಾಫೆರಿಯೋ ಡೊ ಅಲೆಂಟೆಜೋ ತಳಿಯ ಶ್ವಾನಕ್ಕೆ ವಿಶೇಷ ಸಂಭ್ರಮ. ಬಾಬಿ ಎಂಬ ಹೆಸರಿನ ಈ ಶ್ವಾನಕ್ಕೆ 31ನೇ ಹುಟ್ಟಿದ ಹಬ್ಬದ ಸಂಭ್ರಮ.
ಇಷ್ಟು ಮಾತ್ರವಲ್ಲ, ಅದುವೇ ಜಗತ್ತಿನ ಅತ್ಯಂತ ಹಿರಿಯ ಶ್ವಾನವಂತೆ. ಈ ಬಗ್ಗೆ ಗಿನ್ನೆಸ್ ದಾಖಲೆಗಳಲ್ಲೂ ಅದರ ಹೆಸರು ದಾಖಲಾಗಿದೆ. ಶನಿವಾರ (ಮೇ 13) ಪೋರ್ಚುಗಲ್‌ನಲ್ಲಿ ನಡೆದಿದ್ದ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಅದರಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದರು ಎಂದು ಅದರ ಮಾಲೀಕ ಲಿಯೋನೆಲ್ ಕೋಸ್ಟಾ ಹೇಳಿದ್ದಾರೆ.
ಲಿರೇರಿಯಾ ನಗರದ ಪಶುಸಂಗೋಪನಾ ಇಲಾಖೆಯ ದಾಖಲೆಗಳ ಪ್ರಕಾರ ಈ ಶ್ವಾನವನ್ನು 1992ರಲ್ಲಿ ನೋಂದಣಿ ಮಾಡಲಾಗಿತ್ತು.
ಗಿನ್ನೆಸ್ ದಾಖಲೆಗಳ ವಿಭಾಗದ ಪಶುವೈದ್ಯರು ಕೂಡ ಶ್ವಾನ, ಬಾಬಿಯನ್ನು ಪರಿಶೀಲಿಸಿ ವಯಸ್ಸು ದೃಢೀಕರಿಸಿದ್ದಾರೆ.