ಮಹಾರಾಷ್ಟ್ರ:ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯ ಹರಿಹರೇಶ್ವರ ಕರಾವಳಿ ತೀರದಲ್ಲಿ ಪತ್ತೆಯಾದ ಬೋಟ್ ನಲ್ಲಿ ಎಕೆ 47, ಸ್ಫೋಟಕ ಹಾಗೂ ಬುಲೆಟ್ಸ್ ದೊರಕಿದ್ದು, ಭಾರೀ ಪ್ರಮಾಣದ ಭಯೋತ್ಪಾದಕ ದಾಳಿ ತಪ್ಪಿದಂತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ (ಆಗಸ್ಟ್ 18) ತಿಳಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಶಂಕಿತ ಸದಸ್ಯರಿಬ್ಬರ ಬಂಧನ
ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ಪತ್ತೆಯಾದ ಹಿನ್ನೆಲೆಯಲ್ಲಿ ರಾಯ್ ಗಢ್ ಜಿಲ್ಲೆಯಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ ಎಂದು ವರದಿ ವಿವರಿಸಿದೆ.
ಹರಿಹರೇಶ್ವರ್ ಬೀಚ್ ನಲ್ಲಿ ಪತ್ತೆಯಾದ ಬೋಟ್ ನಲ್ಲಿ ಎಕೆ 47 ದೊರಕಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಧುಡೆ ಖಚಿತಪಡಿಸಿದ್ದಾರೆ. ಆದರೆ ಶಂಕಿತ ಬೋಟ್ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಧುಡೆ ತಿಳಿಸಿದ್ದಾರೆ. ಇದು ಆಸ್ಟ್ರೇಲಿಯಾ ನಿರ್ಮಿತ ಬೋಟ್ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ಹರಿಹರೇಶ್ವರ ಕಡಲತೀರ ಪ್ರವೇಶಿಸುವ ಮುನ್ನ ಬೋಟ್ ನಲ್ಲಿದ್ದವರು ಕರಾವಳಿ ಪಡೆಗೆ ಯಾವುದೇ ಮಾಹಿತಿ ನೀಡಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಹರಿಹರೇಶ್ವರ ಬೀಚ್ ಮುಂಬೈನಿಂದ 200 ಕಿಲೋ ಮೀಟರ್ ಹಾಗೂ ಪುಣೆಯಿಂದ 170 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರಕರಣದ ಬಗ್ಗೆ ಭಯೋತ್ಪಾದಕ ನಿಗ್ರಹ ದಳ ತನಿಖೆ ನಡೆಸಬೇಕೆಂದು ರಾಯ್ ಗಢ್ ಸಂಸದ ಸುನೀಲ್ ತಾತ್ಕರೆ ಆಜ್ ತಕ್ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.