ಹೊನ್ನಾವರ: ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಬೋಟ್ ವೊಂದು ಇಲ್ಲಿನ ಅಳಿವೆಯಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುರವಾರ ನಡೆದಿದೆ.
ಬೋಟ್ ನಲ್ಲಿ 25 ಮೀನುಗಾರರಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ವರದಿಯಾಗಿದೆ.
ಸೈಂಟ್ ಅಂತೋನಿ ಎಂಬ ಹೆಸರಿನ ಬೋಟ್ ಮುಳುಗಡೆಯಾಗಿದ್ದು, ಬೆಳಿಗ್ಗೆ ಮೀನುಗಾರಿಕೆಗೆ ತೆರಳುವ ವೇಳೆ ಈ ದುರಂತ ಸಂಭವಿಸಿದೆ. ಘಟನೆ ನಡೆಯತ್ತಿದ್ದಂತೆ ಇತರ ಬೋಟ್ ನಲ್ಲಿದ್ದ ಮೀನುಗಾರರು 25 ಮಂದಿಯನ್ನು ರಕ್ಷೆ ಮಾಡಿದ್ದಾರೆ.
ಸದ್ಯ ಮುಳುಗಡೆಯಾಗಿರುವ ಬೋಟ್ ಅನ್ನು ಮೇಲಕ್ಕೆತ್ತಲು ಪ್ರಯತ್ನ ನಡೆಸಲಾಗುತ್ತಿದೆ.
ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಜನ್ಮಾಷ್ಟಮಿ ; ರವಿ ಕಟಪಾಡಿಯ ವಿನೂತನ ವೇಷ
ಹೊನ್ನಾವರ ಸಮುದ್ರದ ಅಳಿವೆಯಲ್ಲಿ ಹೂಳು ತುಂಬಿದ್ದರಿಂದ, ಇಂತ ಘಟನೆಗಳು ಪದೇ ಪದೆ ಮರುಕಳಿಸುತ್ತಿದೆ.