Advertisement

ಬೋಟ್‌ ನಾಪತ್ತೆಯಾಗಿ 53 ದಿನ; ಇನ್ನೂ ನಿಗೂಢ

12:30 AM Feb 07, 2019 | Team Udayavani |

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್‌ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ 53 ದಿನ ಕಳೆದು ಹೋದರೂ ಇನ್ನೂ ಮಹತ್ವದ ಸುಳಿವು ಸಿಕ್ಕಿಲ್ಲ. ಮೀನುಗಾರರು ಎಲ್ಲಿ ಹೋದರು? ಏನಾದರು? ಎಂಬುದು ನಿಗೂಢವಾಗಿಯೇ ಉಳಿದಿದ್ದು ಮನೆ ಮಂದಿ  ಕೊರಗುತ್ತಾ ಇದ್ದಾರೆ.

Advertisement

ಕ್ಯಾಬಿನ್‌ ಪತ್ತೆ
ಮಹಾರಾಷ್ಟ್ರದ ಮಾಲ್ವಾಣ್‌ ಸಮೀಪ ಅಲ್ಲಿನ ಮೀನುಗಾರರಿಗೆ ಸಮುದ್ರದ ಮಧ್ಯೆ ಬೋಟಿನ ಕ್ಯಾಬಿನ್‌ನ ಮೇಲ್ಛಾವಣಿ ಸಮುದ್ರದಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದು, ಅದು ಸುವರ್ಣ ತ್ರಿಭುಜ ಬೋಟಿನದ್ದಾಗಿರಬಹುದೇ ಎಂದು ಖಚಿತಪಡಿಸಲು ನಾಪತ್ತೆಯಾದ ಮೀನುಗಾರರ ಸಂಬಂಧಿಕರಿಗೆ ಚಿತ್ರವನ್ನು ಕಳುಹಿಸಲಾಗಿದೆ. ಆದರೆ ಅವರು ಅದನ್ನು ಅಲ್ಲಗಳೆದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಪಷ್ಟ ಮಾಹಿತಿ ನೀಡಿಲ್ಲ
ನೌಕಾಪಡೆಗೆ ತಳಭಾಗದಲ್ಲಿ ಸಿಕ್ಕಿರುವ ವಸ್ತು ಯಾವುದೆಂದು ಇದುವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ನಾಳೆ, ನಾಳಿದ್ದು ಎಂದು ದಿನ ದೂಡುತ್ತಾ ಇದ್ದಾರೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವರು ನೌಕಾದಳ ವನ್ನು ಸಂಪರ್ಕಿಸಿ ಮಾಹಿತಿ ಪಡೆದು ತಿಳಿಸುವಂತೆ ಜನಪ್ರತಿ ನಿಧಿಗಳನ್ನು ಆಗ್ರಹಿಸುತ್ತಿದ್ದೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next