Advertisement

ಬಂಡೆಗೆ ಬಡಿದು ಬೋಟ್‌ ಮುಳುಗಡೆ : 7 ಮೀನುಗಾರರ ರಕ್ಷಣೆ

10:05 AM May 23, 2023 | Team Udayavani |

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಸೋಮ ವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸಮೀಪ ದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ.

Advertisement

ಉದ್ಯಾವರ ಸಂಪಿಗೆನಗರದ ರಾಹಿಲ್‌ ಅವರಿಗೆ ಸೇರಿದ ಸೀ ಬರ್ಡ್‌ ಬೋಟ್‌ ಮೇ 21ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಾಳಿ-ಮಳೆ ಆರಂಭವಾಗಿದ್ದು, ಪರಿಣಾಮ ನಾವಿಕನ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಬಡಿಯಿತು. ಈ ವೇಳೆ ನೀರು ಒಳಗೆ ತುಂಬಿ ಬೋಟ್‌ ಮುಳುಗಲಾರಂಭಿಸಿತ್ತು.

ಸಮೀಪದಲ್ಲಿದ್ದ ಪವನ ಪುತ್ರ 111 ಬೋಟಿನವರು ಧಾವಿಸಿ ಬಂದು ಈ ಬೋಟನ್ನು ಹಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನ ಪಟ್ಟರು. ಆಗ ಹಗ್ಗ ತುಂಡಾಗಿ ಬೋಟು ಸಂಪೂರ್ಣ ಮುಳುಗಡೆಗೊಂಡಿತು.

ಬೋಟಿನಲ್ಲಿದ್ದ ಏಳೂ ಮಂದಿಯನ್ನು ರಕ್ಷಿಸಿ ಮಲ್ಪೆ ಬಂದರಿಗೆ ಕರೆ ತರಲಾಗಿದೆ. ಸುಮಾರು 45 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next