Advertisement

ಕೃಷ್ಣೆಯಲ್ಲಿ ಮಗುಚಿ ಬಿದ್ದ ದೋಣಿ: ಸುದೈವವಶಾತ್ ತಪ್ಪಿದ ದುರಂತ

09:56 PM Feb 22, 2023 | Team Udayavani |

ವಿಜಯಪುರ : ಜಿಲ್ಲೆಯ ಕೃಷ್ಣಾ ನದಿಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮಗುಚಿ ಬಿದ್ದರೂ, ಸುದೈವವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನುಹುತ ತಪ್ಪಿದೆ.

Advertisement

ಬುಧವಾರ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮಠಕ್ಕೆ ದರ್ಶನಕ್ಕೆ ಬಂದಿದ್ದ ಬಾಗಲಕೋಟ ಜಿಲ್ಲೆಯ ಭಕ್ತರು, ತೆಪ್ಪದ ಸಹಾಯದಿಂದ ಕೃಷ್ಣಾ ನದಿ ದಾಟುತ್ತಿದ್ದರು. ಈ ಹಂತದಲ್ಲಿ ಸಾಮರ್ಥ್ಯ ಮೀರಿ ಭಕ್ತರು ದೋಣಿ ಏರಿದ್ದರಿಂದ ಕೃಷ್ಣಾ ನದಿ ತೀರದಲ್ಲೇ ಪಲ್ಟಿಯಾಗಿದೆ.

ಸುದೈವವಶಾತ್ ನದಿಯ ತೀರದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ರಭಸ ಹಾಗೂ ನೀರಿನ ಆಳ ಕಡಿಮೆ ಇತ್ತು. ಕಾರಣ ಸಂಭವನೀಯ ದುರಂತ ತಪ್ಪಿದೆ.

ಬಬಲಾದಿಯ ಸದಾಶಿವ ಮಠದ‌ ಜಾತ್ರೆ ಮುಗಿಸಿಕೊಂಡು ಬಬಲಾದಿ ಮತ್ತು ಮುಂಡಗನೂರು ನಡುವೆ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ಭಕ್ತರು ಊರಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿತ್ತು.

ತೆಪ್ಪ ವಾಲುತ್ತಲೇ ತೆಪ್ಪದಲ್ಲಿ ಅಂಚಿನಲ್ಲಿ ಕುಳಿತವರು ನದಿಗೆ ಹಾರಿದ್ದು, ಜನರ ಒತ್ತಡಕ್ಕೆ ತೆಪ್ಪ ನದಿಯಲ್ಲಿ ಮಗುಚಿ ಬಿದ್ದಿದೆ. ಆದರೆ ನದಿಗೆ ಬಿದ್ದವರು ಹತ್ತಿರದಲ್ಲೇ ತೀರ ಇದ್ದ ಕಾರಣ ಈಜಿ ದಡ ಸೇರಿದ್ದಾರೆ. ಇದರಿಂದ ದುರಂತ ತಪ್ಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next