Advertisement
ಹೇಗಿದೆ ಎಂ8 ಕೂಪ್?: ಎಂಟು ಸಿಲಿಂಡರ್‌ನ 4 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಬಿಎಂಡಬ್ಲ್ಯೂ ಉತ್ಪಾದಿಸಿದ ಎಂಜಿನ್‌ಗಳಲ್ಲೇ ಅತಿ ಬಲಿಷ್ಠ. ಕೇವಲ 3.3 ಸೆಕೆಂಡ್‌ಗಳಲ್ಲಿ ಕಾರನ್ನು 0ಯಿಂದ 100 ಕಿ.ಮೀ. ವೇಗಕ್ಕೆ ಎತ್ತಬಹುದು. ಇನ್ನು ಗ್ರ್ಯಾನ್ ಕೂಪ್, 6 ಸಿಲಿಂಡರ್‌ನ 3 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 5.2 ಸೆಕೆಂಡ್‌ಗಳಲ್ಲಿ0ಯಿಂದ 100 ಕಿ.ಮೀ. ವೇಗಕ್ಕೆ ಪರಿವರ್ತಿಸಬಹುದು. ಎರಡೂ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳಿವೆ. ಇದನ್ನೂ ಸೇರಿ ಗ್ರಾಹಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ.