ಬೆಂಗಳೂರು: ಕೊರೊನಾ ಹಾವಳಿ ನಡುವೆ ಬಹುತೇಕರು ಈಗಕೆಲಸಕ್ಕೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ಲಾಕ್‌ಡೌನ್ ನೆಪದಲ್ಲಿ ಕೆಲವರು ತಮ್ಮ ಸ್ವಂತ ಊರುಗಳಲ್ಲಿ ಹಳೆಯನೆನಪುಗಳೊಂದಿಗೆ ಹಾಯಾಗಿದ್ದಾರೆ.ಆದರೆ, ಇಲ್ಲೊಬ್ಬ ಬಿಎಂಟಿಸಿ ಚಾಲಕ ತಮ್ಮ ಕರ್ತವ್ಯದ ಜತೆಗೆಗಂಟೆಗಟ್ಟಲೆ ಹತ್ತಾರು ಬಸ್‌ಗಳನ್ನು ನಿತ್ಯ ಸ್ವತ್ಛಗೊಳಿಸುವಮೂಲಕ ಪರೋಕ್ಷವಾಗಿ ಪ್ರಯಾಣಿಕರು ಮತ್ತುಸಹೋದ್ಯೋಗಿಗಳ ರಕ್ಷಣೆ ಮಾಡುತ್ತಿದ್ದಾರೆ!
ಹೆಸರು ಪಿ.ರಂಗನಾಥ್.ಡಿಪೋ 37 (ಕೆಂಗೇರಿ)ರಲ್ಲಿಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯಎಂಟು-ಹತ್ತು ತಾಸುಕರ್ತವ್ಯ ನಿರ್ವಹಿಸುತ್ತಾರೆ. ಚಾಲನೆ ಕೆಲಸ ಮುಗಿಯುತ್ತಿದ್ದಂತೆಹೆಗಲಿಗೆ ಸ್ಯಾನಿಟೈಸರ್ ಟ್ಯಾಂಕ್‌ಗಳನ್ನು ಹಾಕಿಕೊಂಡು, ತಮ್ಮಮತ್ತು ಸಹೋದ್ಯೋಗಿಗಳು ಡಿಪೋಗೆ ತಂದು ನಿಲ್ಲಿಸುವ ಹತ್ತಾರು ಬಸ್‌ಗಳನ್ನು ಶುಚಿಗೊಳಿಸಲು ಸಜ್ಜಾಗುತ್ತಾರೆ.ಸುಮಾರು ಎರಡರಿಂದ ಮೂರು ತಾಸು ನಿತ್ಯ ತಪ್ಪದೆ ಈಕಾರ್ಯ ನಡೆಯುತ್ತದೆ.
ಹೋರಾಟದಲ್ಲೊಂದು ಅಳಿಲು ಸೇವೆ:ಸಾಮಾನ್ಯವಾಗಿ ಎಲ್ಲ ಡಿಪೋಗಳಲ್ಲಿ ಬಸ್‌ಗಳನ್ನು ಸ್ಯಾನಿಟೈಸ್‌ಮಾಡಲಿಕ್ಕಾಗಿಯೇ ಜನ ಇರುತ್ತಾರೆ. ಅದೇ ರೀತಿ, ಕೆಂಗೇರಿಡಿಪೋದಲ್ಲೂ ಇದಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಆದರೆ, ಅವರ ಜತೆಗೆ ಮತ್ತೂಬ್ಬ ಚಾಲಕರು ನಿತ್ಯಹಾಜರಿರುತ್ತಾರೆ. ಅವರೇ ಪಿ. ರಂಗನಾಥ್. ಇದಕ್ಕೆ ಏನುಪ್ರೇರಣೆ ಎಂದು ಪ್ರಶ್ನಿಸಿದಾಗ ಅವರು ಹೇಳುವುದು ಹೀಗೆ-“ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾವಿರಾರುಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ನಮ್ಮ ಸಾರಿಗೆ ಸಿಬ್ಬಂದಿ ಹಾಗೂ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರೂ ಇದ್ದಾರೆ.
ಅವರಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ನಮ್ಮ ಮನೆಯ ಸ್ವಂತವಾಹನಗಳಂತೆ ಸ್ಯಾನಿಟೈಸ್ ಮಾಡುತ್ತೇನೆ. ಲಕ್ಷಾಂತರ ಜನಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ. ಆ ಹೋರಾಟದಲ್ಲಿಇದು ನನ್ನ ಅಳಿಲು ಸೇವೆ ಎಂದು ನಾನು ಭಾವಿಸಿದ್ದೇನೆ ಸರ್’.”ಲಾಕ್‌ಡೌನ್‌ಗೂ ಮುನ್ನ ಡಿಪೋದಿಂದ ನಿತ್ಯ 50ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದವು. ಆ ಪೈಕಿ35ರಿಂದ 40 ಬಸ್‌ಗಳನ್ನು ನಾನೊಬ್ಬನೇ ಸ್ಯಾನಿಟೈಸ್‌ಮಾಡುತ್ತಿದ್ದೆ. ಈಗ ಕೇವಲ ಐದರಿಂದ ಹತ್ತು ಬಸ್‌ಗಳುಕಾರ್ಯಾಚರಣೆ ಆಗುತ್ತವೆ. ಅವೆಲ್ಲವನ್ನೂ ಸ್ವತ್ಛಗೊಳಿಸುತ್ತೇನೆ.ಉಳಿದ ಸಿಬ್ಬಂದಿ, ಅವುಗಳ ನಿರ್ವಹಣೆ, ಡೀಸೆಲ್ ತುಂಬಿಸುವಕೆಲಸ ಮಾಡುತ್ತಾರೆ’ ಎಂದರು.
ಇದಲ್ಲದೆ, ಡಿಪೋ ಆವರಣದಲ್ಲಿ ಸುಮಾರು 60- 80 ಅಡಿಜಾಗದಲ್ಲಿ ಉದ್ಯಾನವನ್ನೂ ಹಲವು ವರ್ಷಗಳಿಂದ ರಂಗನಾಥ್‌ನಿರ್ವಹಣೆ ಮಾಡುತ್ತಿದ್ದಾರೆ. ಆ ಪುಟ್ಟ ಜಾಗದಲ್ಲಿ ನೆಲ್ಲಿಕಾಯಿ,ಬೆಟ್ಟದ ನೆಲ್ಲಿಕಾಯಿ, ನೇರಳೆ, ಸೀಬೆ, ಬಾಳೆ, ನುಗ್ಗೆ, ಮಲ್ಲಿಗೆ,ದಾಸವಾಳ, ತುಳಸಿ, ಕರಿಬೇವು, ಮಾವು ಬೆಳೆದಿದ್ದಾರೆ.