Advertisement

ಬಿಎಂಟಿಸಿ ವಿದ್ಯಾರ್ಥಿ ಬಸ್‌ ಪಾಸ್‌ ನಾಳೆಯಿಂದ ವಿತರಣೆ

12:23 PM Jun 11, 2017 | |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಜೂನ್‌ 12ರಿಂದ ವಿದ್ಯಾರ್ಥಿಗಳ ರಿಯಾಯ್ತಿ ಪಾಸ್‌ಗಳನ್ನು ವಿತರಿಸಲಿದೆ. ಈ ಬಾರಿ ಪೂರ್ವಮುದ್ರಿತ , ಸ್ಮಾರ್ಟ್‌ ಕಾರ್ಡ್‌ ವಿಧಾನದಲ್ಲಿ ಪಾಸ್‌ ನೀಡಲಾಗುತ್ತಿದೆ. ಸೋಮವಾರದಿಂದ ಪೂರ್ವಮುದ್ರಿತ ಮತ್ತು ಜೂನ್‌ 17ರಿಂದ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗುವುದು.

Advertisement

ಈ ಪ್ರಕ್ರಿಯೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹಂತ-ಹಂತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ಸ್ಮಾರ್ಟ್‌ ಕಾರ್ಡ್‌ “ಚತುರ ಸಾರಿಗೆ ವ್ಯವಸ್ಥೆ’ (ಐಟಿಎಸ್‌) ಯೋಜನೆಯ ಭಾಗವಾಗಿದ್ದು, ಅದಕ್ಕೆ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

ಪೂರ್ವಮುದ್ರಿತ ಬಸ್‌ ಪಾಸ್‌ ಹೊಂದಿದ ವಿದ್ಯಾರ್ಥಿಗಳು ಕೂಡ ತದನಂತರದಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಯಾವುದೇ ಶುಲ್ಕ ಇಲ್ಲದೆ ಪಡೆಯಬಹುದು. ಪಾಸ್‌ನ ನಿಗದಿತ ಅವಧಿ ಮುಗಿಯುತ್ತಿದ್ದಂತೆ, ಎಂದಿನಂತೆ ನವೀಕರಿಸಿಕೊಳ್ಳಬಹುದು. 

ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ: ಪೂರ್ವಮುದ್ರಿತ ಬಸ್‌ ಪಾಸುಗಳನ್ನು ಪಡೆದ ವಿದ್ಯಾರ್ಥಿಗಳು, ಸದರಿ ಪಾಸುಗಳನ್ನು ಸ್ಮಾರ್ಟ್‌ ಕಾರ್ಡ್‌ ವಿತರಣಾ ಕೇಂದ್ರಗಳಲ್ಲಿ ಆಗಸ್ಟ್‌ 1ರಿಂದ ಸೆಪ್ಟೆಂಬರ್‌ 30ರ ಒಳಗೆ ಸ್ಮಾರ್ಟ್‌ಕಾರ್ಡ್‌ ಬಸ್‌ಪಾಸ್‌ಗೆ ಬದಲಾಯಿಸಿಕೊಳ್ಳುವುದು ಕಡ್ಡಾಯ. ಪೂರ್ವ ಮುದ್ರಿತ ಬಸ್‌ ಪಾಸನ್ನು ಸ್ಮಾರ್ಟ್‌ ಕಾರ್ಡ್‌ಗೆ ಬದಲಾವಣೆ ಮಾಡಿಕೊಳ್ಳುವಾಗ 130 ರೂ. ಒಟ್ಟು ಶುಲ್ಕವನ್ನು (ಸಂಸ್ಕರಣಾ ಹಾಗೂ ಇತರೆ ಶುಲ್ಕಗಳು) ಮತ್ತೆ ಪಾವತಿಸುವ ಅಗತ್ಯರುವುದಿಲ್ಲ.

ಕೆಂಪೇಗೌಡ ಬಸ್‌ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಜಯನಗರ ಟಿಟಿಎಂಸಿ, ಶಿವಾಜಿನಗರ ಬಸ್‌ ನಿಲ್ದಾಣ, ಯಶವಂತಪುರ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ಕಲ್ಯಾಣನಗರ ಬಸ್‌ ನಿಲ್ದಾಣದಲ್ಲಿ ಪಾಸುಗಳನ್ನು ವಿತರಿಸಲಾಗುವುದು.

Advertisement

ಇದಲ್ಲದೆ, 35 ಪಾಸು ವಿತರಣಾ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ (ಭಾನುವಾರ ರಜಾ ದಿನಗಳನ್ನು ಹೊರತುಪಡಿಸಿ) ಪಾಸುಗಳನ್ನು ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಸರ್ಕಾರದ ಸೂಚನೆ ಮೇರೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next