Advertisement
– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಲವು ಘಟಕ ಗಳಲ್ಲಿ ಕೆಲ ಅಧಿಕಾರಿಗಳು ಇಂತಹದ್ದೊಂದು ಅಲಿಖೀತ ನಿಯಮ ಮಾಡಿಕೊಂಡಿದ್ದಾರೆ. ಇದು ನೌಕರರಿಗೆ ಅದರಲ್ಲೂ ವಿಶೇಷವಾಗಿ ಚಾಲನಾ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಹಾಜರಾತಿಗೆ ಆನ್‌ಲೈನ್ ವ್ಯವಸ್ಥೆ? : ನೌಕರರಿಗೆ ರಜೆ ಮಂಜೂರು ಅಥವಾ 55 ವರ್ಷ ಮೇಲ್ಪಟ್ಟ ನೌಕರರಿಗೆ ಲಘು ಕರ್ತವ್ಯ ನೀಡುವ ವಿಚಾರದಲ್ಲಿ ಪಾರದರ್ಶಕತೆ ತರಲು ಬಿಎಂಟಿಸಿಯು ಆನ್ ಲೈನ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಪ್ರಸ್ತುತ ಮ್ಯಾನುವಲ್ ಆಗಿ ಹಾಜರಾತಿ ಅಪ್‌ಡೇಟ್ ಮಾಡಲಾಗುತ್ತಿದೆ. ಇದರಲ್ಲಿ ಅಕ್ರಮ ಎಸಗಲು ಅವಕಾಶ ಇದ್ದು, ಕೆಲವೊಮ್ಮೆ ಕರ್ತವ್ಯಕ್ಕೆ ಹಾಜರಾದ ಐದಾರು ದಿನಗಳ ನಂತರವೂ ಅಪ್‌ಡೇಟ್ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿ, ಪಾರದರ್ಶಕತೆ ತರಲಾಗುತ್ತಿದೆ ಎಂದು ಬಿಎಂಟಿಸಿ ಐಟಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಆನ್‌ಲೈನ್ ಡ್ಯೂಟಿ : ಕೆಲ ಘಟಕಗಳ ವ್ಯಾಪ್ತಿಯಲ್ಲಿ ಅನಧಿಕೃತ “ಆನ್‌ಲೈನ್ ಡ್ಯೂಟಿ’ ಪದ್ಧತಿ ಜಾರಿ ಇದೆ. ಹಲವು ಘಟಕಗಳಲ್ಲಿ ಬಸ್ ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿಲ್ಲ. ಆದರೆ, ಸಿಬ್ಬಂದಿ ಹಾಜರಾತಿ ಭರ್ತಿಯಾಗಿದೆ. ಡ್ಯೂಟಿಗಾಗಿ “ಕ್ಯೂ’ ನಿಲ್ಲಬೇಕಾಗಿದೆ. ಮತ್ತೂಂದೆಡೆ ಎಲ್ಲರಿಗೂ ಡ್ಯೂಟಿ ನೀಡುವುದೂ ಸವಾಲಾಗುತ್ತಿದೆ. ಇದನ್ನು ಆದಾಯ ಮಾರ್ಗವಾಗಿ ಪರಿವರ್ತಿಸಿಕೊಂಡ ಕೆಲ ಅಧಿಕಾರಿಗಳು, ಆನ್‌ಲೈನ್ ಡ್ಯೂಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೊದಲೇ ಅಧಿಕಾರಿಗೆ ಕರೆ ಮಾಡಿ ಡ್ನೂಟಿ ನೀಡುವಂತೆ ಕೋರಲಾಗುತ್ತದೆ. ಇದಕ್ಕೆ ಹಣವನ್ನೂ ನೀಡಲಾಗುತ್ತದೆ. ಪ್ರತಿಯಾಗಿ ಆತ ಕರ್ತವ್ಯಕ್ಕೆ ಆಗಮಿಸುತ್ತಿದ್ದಂತೆ ಮಾರ್ಗಪತ್ರ (ಡ್ಯೂಟಿ ಶೀಟ್) ನೀಡಿ ಕಳುಹಿಸಲಾಗುತ್ತದೆ. ಉಳಿದವರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದರೂ ಡ್ನೂಟಿ ಸಿಗುವುದಿಲ್ಲ ಎಂದು ಉತ್ತರ ವಿಭಾಗದ ನಿರ್ವಾಹಕರೊಬ್ಬರು ಅಲವತ್ತುಕೊಂಡರು.
ನಿರ್ದಾಕ್ಷಿಣ್ಯ ಕ್ರಮ; ಎಂಡಿ ಎಚ್ಚರಿಕೆ : “ಈ ವಿಚಾರದಲ್ಲಿ ಆರಂಭದಲ್ಲಿ ನೌಕರರೂ ತುಸು ಎಡವಿದ್ದಾರೆ. ಕೆಲವರು ಅಧಿಕಾರಿಗಳಿಗೆ ಹಣ ನೀಡಿ ರಜೆ ಮಂಜೂರು ಅಥವಾ ಡ್ನೂಟಿ ಹಾಕಿಸಿಕೊಂಡಿದ್ದಾರೆ. ಇದನ್ನೇ ಎಲ್ಲರಿಗೂ ಅನುಸರಿಸಿ, ಕೆಲವರು ಪರಿಸ್ಥಿತಿಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. “ಅದೇನೇ ಇರಲಿ, ಈ ರೀತಿ ರಜೆ ಮಂಜೂರು ಮಾಡಲು ಹಣ ಪಡೆಯುವುದು ಮತ್ತು ಕೊಡುವುದು ತಪ್ಪು. ಈಗಾಗಲೇ ಎಲ್ಲ ವಿಭಾಗಗಳ ಪರಿಶೀಲನೆ ಪೂರ್ಣಗೊಳಿಸಿದ್ದು, ಎಲ್ಲಿಯೂ ಇಂತಹ ದೂರುಗಳು ಕೇಳಿಬಂದಿಲ್ಲ. ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಬಂದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿ. ಶಿಖಾ ಸ್ಪಷ್ಟಪಡಿಸಿದ್ದಾರೆ.
ವಿಜಯಕುಮಾರ್ ಚಂದರಗಿ