Advertisement
ಹೌದು, ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಅಥವಾ ಲೀಸ್ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಧೋರಣೆಯು ಈಗ ನಷ್ಟದಲ್ಲಿ ಪರಿಣಮಿಸುತ್ತಿದೆ. ಟೆಂಡರ್ ಕರೆಯಲಾದ ಕೇವಲ 80 ಎಲೆಕ್ಟ್ರಿಕ್ ಬಸ್‌ಗಳನ್ನೇ ಸರ್ಕಾರ ತಕ್ಷಣ ರಸ್ತೆಗಿಳಿಸಿದರೂ ನಿಗಮಕ್ಕೆ ಆಗುತ್ತಿರುವ ಈ ಹೆಚ್ಚುವರಿ ನಷ್ಟವನ್ನು ತಪ್ಪಿಸಬಹುದು.
Related Articles
Advertisement
ಅಂದರೆ, ಎರಡೂ ಮಾದರಿ ಬಸ್‌ಗಳ ನಿರ್ವಹಣಾ ವೆಚ್ಚದಲ್ಲಿ ಕ್ರಮವಾಗಿ 30ರೂ. ಹಾಗೂ 15 ರೂ. ವ್ಯತ್ಯಾಸ ಇದೆ. ಪ್ರತಿ ದಿನ ಒಂದು ಬಸ್ ಕನಿಷ್ಠ 200 ಕಿ.ಮೀ. ಕಾರ್ಯಾಚರಣೆ ಮಾಡುತ್ತದೆ. ಇದರೊಂದಿಗೆ ನಿರ್ವಹಣಾ ವೆಚ್ಚದ ಅಂತರವನ್ನು ಲೆಕ್ಕಹಾಕಿದರೆ, ಆ ಮೊತ್ತ ನಾಲ್ಕು ಲಕ್ಷ ರೂ. ದಾಟುತ್ತದೆ ಎಂದು ನಿಗಮದ ತಜ್ಞರು ಅಂದಾಜಿಸುತ್ತಾರೆ.
ಕಳೆದ ಐದು ತಿಂಗಳ ನಷ್ಟದ ಬಾಬ್ತು ನಾಲ್ಕು ಕೋಟಿ ರೂ. ದಾಟುತ್ತದೆ. ಇದು 8-10 ಡೀಸೆಲ್ ಆಧಾರಿತ ಸಾಮಾನ್ಯ ಬಸ್‌ಗಳ ಖರೀದಿ ಮೊತ್ತಕ್ಕೆ ಸಮವಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಿಗಮವು ಇದರಿಂದ ಹೊರಬರಲು ಪ್ರಯಾಣ ದರ ಏರಿಕೆ ಬರೆ ಎಳೆಯಲು ಮುಂದಾಗಿದೆ. ಮತ್ತೂಂದೆಡೆ ತನ್ನ ವಿಳಂಬ ಧೋರಣೆಯಿಂದ ಆರ್ಥಿಕ ಹೊರೆ ಅನುಭವಿಸುತ್ತಿದೆ.
ಹೆಚ್ಚು-ಕಡಿಮೆ ಕಳೆದ ಒಂದೂವರೆ ವರ್ಷದಿಂದ ಬಿಎಂಟಿಸಿಯು ಎಲೆಕ್ಟ್ರಿಕ್ ಬಸ್ ಖರೀದಿ ಮಾಡಬೇಕೇ ಅಥವಾ ಗುತ್ತಿಗೆ ಪಡೆದು ರಸ್ತೆಗಿಳಿಸಬೇಕೇ ಎಂಬ ಗೊಂದಲದಲ್ಲೇ ಕಾಲಹರಣ ಮಾಡುತ್ತಿದೆ. ಅಂತಿಮವಾಗಿ ಹಿಂದಿನ ಸರ್ಕಾರದಲ್ಲಿ ಹತ್ತು ವರ್ಷ “ಲೀಸ್’ನಲ್ಲಿ ಪಡೆಯಲು ನಿರ್ಧರಿಸಿತು.
2017ರ ಅಂತ್ಯದಲ್ಲಿ ಟೆಂಡರ್ ಕೂಡ ಕರೆಯಿತು. ಇದಕ್ಕೆ ಸಬ್ಸಿಡಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ಪಡೆದಿದ್ದೂ ಆಯ್ತು. ಆದರೆ, ಹೊಸ ಸರ್ಕಾರದಲ್ಲಿ ಈ ಮಾದರಿಗೆ ಅಪಸ್ವರ ಕೇಳಿಬರುತ್ತಿದೆ. ಖರೀದಿಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ, ಎಲೆಕ್ಟ್ರಿಕ್ ಬಸ್ ಸೇವೆ ಮತ್ತಷ್ಟು ವಿಳಂಬವಾಗುವುದು ಖಚಿತ.
ಮರುಪರಿಶೀಲನೆಗೆ ಸೂಚನೆ; ಸಚಿವ: “ಪ್ರಸ್ತುತ ಎಲೆಕ್ಟ್ರಿಕ್ ಬಸ್‌ಗಳನ್ನು ಲೀಸ್‌ನಲ್ಲಿ ತೆಗೆದುಕೊಂಡು ಸೇವೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಆದರೆ, ಕೇವಲ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಲ್ಲದೆ, ಇನ್ನೂ ಕಡಿಮೆ ದರದಲ್ಲಿ ಸೇವೆ ಸಿಗುವ ಸಾಧ್ಯತೆ ಇದೆ. ಹಾಗಾಗಿ, ಈ ನಿಟ್ಟಿನಲ್ಲಿ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಅಷ್ಟೇ ಅಲ್ಲ, ಲೀಸ್ ಪಡೆದ ಬಸ್‌ಗಳ ನಿರ್ವಹಣೆಗೆ ಬಿಎಂಟಿಸಿ ಜಾಗವನ್ನು ಕೊಡಬೇಕಾಗುತ್ತದೆ. ಸಂಸ್ಥೆಗೆ ಇರುವ ಆಸ್ತಿ ಎಂದರೆ ಈ ಭೂಮಿ. ಇದನ್ನೂ ನಿರ್ವಹಣೆ ನೆಪದಲ್ಲಿ ಕೊಟ್ಟರೆ, ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಮೊದಲ ಹಂತದಲ್ಲಿ ನಾವೇ (ಬಿಎಂಟಿಸಿ) ಯಾಕೆ ಬಸ್‌ಗಳನ್ನು ಖರೀದಿಸಬಾರದು ಎಂಬ ಆಲೋಚನೆಯೂ ಇದೆ ಎಂದು ಸಚಿವರು ಮಾಹಿತಿ ನೀಡಿದರು.
ಖರೀದಿ ಮತ್ತೂಂದು ಹಗರಣವಾದರೆ, ಯಾರು ಹೊಣೆ?: ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಬಗ್ಗೆ ಸಚಿವರು ಒಲವು ತೋರುತ್ತಿರುವ ಬೆನ್ನಲ್ಲೇ ಇಂತಹದ್ದೊಂದು ಪ್ರಶ್ನೆ ಕೇಳಿಬರುತ್ತಿದೆ. ಈ ಹಿಂದೆ 98 ಮಾರ್ಕೊಪೋಲೊ ಬಸ್‌ಗಳನ್ನು ಖರೀದಿಸಲಾಗಿತ್ತು. ಕೆಲವೇ ದಿನಗಳಲ್ಲಿ ಬಸ್‌ಗಳಲ್ಲಿ ದೋಷ ಕಂಡುಬಂದು, ಗುಜರಿಗೆ ಹಾಕಲಾಯಿತು. ಇದರಿಂದ ಕೋಟ್ಯಂತರ ರೂ. ನಷ್ಟವನ್ನೂ ಅನುಭವಿಸಬೇಕಾಯಿತು.
ಎಲೆಕ್ಟ್ರಿಕ್ ಬಸ್‌ಗಳ ಖರೀದಿಯಲ್ಲೂ ಇದು ಪುನರಾವರ್ತನೆಯಾದರೆ, ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ. ಇದೇ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಲೀಸ್‌ನಲ್ಲಾದರೆ ಇದಾವುದರ ಕಿರಿಕಿರಿ ಇರುವುದಿಲ್ಲ. ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಗುತ್ತಿಗೆ ಪಡೆದ ಕಂಪನಿ ಮೇಲೆ ಇರುತ್ತದೆ. ಸಂಸ್ಥೆಗೆ ಎಂದಿನಂತೆ ಸೇವೆ ಜತೆಗೆ ಉಳಿತಾಯ ಆಗಲಿದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ.
1 ರೂ. ಹೆಚ್ಚಾದರೂ 1 ಕೋಟಿ ಹೊರೆ!: ಈ ಮಧ್ಯೆ ಡೀಸೆಲ್ ಬೆಲೆ 1 ರೂ. ಹೆಚ್ಚಳವಾದರೂ ಬಿಎಂಟಿಸಿಗೆ ಒಂದು ತಿಂಗಳಿಗೆ ಒಂದು ಕೋಟಿ ರೂ. ಹೊರೆ ಆಗುತ್ತದೆ. ಕಳೆದ ಒಂದು ವರ್ಷದ ಅಂತರದಲ್ಲಿ ಡೀಸೆಲ್ ಬೆಲೆ 13 ರೂ. ಏರಿಕೆ ಕಂಡುಬಂದಿದೆ. 2017ರ ಸೆಪ್ಟೆಂಬರ್‌ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀ.ಗೆ 56.27 ರೂ. ಇತ್ತು. ಆಗಸ್ಟ್ ಅಂತ್ಯಕ್ಕೆ 69.67 ರೂ. ತಲುಪಿದೆ. ಒಂದು ತಿಂಗಳಿಗೆ ಬಿಎಂಟಿಸಿ ಒಂದು ಕೋಟಿ ಲೀ. ಡೀಸೆಲ್ ಖರೀದಿಸುತ್ತದೆ.
ಡೀಸೆಲ್ ಆಧಾರಿತ ಬಸ್ ಮತ್ತು ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣಾ ವೆಚ್ಚ ಹೀಗಿದೆಬಸ್ ಮಾದರಿ ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ
-ವೋಲ್ವೊ 85 ರೂ.
-ಸಾಮಾನ್ಯ ಬಸ್ 55 ರೂ.
-ಎಸಿ ಎಲೆಕ್ಟ್ರಿಕ್ 54.55 ರೂ.
-ನಾನ್ ಎಸಿ ಎಲೆಕ್ಟ್ರಿಕ್ 40.03 ರೂ. * ವಿಜಯಕುಮಾರ್ ಚಂದರಗಿ