ಬೆಂಗಳೂ ರು: ಕೋವಿಡ್ ಎರಡನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದಲ್ಲಿ ಆ್ಯಂಬುಲೆ ನ್ಸ್ ಗಳ ನಿರ್ವ ಹಣೆ ಮತ್ತು ಮೇಲ್ವಿಚಾರಣೆಗೆ ಬಿಎಂಟಿಸಿ ತನಿಖಾ ದಳದ 12 ಜನ ಅಧಿಕಾರಿಗಳ ನೆರವು ಪಡೆದುಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಕ್ಕೆ ಒಬ್ಬರು ತನಿಖಾಧಿಕ ರಿ ಹಾಗೂ ಬಿಬಿ ಎಂಪಿಯ ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಮ್ ನಲ್ಲಿ ನಾಲ್ವರು ತನಿ ಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಬಿಬಿಎಂಪಿಯ ವಾರ್ ರೂ ಮ್ ನಲ್ಲಿ (ಆ್ಯಂಬುಲೆನ್ಸ್ ಡಿಸ್ ಪ್ಯಾ ಚ್ ಕಂಟ್ರೋಲ್ ಸೆಂಟರ್) ನಾಲ್ವರು ಅಧಿಕಾರಿಗಳು ಆ್ಯಂಬು ಲೆನ್ಸ್ ಮತ್ತು ಶ್ರದ್ಧಾಂಜಲಿ ವಾಹನದ ನಿರ್ವಹಣೆಯ ಮೇಲೆ ನಿಗಾ ವಹಿಸುತ್ತಿದ್ದಾರೆ. ಆ್ಯಂಬು ಲೆನ್ಸ್ ಕಾರ್ಯಾಚರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿ ಸುವ ನಿಟ್ಟಿ ನಲ್ಲಿ ಬಿಎಂಟಿಸಿಯ ತನಿಖಾಧಿಕಾರಿಗಳನ್ನು ನೇಮಕ ಮಾಡಿ ಕೊಳ್ಳಲಾಗಿದೆ. ನಗರದಲ್ಲಿ ಕೋವಿಡ್ ಸೋಂಕು ದೃಢ ಪಟ್ಟವರಿಗೆ ಬಿಯು ನಂಬರ್ ಸೃಷ್ಟಿಯಾಗಲಿದ್ದು, ನಂತರ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂದು ನಿಗದಿ ಆಗುತ್ತದೆ.
ಟ್ರಾನ್ಸ್ ಫರ್ ಡೈನಾ ಮಿಕ್ ಆ್ಯಪ್ (ಟಿ ಆರ್ ಡಿ) ಮೂಲಕ ಆ್ಯಂಬುಲೆನ್ಸ್ ಚಾಲಕರಿಗೆ ಮೆಸೇಜ್ ಹೋಗು ತ್ತದೆ. ಆ್ಯಂಬುಲೆನ್ಸ್‌ನ ಚಾಲ ಕರು ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಅಥವಾ ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.
ಅಧಿಕಾರಿಗಳ ಕಾರ್ಯ ವೈ ಖರಿ ಏನು: ಬಿಎಂಟಿಸಿಯ ಸಿಟ್ ಮ್ಯಾನೇ ಜ್ ಮೆಂಟ್ ನಲ್ಲಿ ಪರಿಣಿತಿ ಹೊಂದಿರುವ ಒಟ್ಟು 12 ಜನ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆ್ಯಂಬುಲೆನ್ಸ್ ಕಾರ್ಯಾಚರಣೆ ತಡವಾದರೆ ಅಥವಾ ಸೋಂಕಿತರ ಮನೆಗೆ ಆ್ಯಂಬು ಲೆನ್ಸ್ ತಲುಪುದು ತಡ ವಾದರೆ ಯಾಕೆ ತಡವಾಯಿತು ಎಂದು ಈ ತನಿಖಾಧಿಕಾರಿಗಳು ಪರಿಶೀಲನೆ ನಡೆ ಸು ತ್ತಾರೆ. ಇದರಿಂದ ಆ್ಯಂಬುಲೆನ್ಸ್ ನಿರ್ವಹಣೆಯಲ್ಲಿ ಆಗಬಹುದಾದ ಸಂಭವನೀಯ ವಿಳಂಬ ತಪ್ಪುತ್ತದೆ ಎನ್ನುತ್ತಾರೆ ಆ್ಯಂಬು ಲೆನ್ಸ್ ಮತ್ತು ಶ್ರದ್ಧಾಂಜಲಿ ವಾಹನಗಳ ನಿರ್ವಹಣಾ ನೋಡಲ್ ಅಧಿಕಾರಿ ಹಾಗೂ ಬಿಬಿಎಂಪಿ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್. ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃಪ ಟ್ಟವರ ಶವ ವನ್ನು ಚಿತಾಗಾರಕ್ಕೆ ಸಾಗಿಸಲು ಸಹ ಪಾಲಿಕೆ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಿದ್ದು, ಇದಕ್ಕೆ ಕರೆ ಮಾಡಿದರೆ ಉಚಿ ತ ವಾಗಿ ಶ್ರದ್ಧಾಂಜಲಿ ವಾಹನ ಸೇವೆಯನ್ನು ನೀಡಲಿದೆ. ಒಟ್ಟು 49 ಶ್ರದ್ಧಾಂಜಲಿ ವಾಹನಗಳನ್ನು ಕೋವಿಡ್ ಸೋಂಕಿತರ ಶವ ಸಂಸ್ಕಾರಕ್ಕೆ ಪಾಲಿಕೆ ಮೀಸ ಲಿಟ್ಟಿದೆ.
ಶವ ಸಾಗಾಣಿಕೆಗೆ ಸಹಾಯವಾಣಿ :
ಕೋವಿಡ್ ದಿಂದ ಮೃತ ಡುವ ವರ ಶವ ಸಾಗಾಣಿಕೆಗೆ ಉಚಿತ ಸಹಾಯ ವಾಣಿ ಹಾಗೂ ವಾಟ್ಸ್ ಆ್ಯಪ್ ಸಂಖ್ಯೆ ಪರಿ ಚ ಯಿ ಸ ಲಾ ಗಿದೆ. ಸಹಾಯವಾಣಿ ಸಂಖ್ಯೆ 08022493202, 08022493203ಮತ್ತು ವಾಟ್ಸ್ ಆ್ಯಪ್ ಸಂಖ್ಯೆ 8792162736 ಗೆ ಕರೆ ಮಾಡಿ ದರೆ, ಆಸ್ಪತ್ರೆ ಅಥವಾ ಮನೆಯಿಂದ ಕೋವಿಡ್ ಮೃತ ದೇಹವನ್ನು ವಿದ್ಯುತ್ ಚಿತಾಗಾರಗಳಿಗೆ ಉಚಿತವಾಗಿ ಸಾಗಿಸಲಾಗುತ್ತದೆ.ಸಹಾಯವಾಣಿ ಸಂಖ್ಯೆಯು ಪ್ರತಿ ನಿತ್ಯ ಬೆಳಗ್ಗೆ 7ಗಂಟೆ ಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯ ನಿ ರ್ವಹಿಸಲಿದೆ.
ಆ್ಯಂಬುಲೆ ನ್ಸ್ ಗಳ ಮೇಲ್ವಿ ಚಾರಣೆಗೆ ಬಿಎಂಟಿಸಿಯ 12 ಜನ ತನಿಖಾಧಿಕಾ ರಿ ಗಳು ನೆರ ವಾ ಗಿ ದ್ದಾರೆ. ಇರಿಂದ ಆ್ಯಂಬು ಲೆನ್ಸ್ ನಿರ್ವ ಹ ಣೆ ಮತ್ತು ಕಾರ್ಯಾ ಚರಣೆಯಲ್ಲಿ ಕಾರ್ಯ ಸುಗಮವಾಗಿದೆ.
–ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ)
– ಹಿತೇಶ್ ವೈ.