Advertisement

ಬಿಎಂಟಿಸಿ ಬಲಪಡಿಸಲು ಆನ್‌ಲೈನ್‌ ಅಭಿಯನ

11:05 PM Mar 31, 2021 | Team Udayavani |

ಬೆಂಗಳೂರು: ಬಿಎಂಟಿಸಿ ಪುನರುಜ್ಜೀವಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಆನ್‌ಲೈನ್‌ ಮೂಲಕ ನಡೆಸಿದ ಅಭಿಯಾನಕ್ಕೆ 600ಕ್ಕೂ ಹೆಚ್ಚು ಜನ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದ್ದಾರೆ.

Advertisement

ಬಿಎಂಟಿಸಿ ಪುನರುಜ್ಜೀವಗೊಳಿಸುವ ದೂರದೃಷ್ಟಿಯಿಂದ ಯೋಜನೆಯೊಂದನ್ನು ರೂಪಿಸಲಾಗಿದ್ದು, ಇದಕ್ಕಾಗಿ 700 ಕೋಟಿ ರೂ.ಗಳ ಅವಶ್ಯಕತೆ ಇದೆ. ಆದರೆ, ಈ ಹಣಕ್ಕಾಗಿ ಸರ್ಕಾರ ವಿದೇಶಿ ಬ್ಯಾಂಕ್‌ಗಳ ಮೊರೆಹೋಗಲು ಸೂಚಿಸಿದೆ. ಆದರೆ, ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಸುರಿಯುತ್ತಿದೆ. ಈ ತಾರತಮ್ಯ ಯಾಕೆ? ತಕ್ಷಣ ಸಾರಿಗೆ ಸಂಸ್ಥೆಯ ಪುನರುಜ್ಜೀವಗೊಳಿಸಲು ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ವೇದಿಕೆಯು ಆನ್‌ಲೈನ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿತ್ತು. ಇದನ್ನು ಬೆಂಬಲಿಸಿ 600ಕ್ಕೂ ಅಧಿಕ ಜನ ಸಹಿ ಹಾಕಿದ್ದಾರೆ.

ಮೆಟ್ರೋ ರೈಲಿನಲ್ಲಿ ಲಕ್ಷ ಜನ ಓಡಾಡಿದರೆ, ಬಸ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಬಸ್‌ ವ್ಯವಸ್ಥೆಗೆ ಆರ್ಥಿಕ ನೆರವು ನೀಡುವುದರ ಮೂಲಕ ಈ ನಗರದ ಸಂಚಾರ ಸಮಸ್ಯೆ ಕಡಿಮೆ ಆಗುತ್ತದೆ. ಮೆಟ್ರೋ ರೈಲಿನ ಯೋಜನೆ, ಸ್ಮಾರ್ಟ್‌ ಸಿಟಿ, ವರ್ತುಲ ರಸ್ತೆಗಳು, ಫ್ಲೈಓವರ್‌ಗಳಿಗೆ ಸಾವಿರಾರು ಕೋಟಿ ನೀಡುವ ಸರ್ಕಾರ, ನಗರದ ಬಡವರು, ಮಾಧ್ಯಮ ವರ್ಗದವರು ಉಪಯೋಗಿಸುವ ಬಸ್‌ಗೆ ಏಕೆ 700 ಕೋಟಿ ನೀಡಲು ಆಗುತ್ತಿಲ್ಲ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ  ಬಿಎಂಟಿಸಿಗೆ ಯಾವುದೇ ಆರ್ಥಿಕ ನೆರವು ನೀಡದಿರುವುದು ಕೂಡ ಬೇಸರದ ಸಂಗತಿ ಎಂದು ವೇದಿಕೆಯ ಸದಸ್ಯರಾದ ರಾಮದಾಸ್‌ ರಾವ್‌, ಉದಿತ್‌ ಖಂಡೇಲ್‌ವಾಲ್‌, ಆರ್‌. ಜೆನಿಸಿಯಾ, ಲೇಖಾ ಅಡವಿ, ಶಹೀನ್‌ ಶಾಸ, ವಿನಯ್‌ ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಹಾವಳಿಯಿಂದ ಇಂದು ಬಿಎಂಟಿಸಿ ಸಂಕಷ್ಟದಲ್ಲಿದೆ. ಸಿಬ್ಬಂದಿ ವೇತನಕ್ಕೂ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಸಂಸ್ಥೆಯ ನೆರವಿಗೆ ಬಂದು ವೇತನ ಪಾವತಿಗೆ ಆರ್ಥಿಕ ನೆವರು ನೀಡಿದ್ದು ಸ್ವಾಗತಾರ್ಹ. ಆದರೆ, ಅದರ ಜತೆಗೆ ಸಂಸ್ಥೆಯ ಪುನರುಜ್ಜೀವ ಕೂಡ ಸರ್ಕಾರದ ಕರ್ತವ್ಯ ಎಂದು ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next