Advertisement

ಡಿಪೋ ಮ್ಯಾನೇಜರ್‌ ಕಿರುಕುಳ: ಬಿಎಂಟಿಸಿ ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

09:27 AM Sep 19, 2017 | Team Udayavani |

ಬೆಂಗಳೂರು: ಬಿಎಂಟಿಸಿ ಡಿಪೋ ಮ್ಯಾನೇಜರ್‌ ಕಿರುಕುಳದಿಂದ ಬೇಸತ್ತು ಬಿಎಂಟಿಸಿ ಬಸ್‌ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ಘಟನೆ ಸೋಮವಾರ ತಡ ರಾತ್ರಿ ನಗರದ ಶಾಂತಿನಗರ ಡಿಪೋ 2 ರಲ್ಲಿ ನಡೆದಿದೆ.

Advertisement

ಮಧು ಎಂಬುವವರೆ ವಿಷ ಸೇವಿಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಸ್‌ ಚಾಲಕ ಬಿಎಂಟಿಸಿ ಡಿಪೋ ಮ್ಯಾನೇಜರ್‌ ಪ್ರಕಾಶ್‌ ಕಿರುಕುಳ ತಾಳಲಾರದೆ ಚಾಲಕ ಡಿಪೋ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡಿರುವ ಚಾಲಕ ಮಧು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿದ ಬಿಎಂಟಿಸಿ ಡಿಪೋ 2ರ ಸಿಬಂದಿ ಡಿಪೋ ಎದುರು ಬಸ್‌ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next