Advertisement
ಬೆಳಗಾವಿಯ ಅಥಣಿ ಮೂಲದ ಮಹೇಶ್ ಹುಕ್ಕಲಿ (40) ಆತ್ಮಹತ್ಯೆ ಮಾಡಿಕೊಂಡ ನೌಕರ. ಕೆಲ ವರ್ಷಗ ಳಿಂದ ಮಹೇಶ್ ಬಿಂಎಂಟಿಸಿ ಕಚೇರಿ ಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರ ತಾಯಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಅದರಿಂದ ಮಾನಸಿಕವಾಗಿ ನೊಂದಿ ದ್ದರು. ಜತೆಗೆ ಮದ್ಯದ ಚಟ ಅಂಟಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಸೋಮವಾರ ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್‌ನಿಂದ ರೆಕಾರ್ಡ್ ರೂಂ ಕೀ ಪಡೆದ ಮಹೇಶ್, ಸಂಜೆ ವೇಳೆ ಯಾರೂ ಇಲ್ಲದಿ ರುವಾಗ ರೆಕಾರ್ಡ್ ರೂಮ್‌ನ ಕೀ ಪಡೆದು ವೈಯರ್ ಬಳಸಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳ ವಾರ ಮುಂಜಾನೆ ರೆಕಾರ್ಡ್ ರೂಮ್‌ನ ಕೋಣೆ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಕೌಟುಂಬಿಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Advertisement
BMTC: ಕಚೇರಿಯಲ್ಲೇ ಬಿಎಂಟಿಸಿ ಉದ್ಯೋಗಿ ನೇಣಿಗೆ ಶರಣು
10:53 AM Jul 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.