ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅದೃಷ್ಟವೇ ಸರಿ ಇದ್ದಂತಿಲ್ಲ. ಗರಿಷ್ಠ ಪ್ರಮಾಣದ ಪ್ರಯಾಣ ದರ ತಗ್ಗಿಸಿ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಲಾಯಿತು. ಆದರೂ ಅವುಲಾಭದ ಹಳಿಗೆ ಬರುತ್ತಿಲ್ಲ. ಡೀಸೆಲ್ ದುಬಾರಿ ಆಗು ತ್ತಿರುವುದರಿಂದಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿದೆ. ಅವುಗಳೂ ಈಗ ಗಾಯದ ಮೇಲೆ ಬರೆ ಎಳೆಯುತ್ತಿವೆ!
ಪ್ರತಿ ಎಲೆಕ್ಟ್ರಿಕ್ ಬಸ್‌ಗಳು ನಿತ್ಯ ತರುತ್ತಿರುವ ತಲಾ ಆದಾಯ ಸರಾಸರಿ 4,500ರಿಂದ 5,000 ರೂ. ಆದರೆ, ಇದಕ್ಕೆ ಪ್ರತಿಯಾಗಿ ಈಬಸ್‌ಗಳನ್ನು ಪೂರೈಸಿದ ಕಂಪನಿಗಳಿಗೆ ಬಿಎಂಟಿಸಿ ಪಾವತಿಸುತ್ತಿರುವಮೊತ್ತ ದುಪ್ಪಟ್ಟು. ಅಂದರೆ ಒಂಬತ್ತು ಸಾವಿರ ರೂ. ಈ ಹಿನ್ನೆಲೆಯಲ್ಲಿಪರಿಸರ ಮತ್ತು ಕಾರ್ಯಾಚರಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ನಗರಾದ್ಯಂತ ಎಲೆಕ್ಟ್ರಿಕ್ ಬಸ್‌ಗಳು ಸಂಸ್ಥೆಗೆ ಸದ್ಯಕ್ಕಂತೂ ಹೊರೆಯಾಗುತ್ತಿವೆ.
ನಗರದಲ್ಲಿ ವಿದ್ಯುತ್‌ಚಾಲಿತ ಬಸ್‌ಗಳಿಗೆ ಡಿ.27ರಂದು ಚಾಲನೆ ನೀಡಲಾಗಿದ್ದು, ಗುತ್ತಿಗೆ ಪಡೆದ ಕಂಪನಿಯಿಂದ ಇದುವರೆಗೆ 40 ಬಸ್ ಗಳು ಪೂರೈಕೆಯಾಗಿವೆ. ಇವುಗಳ ನಿಯೋಜನೆಗಾಗಿ ಬೆಂಗಳೂರು ಸ್ಮಾರ್ಟ್‌ಸಿಟಿಯಿಂದ ಇದಕ್ಕಾಗಿ 50 ಕೋಟಿ ಅನುದಾನ ಒದಗಿಸಲಾಗಿದೆ. ಈ ಬಸ್‌ಗಳು ನಿತ್ಯ 180 ಕಿ.ಮೀ. ಕಾರ್ಯಾಚರಣೆಗೆ ಪ್ರತಿ ಕಿ.ಮೀ.ಗೆ ವಿದ್ಯುತ್ಛಕ್ತಿಯೂ ಒಳಗೊಂಡಂತೆ ಬಿಎಂಟಿಸಿಯು 51.67 ರೂ. ಪಾವತಿಸುತ್ತದೆ. ಸದ್ಯ ಕೆಂಗೇರಿ ಘಟಕದಿಂದ ಈ ಬಸ್‌ಗಳುಕಾರ್ಯಾಚರಣೆಯನ್ನೂ ಮಾಡುತ್ತಿವೆ. ಆದರೆ, ಎಷ್ಟೇ ಕಸರತ್ತು ಮಾಡಿದರೂ ಪ್ರತಿ ಬಸ್ ದಿನಕ್ಕೆ 180 ಕಿ.ಮೀ. ಕಾರ್ಯಾಚರಣೆಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಪ್ರಯಾಣಿಕರ ಸಂಖ್ಯೆಯೂಇನ್ನೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಣಾಮ ಈ ಬಸ್‌ಗಳು ತರುವಆದಾಯಕ್ಕಿಂತ ಇವುಗಳಿಗೆ ಪಾವತಿಸುವ ಮೊತ್ತ ಹೆಚ್ಚಾಗಿದೆ ಇದು ಬಿಎಂಟಿಸಿ ಅಧಿಕಾರಿಗಳ ನಿದ್ದೆಗೆಡಿಸಿದೆ.
ಸ್ಪಷ್ಟ ಚಿತ್ರಣಕ್ಕೆ 2 ತಿಂಗಳು ಬೇಕು: ಲೆಕ್ಕಾಚಾರದ ಪ್ರಕಾರ 1 ಕಿ.ಮೀ.ಗೆ 51.67 ರೂ.ಗಳಂತೆ 180 ಕಿ.ಮೀ.ಗೆ 9,300 ರೂ. ಆಗುತ್ತದೆ.ಇದನ್ನು ಸಂಸ್ಥೆಯೇ ಭರಿಸಬೇಕು. ಪ್ರಸ್ತುತ ನಿರೀಕ್ಷಿತ ಆದಾಯ ಬಾರದಿರಲು ಸಕಾರಣವೂ ಇದೆ. ಪ್ರಸ್ತುತ ಕೋವಿಡ್ ಮೂರನೇ ಅಲೆಶುರುವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬಹುತೇಕ ಕಂಪನಿಗಳುವರ್ಕ್ ಫ್ರಂ ಹೋಂ ವ್ಯವಸ್ಥೆಯಲ್ಲೇ ಕೆಲಸ ಮಾಡುತ್ತಿವೆ. ಇನ್ನು ಬಸ್ ಗಳು ರಸ್ತೆಗಿಳಿದು ಈಗಷ್ಟೇ ಹದಿನೈದು ದಿನಗಳಾಗಿದ್ದು, ಇದರ ಸಾಧಕ-ಬಾಧಕಗಳನ್ನು ತಿಳಿಯಲು ಸಮಯ ಬೇಕಾಗುತ್ತದೆ. ಹೊರಗಡೆಯಿಂದ ಈ ಬಸ್ ವೋಲ್ವೋ ತರಹ ಕಾಣಿಸುವುದರಿಂದ ಪ್ರಯಾಣಿಕರು, ಇದು ದುಬಾರಿ ದರದ ಬಸ್ ಎಂದು ಹಿಂದೇಟು ಹಾಕುವುದೂ ಉಂಟು. ನಗರದ ಸಂಚಾರದಟ್ಟಣೆ ಕೂಡ ಇದ್ದು, ಚಾಲಕರು ಕಂಪನಿಯಿಂದ ನಿಯೋಜನೆಗೊಂಡವರಾಗಿದ್ದಾರೆ. ಅವರಿಗೂ ಈ ಮಾರ್ಗಗಳು ಹೊಸದು. ಇಂತಹ ಹಲವು ಅಂಶಗಳು ಇದಕ್ಕೆ ಕಾರಣವಾಗಿದ್ದು, ಸ್ಪಷ್ಟ ಚಿತ್ರಣ ಸಿಗಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ ಎಂದು ಬಿಎಂಟಿಸಿಯ ತಾಂತ್ರಿಕ ವಿಭಾಗದ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಸಾಮಾನ್ಯ ಬಸ್‌ಗಳಂತೆ ಎಲೆಕ್ಟ್ರಿಕ್ ಬಸ್, ನಿಲ್ದಾಣಕ್ಕೆ ಆಗಮಿಸುವಾಗಲೇ ಪ್ರವೇಶ ದ್ವಾರಗಳನ್ನು ತೆರೆದುಕೊಂಡು ಬರುವುದಿಲ್ಲ. ನಿಲ್ದಾಣಕ್ಕೆ ಬಂದು ನಿಂತ ಮೇಲೆಯೇ ತೆರೆದುಕೊಳ್ಳುತ್ತವೆ. ಮುಚ್ಚಿಕೊಂಡ ಮೇಲೆಯೇ ಹೊರಡುತ್ತವೆ. ಇದರಿಂದಲೂ ಪ್ರತಿ ನಿಲ್ದಾಣದಲ್ಲಿ 20 ಸೆಕೆಂಡ್‌ಗಳು ಸಮಯ ವ್ಯಯವಾಗುತ್ತದೆ. ಬ್ಯಾಟರಿ ಶೇ. 20ಕ್ಕೆ ಕುಸಿಯುತ್ತಿದ್ದಂತೆ ಕೆಂಪು ಸಿಗ್ನಲ್ ಕೊಡಲು ಶುರುವಾಗುತ್ತದೆ.ಅಲ್ಲಿಂದ ಸರ್ರನೇ ಚಾರ್ಜ್ ಖಾಲಿ ಆಗಿಬಿಡುತ್ತದೆ. ಇಂತಹ ಹಲವು ಅಂಶಗಳು ಈ ಹದಿನೈದು ದಿನಗಳಲ್ಲಿ ಕಂಡುಬಂದಿವೆ ಎಂದು ತಾಂತ್ರಿಕ ಸಿಬ್ಬಂದಿಯೊಬ್ಬರು ತಿಳಿಸಿದರು.
ಮಾಸಾಂತ್ಯದೊಳಗೆ ಉಳಿದ ಬಸ್‌ಗಳು ಸೇವೆಗೆ ಲಭ್ಯ :
ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಒಟ್ಟಾರೆ 90 ಎಲೆಕ್ಟ್ರಿಕ್ ಬಸ್‌ಗಳನ್ನು ಜಿಸಿಸಿ (ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್) ಆಧಾರದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಸ್ಥಳ ತಲುಪಲು ಅನುಕೂಲವಾಗುವಂತೆ ಸಂಪರ್ಕ ಸೇವೆಗಳಾಗಿ ಇವು ಕಾರ್ಯಾಚರಣೆ ಮಾಡಲಿವೆ. ಆದರೆ, ತಾತ್ಕಾಲಿಕವಾಗಿ ಬೇರೆ ಬೇರೆ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರಸ್ತುತ 40ಬಸ್ ಪೂರೈಕೆಯಾಗಿದ್ದು, ಉಳಿದ ಬಸ್‌ಗಳು ತಿಂಗಳ ಅಂತ್ಯದೊಳಗೆ ಲಭ್ಯವಾಗಲಿವೆ ಎಂದು ಬಿಎಂಟಿಸಿ ತಿಳಿಸಿದೆ. ಕೇಂದ್ರದ ಅಂಗಸಂಸ್ಥೆ ಎನ್‌ಟಿಪಿಸಿಯಿಂದ ಈ ಬಸ್‌ಗಳು ಪೂರೈಕೆಯಾಗುತ್ತಿವೆ. ಬಸ್‌ನಲ್ಲಿ ವೇಹಿಕಲ್ ಟ್ರ್ಯಾಕಿಂಗ್ ಯೂನಿಟ್, ಸಿಸಿಟಿವಿ, ತುರ್ತು ಪ್ಯಾನಿಕ್ ಗುಂಡಿ, ಎಲ್‌ಇಡಿ ಮಾರ್ಗ ಘಟಕಗಳಿವೆ.
ಪ್ರಸ್ತುತ ತುಂಬಾ ಸಂಕಷ್ಟಕರ ಸಂದರ್ಭವಾಗಿದೆ. ಈ ವೇಳೆ ಲಾಭ-ನಷ್ಟದ ಲೆಕ್ಕಾಚಾರ ಮಾಡುವುದು ಕಷ್ಟ. ಇ-ಬಸ್ ಮಾತ್ರವಲ್ಲ; ಎಲ್ಲ ಬಸ್‌ಗಳೂ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಸಂಚರಿಸುತ್ತಿಲ್ಲ. ಅಷ್ಟಕ್ಕೂ ಇನ್ನೂ ನಾವು ಗುತ್ತಿಗೆ ಪಡೆದಕಂಪನಿಗೆ ಹಣ ಪಾವತಿಯೇ ಮಾಡಿಲ್ಲ.
– ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
– ವಿಜಯಕುಮಾರ್ ಚಂದರಗಿ