Advertisement
ದ್ವಿತೀಯಾರ್ಧದಲ್ಲಿ ಎಚ್‌ಎಂಟಿ 6 ಅಂಕ ಪಡೆದರೆ ಬಿಎಂಟಿಸಿ 12 ಅಂಕ ಗಳಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು. ಲೀಗ್ ಹಂತದಲ್ಲಿ 3 ಪಂದ್ಯಗಳಲ್ಲಿ 2 ಗೆಲವು ಸಾಧಿಸುವ ಮೂಲಕ ಬಿಎಂಟಿಸಿ ಉಪಾಂತ್ಯಕ್ಕೆ ಸ್ಥಾನ ಭದ್ರಪಡಿಸಿಕೊಂಡಿತು. ಇನ್ನೊಂದು ಪಂದ್ಯದಲ್ಲಿ ಬಿವೈಎಸ್ ತಂಡ 23-20ರಿಂದ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಪರಾಭವಗೊಳಿಸಿತು.
Related Articles
Advertisement
ಮಾತಿಕ ಚಕಮಕಿ: ಧಾರವಾಡ ಹಾಗೂ ಕೆಎಸ್‌ಪಿ ಪುರುಷರ ತಂಡಗಳ ಮಧ್ಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಭಯತಂಡಗಳ ಆಟಗಾರರ ಮಧ್ಯೆ ತೀರ್ಪುಗಾರರ ನಿರ್ಣಯ ಕುರಿತು ಮಾತಿನ ಚಕಮಕಿ ನಡೆಯಿತು. ನಂತರ ಸಂಘಟಕರು ಪಂದ್ಯ ನಿಲ್ಲಿಸಿ ಉಭಯ ತಂಡಗಳ ಆಟಗಾರರನ್ನು ಸಮಾಧಾನಪಡಿಸಿ, ಬೇರೊಬ್ಬ ತೀರ್ಪುಗಾರರನ್ನು ನಿಯೋಜಿಸಿ ಪಂದ್ಯ ಮುಂದುವರಿಸಿದರು.
ಪ್ರಥಮ ಚಿಕಿತ್ಸೆ ಸಿಗಲಿಲ್ಲ: ಚಿಕ್ಕಮಗಳೂರು ಹಾಗೂ ಕೆಎಸ್‌ಪಿ ಮಹಿಳಾ ತಂಡಗಳ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಚಿಕ್ಕಮಗಳೂರು ತಂಡದ ಪಟು ಬಿದ್ದು ಕಾಲು ಉಳುಕಿಸಿಕೊಂಡ ಸಂದರ್ಭದಲ್ಲಿ ಅವಳಿಗೆ ಸಮರ್ಪಕ ತುರ್ತುಚಿಕಿತ್ಸೆ ಸಿಗಲಿಲ್ಲ. ಪೇನ್ ಕಿಲ್ಲರ್ ಸ್ಪ್ರೆ ಬೇಕೆಂದು ಕೋಚ್ ಹೋಗಿ ಸಂಘಟಕರಲ್ಲಿ ಹೇಳಿದರೂ ಸ್ಪ್ರೆ ಇಲ್ಲ ಎಂದು ಹೇಳಿ ಕಳಿಸಿದರು. ಆದರೂ ಕಾಲು ಕುಂಟುತ್ತಲೇ ಪಟು ಆಟ ಮುಂದುವರಿಸಬೇಕಾಯಿತು.