Advertisement

221 ಕೋಟಿ ಬಾಕಿ ಇರಿಸಿದ ಮುಂಬಯಿ ಕ್ಲಬ್‌: ನೀರು ಪೂರೈಕೆ ಬಂದ್‌

04:41 PM Jul 06, 2018 | udayavani editorial |

ಮುಂಬಯಿ : ರಕ್ಷಣಾ ಪಡೆಯ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸದಸ್ಯರನ್ನು ಒಳಗೊಂಡ ಉನ್ನತ ವರ್ಗದವರ ಕ್ಲಬ್‌ 221 ಕೋಟಿ ರೂ. ನೀರಿನ ಬಿಲ್‌ ಬಾಕಿ ಇಟ್ಟಿರುವ ಕಾರಣ ಮುಂಬಯಿ ಪೌರಾಡಳಿತೆಯು ಕ್ಲಬ್‌ ಕಟ್ಟಡಕ್ಕೆ ನೀರು ಪೂರೈಕೆಯನ್ನು ನಿಲ್ಲಿಸಿದೆ ಎಂದು ಅಧಿಕಾರಿಯೋರ್ವರು ಇಂದು ತಿಳಿಸಿದ್ದಾರೆ.

Advertisement

1937ರಲ್ಲಿ ಸ್ಥಾಪನೆಗೊಂಡ ಯುನೈಟೆಡ್‌ ಸರ್ವಿಸಸ್‌ ಕ್ಲಬ್‌ (ಯುಎಸ್‌ಸಿ) ದಕ್ಷಿಣ ಮುಂಬಯಿಯ ಕೊಲಾಬಾ ಪ್ರದೇಶದಲ್ಲಿದೆ. ಈ ಕ್ಲಬ್‌ ಹಾಲಿ ಹಾಗೂ ಮಾಜಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳಿಗೆ ಸದಸ್ಯತ್ವದ ಕೊಡುಗೆಯನ್ನು ನೀಡುತ್ತದೆ. 

ಉನ್ನತರ ಈ ಕ್ಲಬ್‌ ಆಸ್ತಿ ತೆರಿಗೆಯನ್ನು ಕೂಡ ಪಾವತಿಸದೆ ಬಾಕಿ ಇರಿಸಿರುವುದಾಗಿ ಬೃಹನ್‌ ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ (ಬಿಎಂಸಿ) ಅಧಿಕಾರಿಯೋರ್ವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next