Advertisement

ಭಾರತಕ್ಕೆ “ಮಣ್ಣು ಉಳಿಸಿ’ಅಭಿಯಾನ

01:15 AM May 29, 2022 | Team Udayavani |

“ಮಣ್ಣು ರಕ್ಷಣೆ ಅತೀ ಮುಖ್ಯ’- ಯಾರೂ ಗಮನಿಸದ ಈ ಅಂಶದ ವಿಚಾರದಲ್ಲಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿ ರುವುದು ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು. “ಮಣ್ಣು ಉಳಿಸಿ’ ಅಭಿಯಾನ ನಡೆಸುತ್ತಿರುವ ಅವರು ಬರೋಬ್ಬರಿ 26 ರಾಷ್ಟ್ರಗಳನ್ನು ಏಕಾಂಗಿಯಾಗಿ ಮೋಟಾರು ವಾಹನದಲ್ಲಿ ಸುತ್ತಿ ಇಂದು ಭಾರತಕ್ಕೆ ವಾಪಸಾಗುತ್ತಿದ್ದಾರೆ.

Advertisement

ಅಭಿಯಾನಕ್ಕೆ ಸಿಕ್ಕ ಬೆಂಬಲ
ಸದ್ಗುರು ಅವರ ಈ ಅಭಿಯಾನಕ್ಕೆ ವಿಶ್ವಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲ ರಾಷ್ಟ್ರಗಳು ಮಣ್ಣು ಉಳಿಸಲು ಸದ್ಗುರು ಜತೆ ಕೈ ಜೋಡಿಸಲು ಸಿದ್ಧವಾಗಿವೆ. ಅಭಿಯಾನ ಪ್ರಾರಂಭವಾದಾಗಿನಿಂದ ಒಟ್ಟು 74 ರಾಷ್ಟ್ರಗಳು ಮಣ್ಣನ್ನು ಉಳಿಸುವ ಕೆಲಸ ಮಾಡಲು ಒಪ್ಪಿಕೊಂಡಿವೆ. 7 ಕೆರೀಬಿಯನ್‌ ದೇಶಗಳು ಸೇರಿದಂತೆ ಅಜರ್‌ಬೈಜಾನ್‌, ರೊಮೇನಿಯ ಮತ್ತು ಯುಎಇ ರಾಷ್ಟ್ರಗಳು ಒಡಂಬಡಿಕೆಗೆ ಸಹಿ ಹಾಕಿವೆ. ಕಾಮನ್‌ವೆಲ್ತ್‌ನ 54 ರಾಷ್ಟ್ರಗಳು, ಯುರೋಪಿಯನ್‌ ಒಕ್ಕೂಟ, ಯುರೋಪಿಯನ್‌ ಸಂಸ್ಥೆಗಳು, ಫ್ರಾನ್ಸ್‌ ಸರಕಾರ ಮಣ್ಣು ಉಳಿಸಿ ಅಭಿಯಾನವನ್ನು ಬೆಂಬಲಿಸಿವೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಹಾಗೂ ಅತೀ ದೊಡ್ಡ ಪ್ರಭಾವಿ ಇಸ್ಲಾಮ್‌ ಸಂಸ್ಥೆಯಾದ “ಮುಸ್ಲಿಂ ವರ್ಲ್ಡ್ ಲೀಗ್‌’ ಕೂಡ ಬೆಂಬಲ ನೀಡಿವೆ.

ಉದ್ದೇಶವೇನು?
– ಮಣ್ಣು ನಾಶದ ಕಡೆಗೆ ಪ್ರಪಂಚದ ಗಮನ ಸೆಳೆಯುವುದು.
– ಮಣ್ಣು ರಕ್ಷಣೆಗೆ ನೀತಿ ನಿಯ ಮಾವಳಿ ರಚಿಸಲು 3.5 ಶತಕೋಟಿ ಜನರನ್ನು ಪ್ರೇರೇಪಿಸುವುದು.
– ಮಣ್ಣಿನ ಸಾವಯುವ ಅಂಶವನ್ನು ಶೇ.3 ರಿಂದ ಶೇ.6ಕ್ಕೆ ಏರಿಸಲು ರಾಷ್ಟ್ರೀಯ ನಿಯಮಾವಳಿಗಳಲ್ಲಿ ಬದಲಾವಣೆ ತರಲು ವಿಶ್ವವನ್ನು ಪ್ರೇರೇಪಿಸುವುದು.

ಭಾರತದಲ್ಲಿ ಕಾರ್ಯಕ್ರಮಗಳು
ಮೇ 29: ಜಾಮ್‌ನಗರ
ಜೂ. 3: ಜೈಪುರ
ಜೂ. 5: ದಿಲ್ಲಿ
ಜೂ. 7: ಲಕ್ನೋ
ಜೂ. 9: ಭೋಪಾಲ್‌
ಜೂ. 12: ಮುಂಬಯಿ
ಜೂ. 15: ಹೈದರಾಬಾದ್‌
ಜೂ. 19: ಬೆಂಗಳೂರು
ಜೂ. 20: ಮೈಸೂರು
ಜೂ. 21: ಕೊಯಂಬತ್ತೂರು

ಮಾ. 21: ಅಭಿಯಾನ ಆರಂಭ (ಯುನೈಟೆಡ್‌ ಕಿಂಗ್‌ಡಮ್‌ನಿಂದ)
ಜೂ. 21: ಅಭಿಯಾನ ಮುಕ್ತಾಯ(ಭಾರತದಲ್ಲಿ)
ಎಷ್ಟು ಕಿ.ಮೀ.? 30,000 ಕಿ.ಮೀ.
ಎಷ್ಟು ರಾಷ್ಟ್ರ? 26
ಎಷ್ಟು ದಿನ? 100
75 ದಿನಗಳು ವಿದೇಶಗಳಲ್ಲಿ
25 ದಿನಗಳು ಭಾರತದಲ್ಲಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next