Advertisement

B’luru school ಬಾಂಬ್ ಬೆದರಿಕೆ; ಇಮೇಲ್‌ಗಳಲ್ಲಿ ಕೋಮು ವಿಷಯ: ಕಳವಳ

05:40 PM Dec 01, 2023 | Team Udayavani |

ಬೆಂಗಳೂರು: ಬೆಂಗಳೂರಿನ 15 ಕ್ಕೂ ಹೆಚ್ಚು ಶಾಲೆಗಳಿಗೆ ರವಾನೆಯಾಗಿರುವ ಬಾಂಬ್ ಬೆದರಿಕೆ ಇಮೇಲ್‌ಗಳಲ್ಲಿ ಜಿಹಾದಿ ವಿಷಯವಿರುವುದು ಪೊಲೀಸರ ಆರಂಭಿಕ ತನಿಖೆಯಲ್ಲಿ ಕಂಡುಬಂದಿದ್ದು, ಕಳವಳವನ್ನು ಉಂಟು ಮಾಡಿದೆ.

Advertisement

ಬೆದರಿಕೆ ಪತ್ರದಲ್ಲಿ “ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂನ ಕತ್ತಿಯ ಭಾರದಲ್ಲಿ ಸಾಯಿರಿ. ಬಿಸ್ಮಿಲ್ಲಾ, ನಾವು ಅಲ್ಲಾಹನ ನಿಜವಾದ ಧರ್ಮವನ್ನು ಇಡೀ ಭಾರತಕ್ಕೆ ಹರಡುತ್ತೇವೆ” ಎಂದು ಬರೆಯಲಾಗಿದೆ.

“ನಮ್ಮ ಗುಲಾಮರಾಗಲು ಅಥವಾ ಅಲ್ಲಾಹನ ನಿಜವಾದ ಧರ್ಮವನ್ನು ಸ್ವೀಕರಿಸಲು ನಿಮಗೆ ಆಯ್ಕೆ ಇದೆ. ದೇವಾಲಯಗಳು, ನಿಮ್ಮ ವಿಗ್ರಹಗಳು, ಬುದ್ಧನಿಂದ ಅನಂತತೆಯವರೆಗೆ ನಮ್ಮ ಸ್ಫೋಟಗಳಾಗುತ್ತವೆ, ”ಎಂದು ಬೆದರಿಕೆ ಇಮೇಲ್ ನಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ಬೆದರಿಕೆ ಕರೆ: ಎಲ್ಲೆಡೆ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ; ಸಿದ್ದರಾಮಯ್ಯ

”ಶಾಲೆಯ ಆವರಣದಲ್ಲಿ ಸ್ಫೋಟಕ ಸಾಧನಗಳಿವೆ ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ. ಮುಂಬೈ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಇಮೇಲ್‌ನಲ್ಲಿ “ನವೆಂಬರ್ 26 ರಂದು, ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರು ನೂರಾರು ವಿಗ್ರಹಾರಾಧಕರನ್ನು ಕೊಂದರು. ಹತ್ತಾರು ಮಿಲಿಯನ್ ಕಾಫಿರ್‌ಗಳ ಮೇಲೆ ಚಾಕು ಹಿಡಿಯುವುದು ನಿಜವಾಗಿಯೂ ಶಕ್ತಿಯುತವಾಗಿದೆ” ಎಂದು ಬರೆಯಲಾಗಿದೆ.

Advertisement

ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್”ಇದನ್ನು ಯಾರೇ ಮಾಡಿದ್ದರೂ, ಇದು ಹೇಯ ಕೃತ್ಯ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಶಾಲೆಗಳನ್ನು ಬಾಂಬ್ ಸ್ಕ್ವಾಡ್‌ಗಳಿಂದ ಪರಿಶೀಲಿಸಲಾಗುತ್ತಿದೆ. ನಾಲ್ಕನೇ, ಐದನೇ, ಆರನೇ ಬಾರಿ ಇಷ್ಟು ದೊಡ್ಡ ಘಟನೆ ನಡೆದರೆ ಅದಕ್ಕಿಂತ ದೊಡ್ಡ ಅನಾಹುತ ಮತ್ತೊಂದಿಲ್ಲ. ಹಾಗಾಗಿ ತುಂಬಾ ಜಾಗರೂಕರಾಗಿರುತ್ತೇವೆ.ಬೆಂಗಳೂರಿನ ಯಾವುದೇ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.ಇಮೇಲ್ ವಿಳಾಸ ಪತ್ತೆಯಾಗಿದ್ದು, ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ.ಈ ಮೂಲಕ ಶೋಧಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next