Advertisement

ಬ್ರಾಡ್‌ಗೆ ಹಿನ್ನೆಡೆ: ಆಲ್ಭಾ ಬೆಟ್‌ಗೆ ನಷ್ಟ

08:28 PM Feb 09, 2023 | Team Udayavani |

ನ್ಯೂಯಾರ್ಕ್‌: ಮೈಕ್ರೋಸಾಫ್ಟ್ ನ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ರೂಪಿಸಿದ್ದ “ಬ್ರಾಡ್‌’ ಮಾರುಕಟ್ಟೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ.

Advertisement

ಅದನ್ನು ಪ್ರಚಾರ ಮಾಡುವ ವಿಡಿಯೋದಲ್ಲಿ ಪ್ರಶ್ನೆಯೊಂದಕ್ಕೆ ತಪ್ಪು ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಲ್ಫಾಬೆಟ್‌ ಇಂಕ್‌ನ ಮಾರುಕಟ್ಟೆ ಮೌಲ್ಯ  8.24 ಲಕ್ಷ ಕೋಟಿ ರೂ. (100 ಬಿಲಿಯನ್‌ ಡಾಲರ್‌)ಗೆ ಇಳಿಕೆಯಾಗಿದೆ.

ನಾಸ್‌ಡಾಕ್‌ನಲ್ಲಿ ಫೆ.8ರಂದು ಕಂಪನಿಯ ಷೇರುಗಳು ಶೇ.7.8 ಇಳಿಕೆಯಾಗಿವೆ. ಪ್ಯಾರಿಸ್‌ನಲ್ಲಿ ಬ್ರಾಡ್‌ನ‌ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಈ ತಪ್ಪುಗಳು ಗೊತ್ತಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಲ್ಫಾಬೆಟ್‌ ವಕ್ತಾರರು, ಗ್ರಾಹಕರಿಗೆ ಅನುಕೂಲವಾಗುವಂತೆ ಬ್ರಾಡ್‌ ಅನ್ನು ಪುನರ್‌ ವಿನ್ಯಾಸಗೊಳಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next