Advertisement

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

10:06 PM Sep 26, 2021 | Team Udayavani |

ಜೈಪುರ: ರಾಜಸ್ಥಾನದಲ್ಲಿ ಭಾನುವಾರದಂದು ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ(ರೀಟ್‌)ಯಲ್ಲಿ  ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಲಾಗಿದೆ.

Advertisement

ಅಜ್ಮರ್‌ನಲ್ಲಿ ಮೊದಲಿಗೆ ಈ ಮೋಸ ಪತ್ತೆಯಾಗಿದೆ. ನಂತರ ಬಿಕಾನೇರ್‌ ಮತ್ತು ಸಿಕರ್‌ನಲ್ಲಿ ಶೂ ಧರಿಸಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ.  ಶೂನಲ್ಲಿ ಮೊಬೈಲ್‌ ಮತ್ತು ಬ್ಲೂಟೂತ್‌ ಅಳವಡಿಸಲಾಗಿದ್ದು, ಅಭ್ಯರ್ಥಿಗಳ ಕಿವಿಗೆ ಹಾಕಿಕೊಳ್ಳಲು ಇನ್ನೊಂದು ಡಿವೈಸ್‌ ಕೊಡಲಾಗಿದೆ. ದೂರದಲ್ಲೆಲ್ಲೋ ಕುಳಿತ ವ್ಯಕ್ತಿ ಇವರಿಗೆ ಪರೀಕ್ಷೆ ಬರೆಯಲು ಬ್ಲೂಟೂತ್‌ ಮೂಲಕ ಸಹಾಯ ಮಾಡುತ್ತಿದ್ದ. ಒಟ್ಟು 25 ಮಂದಿಗೆ 6 ಲಕ್ಷ ರೂ. ವೆಚ್ಚದಲ್ಲಿ  ಶೂ ಮಾರಾಟ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ತಿ ತೋಳಿರುವ ಶರ್ಟ್‌ ಧರಿಸಿ ಬರಬಾರದು ಎನ್ನುವ ನಿಯಮವಿದ್ದರೂ ಹಲವೆಡೆ ಅಭ್ಯರ್ಥಿಗಳು ಪೂರ್ತಿ ತೋಳಿನ ಶರ್ಟ್‌ ಧರಿಸಿ ಬಂದಿದ್ದು, ಪರೀಕ್ಷಾ ಕೇಂದ್ರದೊಳಗೆ ಕಳುಹಿಸುವ ಮೊದಲು ಶರ್ಟ್‌ನ ತೋಳನ್ನು ಕತ್ತರಿಸಿ ಕಳುಹಿಸಿರುವ ಘಟನೆಯೂ ನಡೆದಿದೆ.

ಇದನ್ನೂ ಓದಿ :ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

Advertisement

Udayavani is now on Telegram. Click here to join our channel and stay updated with the latest news.

Next