Advertisement
ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಬ್ಲಾಕ್‌ಚೈನ್’ ತಂತ್ರಜ್ಞಾನ ಕುರಿತ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನ ಕೇಂದ್ರಿತವಾದ ಬ್ಲಾಕ್‌ಚೈನ್ ತಂತ್ರಜ್ಞಾನವು ಉಪಯುಕ್ತವಾಗಿ ಕಾಣುತ್ತಿದ್ದು, ಆಡಳಿತದಲ್ಲಿ ಅಳವಡಿಕೆಗೆ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಸ್ಟಾರ್ಟ್‌ಅಪ್‌ಗ್ಳಿಗೆ ಪೂರಕ ವಾತಾವರಣವಿರುವ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಈ ಎರಡೂ ಕ್ಷೇತ್ರ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅನ್ವೇಷಣೆ ಕ್ಷೇತ್ರದ ನಾಯಕತ್ವ ಬೆಂಗಳೂರು ವಹಿಸಬೇಕು ಎಂಬ ಗುರಿಯಿದ್ದು, ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆದಿದೆ. ಹೊಸದಾಗಿ ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಕೆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಆರಂಭಿಸಿದೆ ಎಂದು ತಿಳಿಸಿದರು.
Related Articles
ಎಸ್‌ಎಪಿ ಲ್ಯಾಬ್ಸ್ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ಕುಮಾರ್ ಖಂಡೇಲ್ವಾಲ್, ಇತ್ತೀಚೆಗಷ್ಟೇ ಪ್ರಚಲಿತಕ್ಕೆ ಬರುತ್ತಿರುವ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಡಳಿತದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಯತ್ನ ಉತ್ತಮವಾಗಿದೆ. ಇದು ಸರ್ಕಾರದ ದೂರದೃಷ್ಟಿ ಹಾಗೂ ಸರಿಯಾದ ದಿಕ್ಕಿನತ್ತ ಸಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಕಳೆದ 5- 10 ವರ್ಷಗಳ ಹಿಂದೆ ಆಯ್ದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವರು ಹಿಡಿತ ಸಾಧಿಸಿರುವುದಾಗಿ ಹೇಳುತ್ತಿದ್ದರು. ಆದರೆ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ತಂತ್ರಜ್ಞಾನ ಬಳಕೆಯಲ್ಲಿ ಯಾರೊಬ್ಬರೂ ಪರಿಪೂರ್ಣರಲ್ಲ ಎಂಬುದರ ಜತೆಗೆ ಪ್ರಭುತ್ವ ಸಾಧಿಸಲು ಸಾಧ್ಯವಾಗದ ಸ್ಥಿತಿ ಇದೆ. ಇದರಿಂದ ಸ್ಪರ್ಧೆ ತೀವ್ರವಾಗಿದೆ. ಸುಧಾರಿತ ಬ್ಲಾಕ್‌ಚೇನ್ ತಂತ್ರಜ್ಞಾನದ ಮೂಲಕ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನದ ಉತ್ತಮ ಆರಂಭವಾಗಿದೆ ಎಂದು ಹೇಳಿದರು.ಐಟಿಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಐಟಿಬಿಟಿ ಇಲಾಖೆ ನಿರ್ದೇಶಕಿ ಸಲ್ಮಾ ಕೆ. ಫಾಹಿಂ, ಅರ್ನ್ಸ್ಟ್ ಆ್ಯಂಡ್ ಯಂಗ್ ಪಾಲುದಾರ ಪ್ರಕಾಶ್ ಜಯರಾಂ ಇತರರು ಉಪಸ್ಥಿತರಿದ್ದರು. ಹಲವು ದಶಕಗಳ ಶ್ರಮವಿದೆ
ಕೆಲ ರಾಜ್ಯಗಳು ಹೂಡಿಕೆದಾರರಿಗೆ ಭೂಮಿ, ನೀರು ಇತರೆ ಸೌಲಭ್ಯವನ್ನು ಉಚಿತವಾಗಿ ನೀಡಬಹುದು. ಆದರೆ ರಾಜ್ಯ ಅನ್ವೇಷಣೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ನುರಿತ ಮಾನವ ಸಂಪನ್ಮೂಲ, ವೃತ್ತಿಪರರ ಲಭ್ಯತೆ ಬೇರೆಲ್ಲೂ ಸಿಗದು. ಇದು ರಾತ್ರೋರಾತ್ರಿ ಸೃಷ್ಟಿಯಾದುದಲ್ಲ. ಹಲವು ದಶಕಗಳ ಪ್ರಯತ್ನ, ದೂರದೃಷ್ಟಿ, ಬದ್ಧತೆಯ ಕಾರ್ಯ ನಿರ್ವಹಣೆ ಪರಿಣಾಮವಾಗಿ ಈ ವಾತಾವರಣ ಸೃಷ್ಟಿಯಾಗಿದೆ.
– ಪ್ರಿಯಾಂಕ್ ಖರ್ಗೆ, ಐಟಿಬಿಟಿ ಸಚಿವ