Advertisement
ಇದರೊಂದಿಗೆ ಭಾರತದಲ್ಲಿ ಬ್ಲೂವೇಲ್ ಮಹಾಮಾರಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆೆ. ಈ ಆನ್‌ಲೈನ್ ಆಟದ ಚಟ ವ್ಯಾಪಕವಾಗಿ ಹಬ್ಬುತ್ತಿದ್ದು, ಬಾಲಕರ ಮನಸ್ಸನ್ನೇ ತಿರುಗಿಸಿ ಜೀವವನ್ನೇ ಬಲಿ ಪಡೆಯುತ್ತಾದ್ದರಿಂದ, ಆನ್‌ಲೈನ್ ವಿವಿಧ ಜಾಲತಾಣ ಗಳಲ್ಲಿ ಬ್ಲೂವೇಲ್ ಲಿಂಕ್ ಅನ್ನು ಅಳಿಸಿ ಹಾಕುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಬಾಲಕ ಮನೋಜ್ ಬ್ಲೂವೇಲ್‌ನ ಫೈನಲ್ ಟಾಸ್ಕ್ ನಲ್ಲಿದ್ದು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಥವಾ ಮತ್ತೂಬ್ಬರನ್ನು ಹತ್ಯೆ ಮಾಡಬೇಕು ಎಂದಿದ್ದ. ಇದನ್ನು ಕೇಳಿ ತನಗೆ ಹೆದರಿಕೆಯಾಗಿದ್ದಾಗಿ ಮನೋಜ್ ಹೇಳಿದ್ದ ಎಂದು ತಾಯಿ ಟೀವಿ ಚಾನೆಲ್‌ಗಳಿಗೆ ಹೇಳಿದ್ದಾರೆ. ಅಲ್ಲದೇ ಬಾಲಕ ಮನೋಜ್, “ತಾನು ಸತ್ತರೆ, ನೀನು ನೊಂದುಕೊಳ್ಳುತ್ತೀಯಾ?’ ಎಂದೂ ಕೇಳಿದ್ದ ಎಂದು ಆತನ ತಾಯಿ ಹೇಳಿದ್ದಾರೆ. ಕಣ್ಣೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ 22 ವರ್ಷದ ಯುವಕ ಬ್ಲೂವೇಲ್‌ಗೆ ಬಲಿಯಾಗಿದ್ದಾಗಿ ಹೇಳಲಾಗಿದೆ. ಈತನೂ ಕೈಯಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಕೆತ್ತಿಕೊಂಡಿದ್ದಾಗಿ, ಕೆಲ ದಿನಗಳ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.
Related Articles
Advertisement
ಇದೇ ವೇಳೆ ಇತ್ತ ದಿಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಯೊಂದು ಸಲ್ಲಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಬ್ಲೂವೇಲ್ ಅಳಿಸುವಂತೆ ಮನವಿ ಮಾಡಲಾಗಿದೆ.
ಲಿಂಕ್ ಅಳಿಸಲು ಸೂಚನೆಇದೇ ವೇಳೆ ಬ್ಲೂವೇಲ್‌ಗೆ ಬಲಿಯಾಗುವುದನ್ನು ತಪ್ಪಿಸಲು ಜಾಲತಾಣಗಳಲ್ಲಿ ಲಿಂಕ್ ಅಳಿಸುವಂತೆ ಪ್ರಮುಖ ತಾಣಗಳಾದ, ಗೂಗಲ್, ಫೇಸ್‌ಬುಕ್, ಯಾಹೂ, ವಾಟ್ಸ್‌ಆ್ಯಪ್, ಮೈಕ್ರೋಸಾಫ್ r ಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. “ಬ್ಲೂ ವೇಲ್ ವಿಚಾರದಲ್ಲಿ ಹಲವು ದೂರುಗಳು ಬಂದಿವೆ. ಈ ಸಂಬಂಧ ಅಂತರ್ಜಾಲ ಕಂಪೆನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡ ಲಾಗಿದೆ. ಬಾಲಕರು ಈ ಆನ್‌ಲೈನ್ ಆಟದಿಂದ ಆತ್ಮಹತ್ಯೆಗೆ ಪ್ರೇರೇ ಪಿತರಾಗುವುದು ತೀವ್ರ ನೋವಿನ ವಿಚಾರವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಬ್ಲೂವೇಲ್ ಲಿಂಕ್ ಅಳಿಸಲು ಹೇಳಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ವಾಗತಿಸಿದ್ದಾರೆ.