ಮೈಸೂರು: ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಹತ್ತಿರವಿದ್ದೆ ಎಂಬ ಕಾರಣಕ್ಕೆ ನೀವು ಹೇಳಿದ ಕಾನೂನು ಬಾಹಿರ ಕೆಲಸಗಳನ್ನೆಲ್ಲ ಮಾಡಿಸಿಕೊಡಬೇಕಿತ್ತಾ? ಮಾಡಿಸಿ ಕೊಡದಿರುವುದಕ್ಕೆ ನನ್ನನ್ನು ದೂರಿ¤ರಾ, ನಿಮ್ಮ ಕಲ್ಯಾಣ ಗುಣಗಳು ಹೇಳುವುದು ಬಹಳಷ್ಟಿದೆ, ನಿಮ್ಮ ಸಮಕಾಲೀನರನ್ನೂ ಕರೆತರುತ್ತೇನೆ. ನವರಾತ್ರಿ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ಬನ್ನಿ, ಆಸೆ-ಆಮಿಷಗಳಿಗೆ ಬಲಿಯಾಗಿಲ್ಲ. ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಎಂದು ಪ್ರಮಾಣ ಮಾಡಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್, ಅನರ್ಹ ಶಾಸಕ ಎಚ್.ವಿಶ್ವನಾಥ್‌ಗೆ ಸವಾಲು ಹಾಕಿದ್ದಾರೆ.
ಕೆ.ಆರ್.ನಗರ ಕ್ಷೇತ್ರದ ಹಳ್ಳಿಗಳಿಗೆ ನಾನು ಹೋದರೆ ನನ್ನ ಸಹೋದರ ಬಂದ ಎಂದು ಆರತಿ ಎತ್ತಿ ಬರಮಾಡಿಕೊಳ್ಳುತ್ತಾರೆ. 1994ರಲ್ಲಿ ನೀವು ಕೆಲ ಹಳ್ಳಿಗಳಿಗೆ ಹೋದರೆ ಯಾಕೆ ಬಾಗಿಲು ಹಾಕಿಕೊಳ್ಳುತ್ತಿದ್ದರು ಎಂದು ಹೇಳಬೇಕಾ? ನಿಮ್ಮಿಂದಾಗಿ ಕೆ.ಆರ್.ನಗರದಲ್ಲಿ ತಹಶೀಲ್ದಾರ್ ಆಗಿದ್ದವರ ಕುಟುಂಬ ಬೀದಿ ಪಾಲಾಯ್ತಲ್ಲ ಅದನ್ನು ಹೇಳಬೇಕಾ? ಯಾವ್ಯಾವ ಕ್ಷೇತ್ರಕ್ಕೆ ಹೋಗಿದ್ದೀರಿ ಅಲ್ಲೆಲ್ಲ ನಿಮ್ಮ ಕುರುಹುಗಳಿವೆ. ಮೈಸೂರು ಮತ್ತು ಕೊಡಗಿನ ಜನತೆಗೆ ನಿಮ್ಮ ಯೋಗ್ಯತೆ ಏನೆಂದು ಗೊತ್ತಿದೆ.
ಎರಡು ತಿಂಗಳ ಹಿಂದೆ ನಿಮ್ಮ ಸಂಭಾಷಣೆಯ ಒಂದು ಆಡಿಯೋ ಹೊರಬಂತಲ್ಲ, ಈ 70ನೇ ವಯಸ್ಸಲ್ಲಿ ಬ್ಲೂ ಬಾಯ್ ನೀವು, ಯಾವ ಹೀರೊಯಿನ್ ಜೊತೆ ಏನೇನು ಮಾತಾಡಿದ್ದೀರಿ, ಅವರ ನಂಬರ್ ಕೂಡ ಇದೆ. ಅದು ಸುಳ್ಳು ಅನ್ನುವುದಾಗಿದ್ರೆ ತನಿಖೆ ಮಾಡಿಸಿ, ಏಕೆ ಸುಮ್ಮನಿದ್ದೀರಿ, ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸುವ ಕೆಲಸವನ್ನೇಕೆ ಮಾಡುತ್ತೀದ್ದೀರಿ? ನಿಮ್ಮಂಥ ಜೀವನ ಮಾಡೋದಾಗಿದ್ರೆ ಹೊಳೆಗೊ, ಕೆರೆಗೋ ಹಾರಿ ಆತ್ಮಹತ್ಯೆ ಮಾಡಿಕೊಳ್ತಿದ್ದೆ. ಹೌದು ನನಗೆ ವ್ಯವಹಾರ ಇದೆ. ತೆರಿಗೆ ಕಟ್ಟಿ ನಿಯಮಬದ್ಧವಾಗಿ ವ್ಯವಹಾರ ಮಾಡುತ್ತಿದ್ದೇನೆ. ನಮ್ಮ ವ್ಯವಹಾರ ಏನು ಎಂಬುದು ಆದಾಯ ತೆರಿಗೆ ಇಲಾಖೆಗೂ ಗೊತ್ತಿದೆ. ಅದಕ್ಕೆ ನನಗಿಂತ ಕೆಳಗಿರುವವರ ಮೇಲೆ ಐಟಿ ದಾಳಿಯಾದರು ನನ್ನ ಮೇಲಾಗಿಲ್ಲ. ಐಟಿ, ಇ.ಡಿ. ಇರೋರ ಕಡೆನೇ ಹೋಗಿ ಕದ ತಟ್ಟುತ್ತಿದ್ದೀರಲ್ಲಾ, ನನ್ನ ಆಸ್ತಿ ಹೆಚ್ಚಾಗಿದ್ರೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.
25 ಲಕ್ಷ ರೂ.: ಕೆಎಸ್ಸಾರ್ಟಿಸಿಯ 2 ಸಾವಿರ ಸಾಪ್ ಬಸ್‌ಗಳನ್ನು ಮಾರಿದರೆ ನನಗೆ ಹಣ ಸಿಗುತ್ತೆ ಎಂದು ಬಾಂಬೆಯಿಂದ ಯಾರನ್ನು ಕರೆತಂದಿದ್ರಿ? ಸಾರಿಗೆ ಸಚಿವರು ಟೆಂಡರ್ ಕರೆಯದೆ ಮಾರಲಾಗಲ್ಲ ಅಂದ್ರು, ಹಾರೋಹಳ್ಳಿಯ ಅಧಿಕಾರಿಯೊಬ್ಬರಿಂದ 25 ಲಕ್ಷ ಹಣ ಪಡೆದುಕೊಂಡಿದ್ದೀನಿ ಅವರನ್ನು ವರ್ಗಾವಣೆ ಮಾಡಿಸಿಕೊಡಿ ಎಂದು ಕೇಳಿದ್ರಿ, ಹಾರೋಹಳ್ಳಿ ಎಲ್ಲಿ ನಿಮ್ಮ ಕ್ಷೇತ್ರ ಎಲ್ಲಿ ಅದಕ್ಕೆ ನಾನು ಮಾಡಿಸಿ ಕೊಡಲಿಲ್ಲ. ಅದಕ್ಕೆ ನನ್ನನ್ನು ದೂರ್ತೀರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನಿಂದ ತಿರಸ್ಕೃತನಾಗಿದ್ದವರನ್ನು ಜೆಡಿಎಸ್‌ಗೆ ಕರೆತಂದು ಪಕ್ಷದ ರಾಜ್ಯಾಧ್ಯಕ್ಷ ಮಾಡಿದ್ದಕ್ಕೆ ಈ ಅತೃಪ್ತ ಪ್ರೇತಾತ್ಮ ಸುಳ್ಳು ಹೇಳಿಕೊಂಡು ನನ್ನನ್ನು ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ಶ್ರದ್ಧೆ, ನಿಷ್ಠೆ ಎಲ್ಲಿದೆ ನಿಮಗೆ? ಬಿ ಫಾರಂ ಕೊಟ್ಟು, ನಿಮ್ಮ ಪರ ಪ್ರಚಾರ ಮಾಡಿದವರ ಬಗ್ಗೆ ನಿಮಗೆ ನಿಷ್ಠೆ ಎಲ್ಲಿದೆ? ಗೆಲ್ಲಿಸಿದ ಜನರು ಮಳೆಯಿಂದ ಕಷ್ಟಕ್ಕೆ ಸಿಲುಕಿದಾಗ ನಿಮ್ಮ ಕರ್ತವ್ಯವನ್ನಾದರೂ ಏನು ಮಾಡಿದಿರಿ ಎಂದು ಪ್ರಶ್ನಿಸಿದರು.
ಒಂದು ಕಪ್ಪುಚುಕ್ಕೆ ಸಾಬೀತಾದರೆ ನಿವೃತ್ತಿ – ಸಾರಾ: ರೀ ವಿಶ್ವನಾಥ್, ನನ್ನ ವೈಯಕ್ತಿಕ ಜೀವನದಲ್ಲಾಗಲಿ, ಸಾರ್ವಜನಿಕ ಜೀವನದಲ್ಲಾಗಲಿ ಒಂದೇ ಒಂದು ಕಪ್ಪುಚುಕ್ಕೆ ಸಾಬೀತು ಮಾಡಿ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುತ್ತೇನೆ. ಇಲ್ಲವೇ ನಾನೇಳಿದ್ದು ಸುಳ್ಳು ಅಂತಾ ಒಪ್ಪಿಕೊಳ್ಳಿ. ನೀವು ಯಾರಿಗೆ ನಿಷ್ಠರಾಗಿದ್ದೀರಿ? ಯಾವ ಪುಣ್ಯಾತ್ಮ ನಿಮಗೆ ಹಳ್ಳಿಹಕ್ಕಿ ಅಂತ ಹೆಸರಿಟ್ಟನೋ ಬೇಸಿಗೆ ಕಾಲಕ್ಕೊಂದು, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು ಗೂಡು ಹುಡುಕಿಕೊಳ್ತೀರಿ. ಕಾಂಗ್ರೆಸ್‌ನಲ್ಲಿ ಬ್ಲಾಕ್‌ವೆುಲ್ ರಾಜಕೀಯ ಮಾಡಿ ಹೊರಬಂದ್ರಿ, ಈಗ ಅನರ್ಹರಾದ ಮೇಲೆ ಎಚ್ ಹೋಗಿ ಹುಚ್ಚ ವಿಶ್ವನಾಥ್ ಆಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಮ್ಮೆಲ್ಲರ ತಲೆ ಕಾಯಬೇಕಾದ ನೀನು ಹಾಳಾಗಿದ್ದಲ್ಲದೆ, ನಮ್ಮ ಇಬ್ಬರು ಎಂಎಲ್‌ಎಗಳನ್ನೂ ಬೇರೆ ಪಾರ್ಟಿಗೆ ತಲೆ ಹಿಡಿದವನು ನೀನು, ನಿಮ್ಮಿಂದ ಪಾಠ ಕಲಿಯಬೇಕಾ? ಮೊದಲು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಎಂದು ಸಾ.ರಾ.ಮಹೇಶ್ ವಾಗ್ಧಾಳಿ ನಡೆಸಿದರು.