Advertisement

ಫಾರೂಕ್ ಅಬ್ದುಲ್ಲಾಗೆ ದೊಡ್ಡ ಹೊಡೆತ: ಚುನಾವಣೆಗೂ ಮೊದಲೇ ಬಿಜೆಪಿ ಸೇರಿದ ಉನ್ನತ ಮಟ್ಟದ ನಾಯಕರು

09:51 AM Jan 29, 2024 | Team Udayavani |

ಶ್ರೀನಗರ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗಲೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪಕ್ಷಕ್ಕೆ ಭಾರಿ ಆಘಾತ ಎದುರಾಗಿದೆ. ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಲವಾರು ಉನ್ನತ ಮಟ್ಟದ ನಾಯಕರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂದ್ದು ಇದರಿಂದ ಫಾರೂಕ್ ಅಬ್ದುಲ್ಲಾ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

Advertisement

ಮಾಹಿತಿ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್‌ನ ಕಥುವಾ (ಗ್ರಾಮೀಣ) ಜಿಲ್ಲಾಧ್ಯಕ್ಷ ಸಂಜೀವ್ ಖಜುರಿಯಾ ಸೇರಿದಂತೆ ನ್ಯಾಷನಲ್ ಕಾನ್ಫರೆನ್ಸ್‌ನ ಹಲವು ಪ್ರಮುಖ ನಾಯಕರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಖಂಡರ ಜೊತೆಗೆ ಅವರ ಕೆಲವು ಬೆಂಬಲಿಗರು ಮತ್ತು ಜಿಲ್ಲೆಯ ಅಧಿಕಾರಿಗಳು ಕೂಡ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದಿಂದ ಹೊರ ಬಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಕ್ಷ ಸೇರಿದ ಖಜುರಿಯಾ ಅವರು ನರೇಂದ್ರ ಮೋದಿ ಸರ್ಕಾರದ ಕಲ್ಯಾಣ ಯೋಜನೆಗಳ ನೆಲಮಟ್ಟದ ಪ್ರಭಾವವನ್ನು ಶ್ಲಾಘಿಸಿದರು ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು.

ಜಮ್ಮುವಿನಲ್ಲಿರುವ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಘಟಕದ ಮುಖ್ಯಸ್ಥ ರವೀಂದರ್ ರೈನಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡವರನ್ನು ಸ್ವಾಗತಿಸಿದ ರೈನಾ, ಪ್ರದೇಶ ಅಥವಾ ಧರ್ಮವನ್ನು ಲೆಕ್ಕಿಸದೆ ಜನರ ಕಲ್ಯಾಣಕ್ಕಾಗಿ ಪಕ್ಷ ಕೆಲಸ ಮಾಡುತ್ತದೆ. ಮೋದಿ ಸರ್ಕಾರದ ಮೇಲೆ ನಂಬಿಕೆ ಇಟ್ಟಿರುವ ಜನರು ಬಿಜೆಪಿಯ ಚಿಹ್ನೆಯನ್ನು ಬಹಳ ಗೌರವದಿಂದ ಹಿಡಿದಿದ್ದಾರೆ. ಬಿಜೆಪಿಯು ಪ್ರತಿಯೊಂದು ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ” ಎಂದು ರಾಣಾ ಹೇಳಿದರು.

ಇದನ್ನೂ ಓದಿ: ಕಾಲುವೆಯಲ್ಲಿ ಪತ್ತೆಯಾಯ್ತು ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಯ ಮಗನ ಶವ, ಪ್ರಮುಖ ಆರೋಪಿ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next