Advertisement
ಇದು ಶುಭ ಸಮಾರಂಭಗಳು ನಡೆಯುವ ಸುಗ್ಗಿಕಾಲ. ಮದುವೆ, ನಿಶ್ಚಿತಾರ್ಥ, ಗೃಹ ಪ್ರವೇಶ, ಉಪನಯನ… ಹೀಗೆ, ವಾರದಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಅದೇ ಕಾರಣಕ್ಕೆ, ಪ್ರತಿ ಮನೆಗೂ ಯಾವುದಾದರೊಂದು ಸಮಾರಂಭದ ಆಮಂತ್ರಣ ಇದ್ದೇ ಇರುತ್ತದೆ. ತೀರಾ ಹತ್ತಿರದವರ ಮನೆಯ ಸಮಾರಂಭ ಅಂದರೆ ಸೀರೆ ಉಡಲೇಬೇಕು. ಅದಕ್ಕೊಪ್ಪುವ, ಸೀರೆಯ ಅದ್ದೂರಿತನವನ್ನೂ ಮೀರಿಸುವಂತೆ ಬ್ಲೌಸ್ ಹೊಲಿಸಬೇಕು. ಯಾವ ಬಗೆಯ ಸೀರೆ (ರೇಷ್ಮೆ, ಕಾಟನ್, ಶಿಫಾನ್, ಫ್ಲೋರಲ್ ಸೀರೆ…) ಎಂಬುದರ ಮೇಲೆ ಬ್ಲೌಸ್ ಡಿಸೈನ್ ಅವಲಂಬಿತವಾಗಿರುತ್ತದೆ.ಸಮಾರಂಭಗಳಲ್ಲಿ ಧರಿಸುವ ರೇಷ್ಮೆ ಸೀರೆಗೆ ಯಾವ ರೀತಿಯ ಬ್ಲೌಸ್ ಡಿಸೈನ್ ಚೆನ್ನಾಗಿ ಕಾಣಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಸಮಾರಂಭದ ದಿನ ಕುತ್ತಿಗೆಗೆ ಭರ್ಜರಿ ಆಭರಣ ಹಾಕುತ್ತೀರಿ ಎಂದಾದರೆ, ಡೀಪ್ ವಿ ನೆಕ್ ಡಿಸೈನ್ ಹೆಚ್ಚು ಸೂಕ್ತ. ಯಾವುದೇ ಸ್ಟೈಲ್‌ನಲ್ಲಿ ಸೀರೆ ಉಟ್ಟರೂ, ಕುತ್ತಿಗೆಯ ಆಭರಣ ಚೆನ್ನಾಗಿ ಕಾಣಿಸುವುದು ಈ ಶೈಲಿಯ ಬ್ಲೌಸ್‌ನಲ್ಲಿ ಅನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಟಿಪ್ಸ್: ಗುಜರಾತಿ ಶೈಲಿಯಲ್ಲಿ ಸೀರೆ ಉಟ್ಟಾಗ ಈ ಡಿಸೈನ್‌ನ ಬ್ಲೌಸ್‌ಗಳು ಚೆನ್ನಾಗಿ ಕಾಣುತ್ತವೆ. -ತ್ರೀ ಫೋರ್ಥ್ ಸ್ಲೀವ್ಸ್
ವಯಸ್ಸಾದವರು ಮಾತ್ರ ಮೊಣಕೈ ಉದ್ದದ ಬ್ಲೌಸ್ ತೊಡುತ್ತಾರೆ ಎಂಬ ಕಾಲ ಈಗಿಲ್ಲ. ತ್ರೀ ಫೋರ್ಥ್ ಸ್ಲೀವ್ಸ್ ಕೂಡಾ ಅತ್ಯಂತ ಸ್ಟೈಲಿಶ್ ಅನ್ನಿಸಿಕೊಂಡಿದೆ. ಬ್ಲೌಸ್‌ನ ಮುಂಭಾಗ ಸೀರೆಯಿಂದ ಮುಚ್ಚಲ್ಪಡುವುದರಿಂದ, ಹೊರಗೆ ಕಾಣಿಸುವ ಭಾಗವೆಂದರೆ ತೋಳುಗಳು ಮಾತ್ರ. ಹಾಗಾಗಿ, ತೋಳುಗಳ ಮೇಲೆ ಬಗೆಬಗೆಯ ರೀತಿ ಎಂಬ್ರಾಯxರಿ ಚಿತ್ತಾರ ಮೂಡಿಸಿ, ಸೀರೆ ಮತ್ತಷ್ಟು ಭರ್ಜರಿಯಾಗಿ ಕಾಣುವಂತೆ ಮಾಡಬಹುದು.
ಟಿಪ್ಸ್: ಪ್ಲೇನ್ (ಚಿತ್ತಾರವೇ ಇಲ್ಲದ) ಸೀರೆಗೆ, ಆಕರ್ಷಕ ಕಸೂತಿ ಮಾಡಿದ ತ್ರೀ ಫೋರ್ಥ್ ಸ್ಲಿàವ್ಸ್ ಬ್ಲೌಸ್‌ಗಳನ್ನು ಧರಿಸಿದರೆ ಕ್ಲಾಸಿಕ್ ಲುಕ್ ಸಿಗುತ್ತದೆ.
Related Articles
ಸೀರೆ ಉಟ್ಟರೆ ಗೌರಮ್ಮನ ಥರ ಕಾಣಿವಿ ಅನ್ನುವ ಹುಡುಗಿಯರಿಗೆ ಒಪ್ಪುವ ಡಿಸೈನ್ ಇದು. ಯಾಕಂದ್ರೆ, ಕ್ರಾಪ್ಡ್ ಕಾಟನ್ ಬ್ಲೌಸ್‌ಗಳು ಸಾಂಪ್ರದಾಯಕ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡುತ್ತವೆ. ಈ ಬಗೆಯ ಬ್ಲೌಸ್ ಧರಿಸಿ ಆಫೀಸ್‌ಗೂ ಹೋಗಬಹುದು. ಆಫೀಸ್ ಪಾರ್ಟಿಗೂ ಇದನ್ನು ತೊಡಬಹುದು. ಸಂಜೆ ಯಾವುದಾದರೂ ಫಂಕ್ಷನ್ ಇದ್ದರೆ (ಆರತಕ್ಷತೆ) ಬೆಳಗ್ಗೆ ಆಫೀಸ್‌ಗೆ ಹೋಗುವಾಗಲೇ ಕ್ರಾಪ್ಡ್ ಕಾಟನ್ ಬ್ಲೌಸ್-ಸೀರೆ ಧರಿಸಿ ರೆಡಿಯಾಗಿ ಹೋಗಬಹುದು. ಸಂಜೆ, ಸ್ವಲ್ಪ ಮೇಕಪ್ ಮತ್ತು ಸರಿಯಾದ ಆಭರಣಗಳನ್ನು ಧರಿಸಿದರೆ, ಫಂಕ್ಷನ್‌ಗೆ ಹೋಗಲು ರೆಡಿ! ಆಫೀಸ್‌ನಲ್ಲಿ ಢಾಳಾಗಿಯೂ ಕಾಣಿಸದೆ, ಸಂಜೆಯ ಸಮಾರಂಭದಲ್ಲಿ ಕ್ಲಾಸಿಯಾಗೂ ಕಾಣಿಸುವಂತೆ ಮಾಡುವುದು ಇದರ ವೈಶಿಷ್ಟé.
ಟಿಪ್ಸ್: ಗ್ರ್ಯಾಂಡ್ (ಹೆಚ್ಚು ಕಸೂತಿ, ಬಾರ್ಡರ್, ಪ್ರಿಂಟ್) ಇರುವ ಸೀರೆಗೆ ಈ ಬ್ಲೌಸ್ ಒಪ್ಪುವುದಿಲ್ಲ. ಒಂದೇ ಬಣ್ಣದ, ಸಿಂಪಲ್ ಸಿಲ್ಕ್ ಸೀರೆಗೆ ಕಾಂಟ್ರಾಸ್ಟ್ (ವಿರುದ್ಧ ಬಣ್ಣದ) ಕಲರ್‌ನ ಬ್ಲೌಸ್ ಹೊಲಿಸಿಕೊಳ್ಳಿ.
Advertisement
– ಲೀಫ್ ನೆಕ್ ಡಿಸೈನ್ಇತ್ತೀಚಿನ ದಿನಗಳಲ್ಲಿ ಯುವತಿಯರು ಅನುಸರಿಸುತ್ತಿರುವ ಟ್ರೆಂಡ್ ಇದು. ಅಂದದ ಕುತ್ತಿಗೆಯುಳ್ಳವರು, ಚೆಂದದ ನೆಕ್‌ಪೀಸ್ (ಕುತ್ತಿಗೆಯ ಆಭರಣ) ಎಲ್ಲರಿಗೂ ಕಾಣಿಸಬೇಕು ಅನ್ನುವವರು “ಲೀಫ್ ನೆಕ್ ಡಿಸೈನ್’ನಲ್ಲಿ ಬ್ಲೌಸ್ ಹೊಲಿಸಿಕೊಳ್ಳಬಹುದು. ಕುತ್ತಿಗೆಯ ಭಾಗ ಸ್ವಲ್ಪ ಜಾಸ್ತಿಯೇ ಕಾಣಿಸುವುದರಿಂದ ಮುಜುಗರ ಆಗುತ್ತದೆ ಎನ್ನುವವರು ಹೊಲಿಸುವ ಮೊದಲು ಯೋಚಿಸುವುದು ಅಗತ್ಯ!
ಟಿಪ್ಸ್: ಈ ಬಗೆಯ ಬ್ಲೌಸ್ ತೊಟ್ಟಾಗ ಕುತ್ತಿಗೆಗೆ ಸುಂದರವಾದ ಆಭರಣ ಧರಿಸಿ. -ಡೀಪ್ ಬ್ಯಾಕ್ ಡಿಸೈನ್
ಸಿಂಪಲ್ ಸೀರೆ ಜೊತೆಗೆ ಡೀಪ್ ಬ್ಯಾಕ್ ಡಿಸೈನ್‌ನ ಬ್ಲೌಸ್ ತೊಡುವುದು ಇವತ್ತಿನ ಟ್ರೆಂಡ್. ಒಂದೇ ಪಟ್ಟಿಯಷ್ಟು ಅಗಲದ ಡೀಪ್ ಬ್ಯಾಕ್ ಬ್ಲೌಸ್, ಆಕರ್ಷಕ ಚಿತ್ತಾರಗಳ ಜೊತೆಗೆ, ದಾರ ಕಟ್ಟುವ ವಿನ್ಯಾಸದ ಬ್ಲೌಸ್‌ಗಳು ಹುಡುಗಿಯರ ಮನಸ್ಸನ್ನು ಗೆದ್ದಿವೆ.
ಟಿಪ್ಸ್: ಡೀಪ್ ಬ್ಯಾಕ್ ಡಿಸೈನ್ ಜೊತೆಗೆ ಸಿಂಗಲ್ ಪಿನ್ (ನೆರಿಗೆ ಹಾಕದೆ) ಸೀರೆ ಉಟ್ಟರೆ ಚೆನ್ನ.