Advertisement
ಇಂತಿಪ್ಪ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟಾದರೆ… ಆರೋಗ್ಯದಲ್ಲಿ ಏರುಪೇರಾಗಿ ರಕ್ತದ ಅಗತ್ಯಬಿದ್ದರೆ… ಹುಟ್ಟಿಕೊಳ್ಳುವ ಏಕೈಕ ಪ್ರಶ್ನೆ: “ಬ್ಲಡ್ ಬ್ಯಾಂಕ್ ಎಲ್ಲಿದೆ?’. ರಕ್ತ ಎಲ್ಲಿ ಸುಲಭವಾಗಿ ಸಿಗುತ್ತೆ ಎನ್ನುವ ಅರಿವೂ ಈ ಹೊತ್ತಿನಲ್ಲಿ ಬಹಳ ಮುಖ್ಯ. ಬೇಸಿಗೆಯ ಅಂಚಿನಲ್ಲಿರುವ ನಗರಿಯಲ್ಲಿ, ನೂರಾರು ರಕ್ತದಾನ ಶಿಬಿರಗಳು ಜರುಗಿವೆ. ಹಾಗೆ ಮಳೆಗಾಲ ಕಾಲಿಡುತ್ತಿದ್ದಂತೆ, ಜ್ವರ, ಇನ್ನಿತರ ಕಾಯಿಲೆಗಳು ದಾಳಿ ಇಟ್ಟು, ಮನುಷ್ಯನನ್ನು ಆಪತ್ತಿಗೆ ತಳ್ಳುವ ಸಾಧ್ಯತೆಯೂ ಇರುತ್ತದೆ. ಈ ವೇಳೆ ಖಂಡಿತ ರಕ್ತದ ಅಗತ್ಯ ಬೀಳುತ್ತದೆ. ಆಗಲೇ, ಬ್ಲಿಡ್ ಬ್ಯಾಂಕ್ ನೆನಪಾಗುತ್ತದೆ.
Related Articles
Advertisement
ಬ್ಲಡ್ ಬ್ಯಾಂಕ್‌ಗೆ ಹೋಗುವ ಮುನ್ನ…– ಅವಶ್ಯಕತೆಗೆ ಅನುಗುಣವಾಗಿ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಪರವಾನಿಗೆ ಹೊಂದಿದ ರಕ್ತನಿಧಿಗಳಿಂದ ಪಡೆಯಬೇಕು. – ರಕ್ತದ ಲೇಬಲ್ ಮೇಲೆ ರಕ್ತದ ಗುಂಪು, ರಕ್ತವನ್ನು ಸಂಗ್ರಹಿಸಿದ ದಿನಾಂಕ, ಅವಧಿ ಮುಗಿಯುವ ದಿನಾಂಕ ಇತ್ಯಾದಿಗಳನ್ನು ನಮೂದಿಸಿರುವ ಬಗ್ಗೆ ಪರಿಶೀಲಿಸಿ, ರಕ್ತ ಪಡೆಯಬೇಕು. – ಲೇಬಲ್ ಇಲ್ಲದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಪಡೆಯಬಾರದು. – ರಕ್ತ ಪಡೆಯುವ ಮೊದಲು ದಾನಿಯ ರಕ್ತದೊಂದಿಗೆ ರೋಗಿಯ ರಕ್ತವನ್ನು ಹೊಂದಾಣಿಕೆ ಮಾಡಲಾಗಿದೆಯೇ ಎಂಬುದನ್ನು ಗಮನಿಸಿರಬೇಕು. – ರಕ್ತವು ಎಚ್‌ಐವಿ-1 ಮತ್ತು 2, ಎಚ್‌ಬಿಎಸ್‌ಎಜಿ, ಎಚ್‌ಸಿವಿ, ವಿಡಿಆರ್‌ಎಲ್, ಮಲೇರಿಯಾ, ರಕ್ತದ ಗುಂಪು ಮತ್ತು ಆರ್‌ಎಚ್ ಫ್ಯಾಕ್ಟರ್‌ಗಳ ಪರೀಕ್ಷೆಗೆ ಒಳಪಟ್ಟಿದೆಯೇ ಎಂಬುದನ್ನು ತಪ್ಪದೇ ತಿಳಿದುಕೊಳ್ಳಬೇಕು. – ರಕ್ತ ನಿಧಿಗಳಲ್ಲಿ ರಕ್ತ ಪಡೆಯುವಾಗ ರಕ್ತದ ಬಣ್ಣ ಕೆಟ್ಟಿರುವುದು ಅಥವಾ ರಕ್ತ ಹೆಪ್ಪು ಗಟ್ಟಿರುವುದು ಕಂಡುಬಂದಲ್ಲಿ ಅಂಥ ರಕ್ತವನ್ನು ಪಡೆಯಬಾರದು. – ರಕ್ತದಾನ ಮಾಡುವಾಗ ಅಥವಾ ರಕ್ತ ಪಡೆಯುವಾಗ ರಕ್ತದ ವಿಧಗಳು ಬಹಳ ಮುಖ್ಯವಾಗುತ್ತದೆ. ತಪ್ಪು ವಿಧದ ರಕ್ತ ಪಡೆದರೆ, ಅವಘಡ ಕಟ್ಟಿಟ್ಟಬುತ್ತಿ. ರಕ್ತದ ವಿಧಗಳು
ಎ, ಬಿ, ಎಬಿ ಮತ್ತು ಒ ಹುಷಾರು…
“ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ರಕ್ತ ಬೇಕಾಗಿದೆ. ದಯವಿಟ್ಟು, ಈ ನಂಬರ್‌ಗೆ ಕರೆಮಾಡಿ ಮತ್ತು ಈ ಸಂದೇಶವನ್ನು ಆದಷ್ಟು ಜನರಿಗೆ ಫಾರ್ವರ್ಡ್ ಮಾಡಿ’ ಎಂಬ ಸಂದೇಶ ಇತ್ತೀಚಿನ ದಿನಗಳಲ್ಲಿ ವಾಟ್ಸಾéಪ್, ಫೇಸ್‌ಬುಕ್ಕುಗಳಲ್ಲಿ ಸಾಮಾನ್ಯವಾಗಿದೆ. ನಂಬರ್ ಸರಿ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ನಿಜವಾಗಿಯೂ ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸಂದೇಶ ಕಳುಹಿಸುವಾಗ ದಿನಾಂಕ, ಆಸ್ಪತ್ರೆ ಹಾಗೂ ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಡಾಕ್ಟರ್ ಹೇಳ್ತಾರೆ…
ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಸರ್ಕಾರದ ಸಹಾಯವಾಣಿ 104 ಅಥವಾ ಸಂಕಲ್ಪ್ ಇಂಡಿಯಾ ಫೌಂಡೇಷನ್‌ನ ಹೆಲ್ಪ್ಲೈನ್ 9480044444ಗೆ ಕರೆಮಾಡಿ. ನಿಮ್ಮ ಅವಶ್ಯಕತೆಯ ರಕ್ತ, ಯಾವ ರಕ್ತನಿಧಿಯಲ್ಲಿದೆ ಎಂಬುದನ್ನು ಅವರು ತಿಳಿಸುತ್ತಾರೆ. ಡ್ರಗ್ಸ್ ಕಂಟ್ರೋಲ್ ಬೋರ್ಡ್‌ನಿಂದ ಪರವಾನಿಗೆ ಪಡೆದ ರಕ್ತನಿಧಿಗಳಲ್ಲಿ ಲಭ್ಯವಿರುವ ರಕ್ತದ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ತಿಳಿಯಬಹುದು.
– ಡಾ. ಸುಮಿತ್ರಾ ಬೆಂಗ್ಳೂರಿನ ಟಾಪ್ 10 ರಕ್ತನಿಧಿಗಳು
1. ಎಂ.ಎಸ್.ರಾಮಯ್ಯ ಮೆಡಿಕಲ… ಟೀಚಿಂಗ್ ಆಸ್ಪತ್ರೆ
9845120603, 080- 22183100
2. ರಾಷ್ಟ್ರೋತ್ಥಾನ ರಕ್ತನಿಧಿ
9480436702, 080- 26610916
3. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ
9449621169, 080- 25327714
4. ಜಯದೇವ ಹೃದ್ರೋಗ ಸಂಸ್ಥೆ
9886812718, 080- 26534600
5. ವೈದೇಹಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆ
9916749060, 080- 28410874
6. ಕಿಮ್ಸ… ಆಸ್ಪತ್ರೆ
9448559664, 080- 080- 2667 3056
7. ಟ್ರಾನ್ಸ್‌ಪ್ಯೂಷನ್ ಮೆಡಿಸಿನ್ ಸೆಂಟರ್ (ನಿಮ್ಹಾನ್ಸ್ )
9448509793, 080- 2665712
8. ಸಂಜೀವಿನಿ ಟ್ರಸ್ಟ್, ಜಯನಗರ, ವಾಲೆಂಟರಿ ರಕ್ತನಿಧಿ
9342171911, 080- 26494748
9. ಕೆ.ಸಿ. ಸಾರ್ವಜನಿಕ ಆಸ್ಪತ್ರೆ ರಕ್ತನಿಧಿ
9742279098, 080- 23567673
10. ಶ್ರೀ ಸತ್ಯಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆ
9741597101/ 080- 28411500 ಜಾಲತಾಣಕ್ಕೆ ಭೇಟಿ ನೀಡಿ
www.friends2support.org
www.sankalpindia.net
www.bloodhelpers.com
www.bharatbloodbank.com ಫೇಸ್‌ಬುಕ್ ಪೇಜ್
https://www.facebook.com/BloodDonorsOnline/
https://www.facebook.com/Voluntary-blood-donors-in-bangalore-336824313025939/ 1. Blood Banking
ವಿಶೇಷತೆ: ಬ್ಯಾಂಕ್ ಮಾದರಿಯ ಖಾತೆ, ಉಳಿತಾಯ, ಟ್ರಾನ್ಸ್‌ಫರ್ ಮುಂತಾದ ವಿಭಾಗ ಹೊಂದಿರುವ ಈ ಆ್ಯಪ್, ಎಲ್ಲರ ಮೊಬೈಲಿನಲ್ಲೂ ಇರಬೇಕಾದಂಥದ್ದು. ಬ್ಲಿಡ್ ಬ್ಯಾಂಕ್‌ಗಳ ಮಾಹಿತಿಗಳೂ ಇಲ್ಲಿ ಸಿಗುತ್ತವೆ.
ನಿರ್ಮಾತೃ: ಸೆಂಥಿಲ್ ಕುಮಾರ್, ಬೆಂಗಳೂರು 2.Ausodhyatmika
ವಿಶೇಷತೆ: 100 ಕಿಲೋಮೀಟರ್ ಅಂತರದಲ್ಲಿರುವ ರಕ್ತನಿಧಿಗಳ ಮಾಹಿತಿ ಸಿಗುತ್ತದೆ. ಅಗತ್ಯವಿರುವ ರಕ್ತ ಯಾವ ನಿಧಿಯಲ್ಲಿದೆ ಎಂಬುದರ ಮಾಹಿತಿ ಇಲ್ಲಿ ಲಭ್ಯ.
ನಿರ್ಮಾತೃ: ಕೃಷ್ಣಕಾಂತ್ ತಿವಾರಿ, ಬೆಂಗಳೂರು ರಾಜು ಖಾರ್ವಿ ಕೊಡೇರಿ