ಚಿತ್ತಾಪುರ: ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ಕಾಪಾಡು ವುದಲ್ಲದೇ ಮತ್ತೂಬ್ಬರ ಜೀವ ಉಳಿಸಿದ ಸಂತೃಪ್ತಿ ಸಿಗುತ್ತದೆ ಎಂದು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ದಿ| ವಿಠ್ಠಲ ಹೇರೂರ ಅವರ ಜನ್ಮದಿನದ ಪ್ರಯುಕ್ತ ಕೋಲಿ ಸಮಾಜದ ತಾಲೂಕು ಘಟಕದ ವತಿಯಿಂದ ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ರಕ್ತದಾನ ಪವಿತ್ರವಾದ ದಾನ.
ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೂಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಹಾಗೆಯೇ ಅತಿಯಾದ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿರುವವರು ರಕ್ತದಾನ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವುದರ ಜತೆಗೆ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖೀ ಕಾರ್ಯಗಳಲ್ಲಿ ಒಂದಾಗಿದೆ.
ಇಂತಹ ಮಹತ್ವದ ಕಾರ್ಯ ದಿ| ವಿಠ್ಠಲ ಹೇರೂರ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೇಮೂದ್ ಸಾಹೇಬ್, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಉಪಾಧ್ಯಕ್ಷ ಮಹ್ಮದ್ ರಸೂಲ್ ಮುಸ್ತಫಾ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ,
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಸಂಕನೂರ, ಯುವ ಅಧ್ಯಕ್ಷ ಶಿವಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯ ಸ್ವಾಮಿ, ಟೋಪಣ್ಣ ಕೊಮಟೆ, ಮುಖಂಡರಾದ ರಮೇಶ ಮರಗೋಳ, ಮಲ್ಲಿಕಾರ್ಜುನ ಎಮ್ಮೆನೋರ,
ಅಜೀಜ್ ಸೇಠ ರಾವೂರ, ಮಲ್ಲಪ್ಪ ಹೊಸ್ಮನಿ, ಮನ್ಸೂರ್ ಪಟೇಲ್, ಶಿವಕುಮಾರ ಸುಲ್ತಾನಪುರ, ನಿಂಗಣ್ಣ ಹೆಗಲೇರಿ, ದೇವಿಂದ್ರ ಅಣಕಲ್, ಶಿವಾಜಿ ಕಾಶಿ, ಜಫರುಲ್ ಹಸನ್, ದಶರಥ ದೊಡ್ಮನಿ, ಭೀಮು ಹೋತಿನಮಡಿ, ಇಸ್ಮಾಯಿಲ್ ಸಾಬ್ ಕಮರವಾಡಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ರಾಮಲಿಂಗ ಬಾನಾರ್, ಶರಣು ಡೋಣಗಾಂವ್, ಸಾಬಣ್ಣ ಭರಾಟೆ ಇದ್ದರು.