Advertisement

‘ರಕ್ತದಾನ ದೇಶಸೇವೆಯ ಒಂದು ಭಾಗ ‘

11:33 PM May 31, 2019 | Team Udayavani |

ಉಡುಪಿ: ರಕ್ತದಾನ ಕೂಡ ದೇಶಸೇವೆಯ ಒಂದು ಭಾಗವಾಗಿದ್ದು ದೇಶದ ಗಡಿ ಕಾಯುತ್ತಿರುವ ಯೋಧರ ನಿಸ್ವಾರ್ಥ ಸೇವೆಗೆ ಸಮಾನವಾಗಿದೆ. ರಕ್ತದಾನ ಮಾಡುವುದರಿಂದ ದೇಶ ಸೇವೆಯ ಸಾರ್ಥಕತೆಯನ್ನು ಅನುಭವಿಸಬಹುದು ಎಂದು ಮಾಜಿ ಯೋಧ, ಎಂ.ಐ.ಟಿ. ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್‌ ಹೇಳಿದರು.

Advertisement

ಅವರು ಮಣಿಪಾಲದ ಎಂಐಟಿಯಲ್ಲಿ ಡಾ| ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಉಡುಪಿ ಮೊಗವೀರ ಯುವ ಸಂಘಟನೆ ಉಡುಪಿ ಬೆಳ್ಳಂಪಳ್ಳಿ ಘಟಕ, ಭದ್ರತಾ ವಿಭಾಗ ಮಾಹೆ ಇವರ ಆಶ್ರಯದಲ್ಲಿ ರಕ್ತನಿಧಿ ವಿಭಾಗ ಕೆಎಂಸಿ ಇವರ ಸಹಕಾರದೊಂದಿಗೆ ಮಂಗಳವಾರ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಮಣಿಪಾಲ ಆಸ್ಪತ್ರೆಯಲ್ಲಿ ರಕ್ತದ ತೀವ್ರ ಕೊರತೆ ಕಾಣುತ್ತಿದ್ದು ರೋಗಿಗಳ ಸೇವೆಯಲ್ಲಿ ಅನಾನುಕೂಲತೆಯನ್ನು ಗಮನಿಸಿ ತುರ್ತಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಮಣಿಪಾಲ ವಿಶ್ವವಿದ್ಯಾನಿಲಯದ ಜನರಲ್ ಎಂಜಿನಿಯರಿಂಗ್‌ ನಿರ್ದೇಶಕ ಕರ್ನಲ್ ಸಿ. ಪ್ರಕಾಶ್‌ ಚಂದ್ರ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಎಂಐಟಿ ಪ್ರಾಧ್ಯಾಪಕ ಡಾ| ನಾರಾಯಣ ಶೆಣೈ, ಮಾಹೆ ಅಧಿಕಾರಿ ಜೈ ವಿಟuಲ್, ಭದ್ರತಾ ಅಧಿಕಾರಿ ಅಶೋಕ್‌ ರಾವ್‌, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್‌ ಕರ್ಕೇರಾ, ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ , ಮೊಗವೀರ ಯುವ ಸಂಘಟನೆ ಬೆಳ್ಳಂಪಳ್ಳಿ ಘಟಕದ ಅಧ್ಯಕ್ಷ ನವೀನ್‌ ತಿಂಗಳಾಯ ಉಪಸ್ಥಿತರಿದ್ದರು. ರಕ್ತದಾನಿ ಸತೀಶ್‌ ಸಾಲ್ಯಾನ್‌ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next