Advertisement
ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಎನ್‌ಪಿಎಸ್ ವ್ಯವಸ್ಥೆಯಲ್ಲಿ ನೌಕರರ ಮೂಲ ವೇತನ ಮತ್ತು ತುಟಿÂ ಭತ್ಯೆಯಲ್ಲಿ ತಲಾ ಶೇ. 10 ಪ್ರತಿಶತ ಕಟಾವು ಮಾಡಿ ನಿವೃತ್ತಿ ನಂತರ ಪಿಂಚಣಿ ನೀಡಲಾಗುತ್ತದೆ. ಅಲ್ಲದೇ, ನೌಕರರಿಂದ ಕಟಾವು ಮಾಡಿರುವ ಹಣ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ನೌಕರರಲ್ಲಿ ಆತಂಕ ಸೃಷ್ಟಿಸಿದೆ. ಹಾಗಾಗಿ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತಂದು ಸರ್ಕಾರಿ ನೌಕರರ ಕುಟುಂಬ ಹಿತ ಕಾಪಾಡಬೇಕು ಎಂದು ಸಂಘದಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.
ಪಾಟೀಲ, ಮಹೇಶ ಪಾಟೀಲ, ವಸಂತ ಕುಮಾರ, ಅಜ್ಮತ ಉಸ್ತಾದ, ಜಮಾಲುದ್ದೀನ್, ವಿಠ್ಠಲ್ ಪವಾರ, ರಾಘವೇಂದ್ರ ಅಂಬಾರೆ, ರವಿಚಂದ್ರ ನಾಯ್ಕಲ, ಮನೋಹರ ನಂದೆಪಲ್ಲಿ, ಸಂತೋಷ ನೀರೆಟಿ, ಬಾಲರಾಜ ಚಂಡರಕಿ, ಶಿವರಾಜ ಸಾಕಾ, ಭೀಮಣ್ಣಗೌಡ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.