ಮುಂಬಯಿ: ಸಂತ ನಿರಂಕಾರಿ ಮಂಡಳದಿಂದ ಕೋವಿಡ್ ವ್ಯಾಕ್ಸಿನೇಶನ್ ಹಾಗೂ ರಕ್ತದಾನ ಶಿಬಿರ ಮೇ 14ರಂದು ಚೆಂಬೂರಿನ ಮಾಹೂಲ್ ರಸ್ತೆಯಲ್ಲಿರುವ ಮುಂಬಯಿಯ ಮುಖ್ಯ ನಿರಂಕಾರಿ ಸತ್ಸಂಗ ಭವನದಲ್ಲಿ ಜರಗಿತು.
ಸಂತ ನಿರಂಕಾರಿ ಮಿಷನ್ ಕೈಗೊಂಡ ಈ ಕಾರ್ಯಕ್ರಮದ ಬಗ್ಗೆ ಬಿಎಂಸಿಯ ಸ್ಥಳೀಯ ಅಧಿಕಾರಿಗಳು ಶ್ಲಾಘಿಸಿದರು. ಸ್ಥಳೀಯ ನಾಗರಿಕರು ಈ ಸೌಲಭ್ಯದ ಕುರಿತು ಸಂತೋಷ ವ್ಯಕ್ತಪಡಿಸಿದರು.
ಕೊರೊನಾ ಸೊಂಕಿನ ಆರಂಭದಿಂದಲೂ ಸಂತ ನಿರಂಕಾರಿ ಮಿಷನ್ ದೇಶಾದ್ಯಂತ ಹಲವಾರು ವಿಧಗಳಲ್ಲಿ ಮಾನವೀಯತೆಯ ಸೇವೆ ಸಲ್ಲಿಸುತ್ತಿದೆ. ಕೆಲವು ದಿನಗಳ ಹಿಂದೆ ದಿಲ್ಲಿಯ ನಿರಂಕಾರಿ ಸತ್ಸಂಗ ಭವನವನ್ನು 1,000 ಹಾಸಿಗೆಗಳ ಕೋವಿಡ್ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಹರಿಯಾಣದ ಕೆಲವು ನಿರಂಕಾರಿ ಭವನಗಳನ್ನೂ ಕೋವಿಡ್ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.
ಮಹಾರಾಷ್ಟ್ರದಲ್ಲಿ ನಂಗಾಂಬ್, ತಾಲ…ಡಾಂಡ್ ಜಿಲ್ಲೆಯಲ್ಲಿ ನಿರಂಕಾರಿ ಭವನ ಪುಣೆ ಕೋವಿಡ್ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಸತಾರಾ ಮತ್ತು ರಾಯಗಢ ಜಿಲ್ಲೆಗಳಲ್ಲಿ ಕೊರೊನಾ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ಅವರ ಆವಶ್ಯಕತೆಗಳನ್ನು ನೋಡಿಕೊಳ್ಳಲು ಆಹಾರಗಳನ್ನು ನೀಡಲಾಗುತ್ತದೆ.
ರಕ್ತದಾನ ಶಿಬಿರ
ಮೇ 16ರಂದು ದಾದರ್‌ನ ಸಂತ ನಿರಂಕರಿ ಸತ್ಸಂಗ ಭವನದಲ್ಲಿ ಸಂತ ನಿರಂಕಾರಿ ಮಿಷನ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 81 ನಿರಂಕಾರಿಗಳು ಪಾಲ್ಗೊಂಡರು. ರಕ್ತವನ್ನು ಮುಂಬಯಿಯ ಸಂತ ನಿರಂಕಾರಿ ರಕ್ತ ಬ್ಯಾಂಕ್ ಸಂಗ್ರಹಿಸಿದೆ. ಎಸ್‌ಎನ್‌ಸಿಎಫ್ ಸ್ವಯಂ ಸೇವಕರ ಸಹಾಯದಿಂದ ಸ್ಥಳೀಯ ಸೇವಾದಳ ಘಟಕದ ಸ್ಥಳೀಯ ಪ್ರಬಂಧಕ ಮತ್ತು ಸೇವಾದಳದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಬಿರವನ್ನು ಉತ್ತಮ ವಾಗಿ ಆಯೋಜಿಸಲಾಗಿತ್ತು.