Advertisement
ಹಲವಾರು ವರ್ಷಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಈಗ “ಖಂಡಿತಾ ಇದೆ’ ಎಂಬ ಉತ್ತರ ಸಿಕ್ಕಿದೆ. ನಮ್ಮ ದೇಹದಲ್ಲೇ “ಸದಾಕಾಲ ಇರುವ’ ಈ ವಿಷಕಾರಿ ರಾಸಾಯನಿಕಗಳಿಂದ ಮುಕ್ತಿ ಪಡೆಯಲು ಇರುವ ಏಕೈಕ ದಾರಿಯೆಂದರೆ “ರಕ್ತದಾನ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ!
ಸಾಮಾನ್ಯ ಜನರಿಗಿಂತ ಹೆಚ್ಚು ಈ ಪಿಎಫ್ಎಎಸ್‌ಗಳಿಗೆ ಒಡ್ಡಲ್ಪಡುವವರೆಂದರೆ ಅಗ್ನಿಶಾಮಕ ಸಿಬ್ಬಂದಿ. ಹೀಗಾಗಿ, ಆಸ್ಟ್ರೇಲಿಯಾದ 285 ಮಂದಿ ಅಗ್ನಿಶಾಮಕ ಸಿಬ್ಬಂದಿಯನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇವರೆಲ್ಲರೂ ಸುಮಾರು 12 ತಿಂಗಳ ಕಾಲ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡಿದ್ದರು. ನಿರಂತರವಾಗಿ ರಕ್ತದಾನ ಮಾಡಿದ ಇವರ ದೇಹದಲ್ಲಿ ವಿಷಕಾರಿ ರಾಸಾಯನಿಕದ ಪ್ರಮಾಣ ತಗ್ಗುತ್ತಾ ಹೋಗಿರುವುದು ಅಧ್ಯಯನದಿಂದ ದೃಢಪಟ್ಟಿದೆ. ವಿಶೇಷವೆಂದರೆ, ರಕ್ತದಾನಕ್ಕಿಂತಲೂ ಪ್ಲಾಸ್ಮಾ ದಾನ ಮಾಡಿದವರ ರಕ್ತನಾಳಗಳಲ್ಲಿ ಕೆಮಿಕಲ್‌ಗಳ ಪ್ರಮಾಣ ಗಣನೀಯವಾಗಿ ಕುಸಿದಿದೆ.
Related Articles
Advertisement
ಏನಿದು “ಫಾರೆವರ್ ಕೆಮಿಕಲ್ಸ್’?“ಫಾರೆವರ್ ಕೆಮಿಕಲ್ಸ್’ (ಪಿಎಫ್ಎಎಸ್) ಎನ್ನುವುದು ಹೆಚ್ಚಾಗಿ ಅಡುಗೆಮನೆಯಲ್ಲಿ ಬಳಸುವ ನಾನ್ ಸ್ಟಿಕ್ ಪಾತ್ರೆಗಳು, ಜಲ-ನಿರೋಧಕ ವಸ್ತುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳಲ್ಲಿ ಕಂಡುಬರುವಂಥ ವಿಷಕಾರಿ ರಾಸಾಯನಿಕ. ಇದು ವಿಭಜನೆಗೊಳ್ಳದ ರಾಸಾಯನಿಕ ಕಣ. ಗಾಳಿ, ನೀರು ಅಥವಾ ಆಹಾರದ ಮೂಲಕ ಈ ರಾಸಾಯನಿಕವು ನಮ್ಮ ಶರೀರದೊಳಕ್ಕೆ ಸೇರಿ ರಕ್ತದೊಳಗೆ ಸಂಗ್ರಹವಾಗುತ್ತದೆ. ಅಲ್ಲದೇ, ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿ, ಅಸ್ತಮಾ ಹಾಗೂ ಇತರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.