ಅಸ್ವಸ್ಥಗೊಂಡಿರುವ ನಿಶ್ಚಿತ್(2 ವರ್ಷ) ಜ.9 ರಂದು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನು ಗುಣಮುಖನಾಗಲು ಹೆಚ್ಚಿನ ಚಿಕಿತ್ಸೆಯ ಅನಿವಾರ್ಯತೆ ಇದ್ದು ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು ರೂ.8 ಲಕ್ಷಕ್ಕೂ ಅಧಿಕ ಮೊತ್ತ ತಗಲುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ .
Advertisement
ಅತ್ಯಂತ ಆರ್ಥಿಕ ಸಂಕಷ್ಟದಲ್ಲಿರುವ ಮಂಜುನಾಥ ಪೂಜಾರಿಯವರು ಸೌಕೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮೇಳದಲ್ಲಿ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಕಳೆದ ಆರು ತಿಂಗಳಿನಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿರುವ ಈ ಬಡ ಕುಟುಂಬ ಮುಂದಿನ ಚಿಕಿತ್ಸೆಗಾಗಿ ಮೊತ್ತವನ್ನು ಹೊಂದಿಸಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದ್ದು ಸಹೃದಯಿಗಳ ಉದಾರ ನೆರವನ್ನು ಕೋರಿದ್ದಾರೆ.
ಪ್ರತಿಮಾ (ನಿಶ್ಚಿತ್ ತಾಯಿ)
ಕೆನರಾ ಬ್ಯಾಂಕ್ ಶಾಖೆ : ತೆಕ್ಕಟ್ಟೆ
ಖಾತೆ ಸಂಖ್ಯೆ: 0653108024737
IFSC: CNRB0000653