Advertisement

ನಂತೂರು-ಕದ್ರಿ ಗುಡ್ಡ ಜರಿತ ತಡೆಗಟ್ಟಿರಿ

10:00 PM Feb 29, 2020 | mahesh |

ಮಂಗಳೂರು ನಗರದೊಳಗಿನ ಹಲವು ರಸ್ತೆ ಬದಿಗಳಲ್ಲಿ ಎತ್ತರವಾದ ಗುಡ್ಡ ಪ್ರದೇಶಗಳಿವೆ. ಇಂತಹ ಪ್ರದೇಶಗಳಲ್ಲಿ ಹಲವು ಮನೆಗಳಿವೆ. ಇವುಗಳ ಪೈಕಿ ನಂತೂರು ವೃತ್ತದಿಂದ (ಪಂಪ್‌ವೆಲ್‌ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ) ಸ್ವಲ್ಪ ಮುಂದೆ ಬಂದಲ್ಲಿ ರಸ್ತೆ ಬದಿಯ ಗುಡ್ಡ ಜರಿದು ಮಣ್ಣು ರಸ್ತೆಗೆ ಉರುಳಲು ಪ್ರಾರಂಭವಾಗಿದೆ. ಈ ರಸ್ತೆಯಲ್ಲಿ ಪಣಂಬೂರು ಹಾಗೂ ಇತರ ದೂರದ ಪ್ರದೇಶಗಳಿಂದ ಬರುವ ಲಾರಿಗಳು, ಟ್ಯಾಂಕರ್‌, ಕಂಟೈನರ್‌ ಸಹಿತ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಈ ವಾಹನಗಳ ಸಂಚಾರದಿಂದ ಗುಡ್ಡದಲ್ಲಿ ಕಂಪನ ಉಂಟಾಗಿ ಮಣ್ಣು ಜರಿದು ಬದಿಯಲ್ಲಿರುವ ಮರಗಳು ರಸ್ತೆಗೆ ಉರುಳುವುದು ಸಹಜ ಪ್ರಕ್ರಿಯೆಯಾಗಿದೆ. ವಾಹನಗಳು, ಪಾದಚಾರಿಗಳು ಸಂಚರಿಸುವ ಸಮಯದಲ್ಲಿ ದೊಡ್ಡ ಮರಗಳು ಉರುಳಿ ಅವಘಡ ಸಂಭವಿಸುವ ಸಾಧ್ಯತೆ ಇದೆ.

Advertisement

ಇಂತಹದ್ದೇ ಇನ್ನೊಂದು ಸ್ಥಳ ಕದ್ರಿ ಸರ್ಕ್ನೂಟ್‌ ಹೌಸ್‌ (ಬಂಗಲೆ) ನಿಂದ ಬಿಜೈಗೆ ಬರುವ ರಸ್ತೆಯಲ್ಲಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿ ಗುಡ್ಡೆ ಜರಿದು ಈಗ ಮರಳು ತುಂಬಿದ ಗೋಣಿ ಚೀಲಗಳನ್ನು ಇಟ್ಟಿದ್ದಾರೆ. ಇಂತ ರಸ್ತೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೂ ಎಲ್ಲವೂ ಯಥಾ ಸ್ಥಿತಿಯಲ್ಲಿದೆ. ಇನ್ನು ಮಳೆಗಾಲ ಕೆಲವೇ ತಿಂಗಳುಗಳು ಬಾಕಿ ಇವೆ. ಮತ್ತೂಮ್ಮೆ ಗುಡ್ಡ ಜರಿತಗೊಂಡಲ್ಲಿ ಇಲಾಖೆ ಕಣ್ಣುಬಿಟ್ಟು ಜಾಗೃತಗೊಳ್ಳುತ್ತದೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ಮುಂಬರುವ ಅವಘಡಗಳನ್ನು ತಪ್ಪಿಸಲು, ಗುಡ್ಡ ಜರಿತವಾಗುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

- ಜೆ.ಎಫ್. ಡಿ’ಸೋಜಾ, ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next