Advertisement

ಪದಗ್ರಹಣ ಸಮಾರಂಭ ಯಶಸ್ವಿಗೊಳಿಸಿ: ಡಾ|ರಾಮಪ್ಪ

08:11 AM Jun 10, 2020 | Suhan S |

ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪದಗ್ರಹಣ ಮಾಡುವ ಸಮಾರಂಭವನ್ನ ಯಶಸ್ವಿಗೊಳಿಸಬೇಕು ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಡಾ| ವೈ. ರಾಮಪ್ಪ ತಿಳಿಸಿದರು.

Advertisement

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣದ ಹಾಲಸ್ವಾಮಿ ಗದ್ದುಗೆಯಲ್ಲಿ ನಡೆದ ಬ್ಲಾಕ್‌ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ಪದಗ್ರಹಣ ಸಮಾರಂಭದ ವೀಕ್ಷ‌ಣೆ ಮಾಡಲು ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಕೆಪಿಸಿಸಿಗೆ ನೀಡುವಂತೆ ಪಕ್ಷ‌ದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡಿದರು. ವಿಧಾನಸಭಾ ಕ್ಷೇತ್ರದ 200ಕ್ಕೂ ಹೆಚ್ಚು ಬೂತ್‌ಗಳಲ್ಲಿ ಎಲ್ಲಾ ಕಾರ್ಯಕರ್ತರು ಪೂರ್ಣ ಜವಾಬ್ದಾರಿಯೊಂದಿಗೆ ಪದಗ್ರಹಣದ ವೀಕ್ಷ‌ಣೆ ಮಾಡುವುದರ ಜೊತೆಗೆ ಪ್ರಸಾರದಲ್ಲಿ ನೇರವಾಗಿ ಅಧ್ಯಕ್ಷರು ಮಾತನಾಡಿದ ಸಂದರ್ಭದಲ್ಲಿ ಕಾರ್ಯಕರ್ತರು ಸಹ ಭಾಗಿಯಾಗುವಂತಹ ಅವಕಾಶ ಇರುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಎಲ್ಲಾ ಮತದಾರರಿಗೂ ಹಾಗೂ ನಿಷ್ಠಾವಂತ ಕಾಂಗ್ರೆಸ್‌ ಮುಖಂಡರಿಗೂ ಹೆಚ್ಚಿನ ಹೊಣೆಗಾರಿಕೆಯ ನೀಡುವ ಮೂಲಕ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಒತ್ತು ನೀಡಬೇಕೆಂದರು.

ಮಾಯಕೊಂಡ ಕ್ಷೇತ್ರ ಹಿಂದೆ ಕಾಂಗ್ರೆಸ್‌ನ ಅತ್ಯಂತ ಸದೃಢ ಕ್ಷೇತ್ರವಾಗಿತ್ತು. ಬೂತ್‌ಮಟ್ಟ ಹಾಗೂ ಪಂಚಾಯತಿ ವ್ಯಾಪ್ತಿಗಳಲ್ಲಿ ಅಭಿಯಾನವನ್ನು ನಡೆಸುವುದರ ಮೂಲಕ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎಲ್ಲಾ ರಚನಾತ್ಮಕ ಕಾರ್ಯಕ್ರಮಗಳನ್ನು ಕೂಡ ಜನರಿಗೆ ಮುಟ್ಟಿಸುವುದರ ಮೂಲಕ ಪಕ್ಷ‌ದ ಬಲವರ್ಧನೆಗೆ ಪೂರಕವಾದಂತಹ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವುದರ ಜೊತೆಗೆ‌ ರೈತಾಪಿ ವರ್ಗ, ಕೃಷಿ ಕಾರ್ಮಿಕ ವರ್ಗ, ವಿದ್ಯಾರ್ಥಿ ಯುವಜನತೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಮುಖಂಡ ಅಲ್ಲಂಪಾಷಾ ಅಧ್ಯಕ್ಷತೆ ವಹಿಸಿದ್ದರು. ಹೂವಿನಮಡು ಚನ್ನಬಸಪ್ಪ, ಕಂಚುಗಾರನಹಳ್ಳಿ ಪಾಲಾಕ್ಷ‌ಪ್ಪ, ಜೆಸ್ಸಿ ಪ್ರಭುದೇವ್‌, ಜಾಹೀರ್‌ ಪಟೇಲ್‌, ಓಂಕಾರನಾಯ್ಕ, ಚಿರಡೋಣಿ ಮಂಜುನಾಥ್‌, ಸೈಯ್ಯದ್‌ ಹಿದಾಯತ್‌, ಆಸಿಫ್‌, ತಿಪ್ಪೇಸ್ವಾಮಿ, ಚಿರಡೋಣಿ ಹನುಮಂತಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next