Advertisement

Secretary Blinken’s Trip; ಚೀನಾಗೆ ಅಮೆರಿಕದ ವಿದೇಶಾಂಗ ಸಚಿವರ ಭೇಟಿ

09:20 PM Jun 18, 2023 | Team Udayavani |

ಬೀಜಿಂಗ್‌: ಅಮೆರಿಕ ಹಾಗೂ ಚೀನ ನಡುವಿನ ಉದ್ವಿಗ್ನತೆ ಶಮನದ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಭಾನುವಾರ ಚೀನಕ್ಕೆ ಆಗಮಿಸಿದ್ದಾರೆ.

Advertisement

2 ದಿನಗಳ ಚೀನ ಪ್ರವಾಸ ಕೈಗೊಂಡಿರುವ ಬ್ಲಿಂಕೆನ್‌ ಭಾನುವಾರ ಚೀನ ವಿದೇಶಾಂಗ ಸಚಿವ ಕಿನ್‌ ಗಂಗ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಚೀನ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್‌ ಯಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಆದರೆ ಮಾತುಕತೆಯ ವಿವರಗಳು ಬಹಿರಂಗವಾಗಿಲ್ಲ. ಸೋಮವಾರ ಬ್ಲಿಂಕೆನ್‌ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಭೇಟಿ ವೇಳೆ ತೈವಾನ್‌ ಜತೆಗಿನ ವ್ಯಾಪಾರ, ಚೀನಾದಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿ, ದಕ್ಷಿಣ ಚೀನಾ ಸಾಗರದಲ್ಲಿ ಚೀನಾದ ಮಿಲಿಟರಿ ಚಟುವಟಿಕೆ, ಉಕ್ರೇನ್‌-ರಷ್ಯಾ ಯುದ್ಧ, ಚೀನ-ಅಮೆರಿಕ ನಡುವಿನ ಭಿನ್ನಾಭಿಪ್ರಾಯಗಳ ಶಮನದ ನಿಟ್ಟಿನಲ್ಲಿ ರಚನಾತ್ಮಕ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್‌ ಅಧಿಕಾರ ವಹಿಸಿಕೊಂಡ ನಂತರ ಚೀನ ಪ್ರವಾಸ ಕೈಗೊಂಡ ಅಮೆರಿಕದ ಮೊದಲ ವಿದೇಶಾಂಗ ಸಚಿವ ಬ್ಲಿಂಕೆನ್‌ ಆಗಿದ್ದಾರೆ. ಫೆಬ್ರವರಿಯಲ್ಲಿ ಚೀನದ ಬೇಹುಗಾರಿಕಾ ಬಲೂನ್‌ ಅನ್ನು ಅಮೆರಿಕ ಹೊಡೆದುರುಳಿಸಿದ್ದು ಎರಡೂ ದೇಶಗಳ ನಡುವೆ ಮತ್ತೆ ಜಟಾಪಟಿಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next