Advertisement
ಮಹಾಂತೇಶ್ ಪ್ರೋತ್ಸಾಹಅಂಧರ ತಂಡ ಕ್ರಿಕೆಟ್‌ನಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದೆ ಎಂದರೆ ಅದಕ್ಕೆ ಕಾರಣ ಸಮರ್ಥನಂ ಅಂಗವಿಕಲರ ಸಂಸ್ಥೆ. ಬೆಂಗಳೂರಿನಲ್ಲಿ ಈ ಸಂಸ್ಥೆ ಕಾರ್ಯ ನಡೆಸುತ್ತಿದೆ. ನೂರಾರು ಅಂಗವಿಕಲ ಮಕ್ಕಳಿಕೆ ನೈತಿಕ ಸ್ಥರ್ಯವನ್ನು ತುಂಬಿದೆ. ಅವರ ಬಾಳಲ್ಲಿ ಆಶಾಕಿರಣ ಮೂಡಿಸಿದೆ. 1992ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಮಹಾಂತೇಶ್ ಈ ಸಂಸ್ಥೆಯ ಸ್ಥಾಪಕ ನಿರ್ವಾಹಕರು. ಇವರು ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದವರು. ಅಂಧರಿಗಾಗಿ ಕ್ರಿಕೆಟ್ ಹುಟ್ಟು ಹಾಕಿದರು ಮಹಾಂತೇಶ್. ನಂತರ ಭಾರತ ಅಂಧರ ತಂಡ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಇದಕ್ಕೆಲ್ಲ ಮಹಾಂತೇಶ್ ಕಾರಣ ಎನ್ನುವುದು ಗಮನಿಸಬೇಕಾದ ಸಂಗತಿ. ಇವರ ಜತೆಗೆ ಹಲವಾರು ಮಂದಿ ಸಿಬ್ಬಂದಿಗಳು ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಸದ್ಯ ಅವರು ವಿಶ್ವ ಅಂಧರ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದು ಭವಿಷ್ಯದಲ್ಲಿ ಅಂಧರ ಕ್ರಿಕೆಟನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಬೆಳೆಸುವ ಜವಾಬ್ದಾರಿ ಹೊತ್ತಿದ್ದಾರೆ.
ಅಂಧರ ಕ್ರಿಕೆಟ್‌ಗೆ ಸರಿಯಾದ ರೀತಿಯಲ್ಲಿ ನೆರವು ಸಿಗುತ್ತಿಲ್ಲ. ಬಿಸಿಸಿಐ ಇದುವರೆಗೆ ಮಾನ್ಯತೆ ನೀಡಿಲ್ಲ. ಸರ್ಕಾರ ಕೂಡ ಕಪ್ ಗೆದ್ದ ಸಂದರ್ಭಗಳಲ್ಲಿ ಸೂಕ್ತ ಬಹುಮಾನ ನೀಡಿ ಗುರುತಿಸಲಿಲ್ಲ. ಇದೆಲ್ಲದರಿಂದ ಅಂಧ ಕ್ರಿಕೆಟಿಗರು ಸಾಕಷ್ಟು ಬೇಸರಕ್ಕೆ ಒಳಗಾಗಿದ್ದಾರೆ. ಮೇಲಿಂದ ಮೇಲೆ ನಮಗೂ ಮಾನ್ಯತೆ ನೀಡಿ ಎಂದು ಸಿಎಬಿಐ (ಭಾರತೀಯ ಅಂಧರ ಕ್ರಿಕೆಟ್ ಮಂಡಳಿ)ಗೆ ಮನವಿ ಸಲ್ಲಿಸಿಯಾಯಿತು. ಇದುವರೆಗೆ ಯಾವುದೇ ಭರವಸೆ ದೊರಕಿಲ್ಲ. ಪ್ರಾಯೋಜಕರನ್ನು ಹುಡುಕುವ ಕಷ್ಟ
ಪ್ರತಿ ಕೂಟಗಳು ನಡೆದಾಗ ಮಹಾಂತೇಶ್ ಹೆಚ್ಚು ಕಾರ್ಯ ಪ್ರವೃತ್ತರಾಗುತ್ತಾರೆ. ಪ್ರಾಯೋಜಕರನ್ನು ಹುಡುಕುವುದರಲ್ಲೇ ತಲ್ಲೀನರಾಗಿರುತ್ತಾರೆ. ಪ್ರಾಯೋಜಕರಿಲ್ಲದೆ ಕೂಟವನ್ನು ನಡೆಸುವುದು ಕಷ್ಟ ಎನ್ನುವುದು ಮಹಾಂತೇಶ್ ಮಾತು.
Related Articles
Advertisement
ಮಹಾಂತೇಶ್ ಅವರು ಮೂಲತಃ ಬೆಳಗಾವಿಯವರು. 1992ರಲ್ಲಿ ಸಮರ್ಥನಂ ಸಂಸ್ಥೆಯನ್ನು ಹುಟ್ಟು ಹಾಕಿದರು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು. ಇವರ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅದರಲ್ಲಿ ಪ್ರಮುಖವಾದವೆಂದರೆ 2002ರಲ್ಲಿ ಗವರ್ನರ್ ಅವಾರ್ಡ್, 2009ರಲ್ಲಿ ಕೇಂದ್ರದಿಂದ ರಾಷ್ಟ್ರೀಯ ಪ್ರಶಸ್ತಿ, 2009ರಲ್ಲಿ ಆರ್ಯಭಟ ಪ್ರಶಸ್ತಿ ಹಾಗೂ 2011ರಲ್ಲಿ ಎನ್‌ಡಿ ಟಿವಿ ಸ್ಪಿರಿಟ್ ಆಫ್ ನ್ಪೋರ್ಟ್ಸ್ ಪ್ರಶಸ್ತಿ. ಹೇಮಂತ್ ಸಂಪಾಜೆ