ಅವಕಾಶ ಕೊಡಿ ನಾವು ನಿರುದ್ಯೋಗಿಗಳು ನಮಗೆ ಉದ್ಯೋಗ ಕೊಟ್ಟು ಎಲ್ಲರಂತೆ ಬದುಕುವ ದಾರಿ ಮಾಡಿ ಕೊಡಿ ಎಂದು ಶೃಂಗೇರಿ ಕಾಂಚಿನಗರ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ಸಂಘದ ಅಧ್ಯಕ್ಷ ಯೋಗೀಶ್ ಹೇಳಿದರು.
Advertisement
ಅವರು ಕಾರ್ನಾಡು ಜಂಕ್ಷನ್‌ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ತಂಡದ ಅಂಧ ಕಲಾವಿದರ ಮೂಲಕ ನಡೆದ ಸಂಗೀತ ಕಾರ್ಯಕ್ರಮದ ಕೊನೆಯಲ್ಲಿ ಸಹಕರಿಸಿದವರನ್ನು ಅಭಿನಂದಿಸಿ ಮಾತನಾಡಿದರು.
ಆದರೆ ನಮಗೆ ಕಣ್ಣು ಕಾಣುವುದಿಲ್ಲ ಎಂಬ ಕೊರಗು ಬಿಟ್ಟರೆ ನಮಗೂ ಎಲ್ಲರಂತೆಯೆ ದುಡಿದು ಸ್ವಾಭಿಮಾನದ ಬದುಕು ನಡೆಸುವ ಆಸೆ ಇದೆ. ಸರಕಾರ ಅಥವಾ ಜನ ಪ್ರತಿನಿಧಿಗಳು ನಮಗೆ ದಾರಿ ದೀಪವಾಗಬೇಕು ಎಂದರು. ಕಾರ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಉದ್ಯಮಿ ನೂತನ್ ಶೆಟ್ಟಿ ಮತ್ತು ಜಾ. ಜನತಾ ದಳದ ಅಧ್ಯಕ್ಷ ಜೀವನ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಅವರು ಅಂದರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ಕಾರ್ಯಕ್ರಮದ ಅನಂತರ ಕಲಾವಿದರನ್ನು ಸಮ್ಮಾನಿಸಿ, ಗೌರವಿಸಲಾಯಿತು.