ಚಿಂತಾಮಣಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಬಲಿಷ್ಠವಾದ ಸಂವಿಧಾನವಾಗಿದ್ದು, ಇಂತಹ ಸಂವಿಧಾನವನ್ನು ಪಡೆದಿರುವ ಭಾರತೀಯರಾದ ನಾವು ಧನ್ಯರು ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.
ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ರೂಪಿಸಲು ದೃಢ ನಿರ್ಧಾರ ಮಾಡಬೇಕೆಂದರು. ಈ ಮುನ್ನ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸೇರಿ ಗಣ್ಯರು ಧ್ವಜ ವಂದನೆ ಸ್ವೀಕರಿಸಿದರು.
ಲ್ಯಾಪ್‌ಟಾಪ್ ವಿತರಣೆ: ಇನ್ನೂ ಪೊಲೀಸ್ ಇಲಾಖೆ, ಎನ್.ಸಿಸಿ ವಿದ್ಯಾರ್ಥಿಗಳಿಂದ ಮೂಡಿಬಂದ ಪಥ ಸಂಚಲನ ನೋಡುಗರ ಗಮನ ಸೆಳೆಯಿತು. ಇದೇ ವೇಳೆ 2019-20ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ಇದನ್ನೂ ಓದಿ:ಮತ್ತೆ ಕಾಡಾನೆ ಹಾವಳಿ: ಫಸಲಿಗೆ ಬಂದಿದ್ದ ಬಾಳೆ ಬೆಳೆ ಧ್ವಂಸ
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಉಪಾಧ್ಯಕ್ಷೆ ಸುಹಾಸಿನಿ, ತಹಶೀಲ್ದಾರ್ ಹನುಮಂತ ರಾಯಪ್ಪ ಪೌರಾಯುಕ್ತ ಉಮಾಶಂಕರ್, ಇಒ ಮಂಜುನಾಥರೆಡ್ಡಿ, ಬಿಇಒ ಸುರೇಶ್, ನಗರ ಪೊಲೀಸ್ ಠಾಣೆ ಸಿಪಿಐ ಆನಂದಕುಮಾರ್, ಎಪಿಎಂಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಮಂಜುನಾಥರೆಡ್ಡಿ, ಕೃಷಿಕ ಸಮಾಜದ ಗೋವಿಂದಪ್ಪ, ನಗರಸಭಾ, ತಾಪಂ ಸದಸ್ಯರು ಇದ್ದರು.