Advertisement

ಅಧ್ಯಾತ್ಮದಲ್ಲಿರುವ ಸ್ತ್ರೀಯರೇ ಸುಖಿಗಳು!

10:52 PM Sep 23, 2019 | Team Udayavani |

ನವದೆಹಲಿ: ಲೌಕಿಕ ಸುಖಭೋಗಗಳನ್ನು ತೊರೆದು ಅಧ್ಯಾತ್ಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು, ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚು ಸಂತೋಷದಿಂದ ಇದ್ದಾರೆಂಬ ಕುತೂಹಲ ಕಾರಿ ಅಂಶವೊಂದನ್ನು, ಆರ್‌ಎಸ್‌ಎಸ್‌ ಜತೆ ನಂಟು ಹೊಂದಿರುವ “ದೃಷ್ಟಿ ಸ್ತ್ರೀ ಅಧ್ಯಯನ ಪ್ರಬೋಧನ್‌ ಕೇಂದ್ರ’ (ಡಿಎಸ್‌ಎಪಿಕೆ) ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ತಿಳಿಸಿದೆ. ಸಮೀಕ್ಷಾ ವರದಿಯನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ಬಿಡುಗಡೆ ಮಾಡಲಿದ್ದಾರೆ.

Advertisement

2017-18ರಲ್ಲಿ ಈ ಸಮೀಕ್ಷೆಯನ್ನು 29 ರಾಜ್ಯ ಗಳು, ಗಡಿ ಭಾಗಗಳು ಹಾಗೂ ಐದು ಕೇಂದ್ರಾ ಡಳಿತ ಪ್ರದೇಶಗಳಿಗೆ ಸೇರಿದ 465 ಜಿಲ್ಲೆಗಳಲ್ಲಿ ನಡೆಸಲಾಗಿತ್ತು. 18 ವರ್ಷಕ್ಕಿಂತ ಮೇಲ್ಪಟ್ಟ 43,255 ಮಹಿಳೆಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 6,000 ಮಹಿಳೆಯರು ಅಧ್ಯಾತ್ಮ ಜೀವನ ನಡೆಸುವವರಾಗಿದ್ದು, ಅವರೆಲ್ಲರೂ ಸಂಸಾರ, ವರಮಾನ ಇಲ್ಲದೆಯೂ, ಅಧ್ಯಾ ತ್ಮಿಕ ಸಾಧನೆ ಮಾತ್ರದಿಂದಲೇ ತಾವು ಸಂತೋಷ ಮತ್ತು ಮಾನಸಿಕ ಸೌಖ್ಯ ಹೊಂದಿರುವುದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next