ನವದೆಹಲಿ: ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸೋಮವಾರ ಸ್ಫೋಟ ಸಂಭವಿಸಿದ್ದು, ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಯಭಾರ ಕಚೇರಿ ಘಟನೆಯನ್ನು ದೃಢಪಡಿಸಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಸ್ಫೋಟದ ಸ್ಥಳದ ಬಳಿಯಿರುವ ಸಿಸಿಟಿವಿಯಲ್ಲಿ ಇಬ್ಬರು ಶಂಕಿತರ ಚಲನವಲನ ಸೆರೆಯಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಘಟನೆ ನಡೆದಿದ್ದು ಸದ್ಯ ರಾಯಭಾರ ಕಚೇರಿ ಬಳಿ ಬಿಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಸ್ರೇಲಿ ರಾಯಭಾರಿ ಕಚೇರಿಯ ರಾಯಭಾರಿಯನ್ನು ಉದ್ದೇಶಿಸಿ ಟೈಪ್ ಮಾಡಲಾದ ಪತ್ರವೊಂದು ಇಸ್ರೇಲಿ ಧ್ವಜದಲ್ಲಿ ಸುತ್ತಿದ ರೀತಿಯಲ್ಲಿ ಸ್ಫೋಟದ ಸ್ಥಳದ ಬಳಿ ಪತ್ತೆಯಾಗಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಇಂಗ್ಲಿಷ್‌ನಲ್ಲಿ ಬರೆಯಲಾದ ಪತ್ರವು ಗಾಜಾದಲ್ಲಿ ನಡೆಸಿದ ಇಸ್ರೇಲ್‌ನ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಿರಿವುದಾಗಿ ಬರೆದುಕೊಂಡಿದೆ. “ಸರ್ ಅಲ್ಲಾ ರೆಸಿಸ್ಟೆನ್ಸ್” ಎಂದು ಗುರುತಿಸಿಕೊಳ್ಳುವ ಗುಂಪು ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.
ಈ ಕುರಿತು ಇಸ್ರೇಲ್‌ನ ಉಪ ರಾಯಭಾರಿ ಓಹದ್ ನಕಾಶ್ ಕಯ್ನಾರ್ ಪ್ರಿತಿಕ್ರಿಯೆ ನೀಡಿದ್ದು ‘ಮಂಗಳವಾರ ಸಂಜೆ 5.8 ಗಂಟೆಯ ಹೊತ್ತಿಗೆ ರಾಯಭಾರ ಕಚೇರಿಯ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ. ನಮ್ಮ ಎಲ್ಲಾ ಕೆಲಸಗಾರರು ಸುರಕ್ಷಿತವಾಗಿದ್ದಾರೆ. ನಮ್ಮ ರಾಜತಾಂತ್ರಿಕರು ಸುರಕ್ಷಿತವಾಗಿದ್ದಾರೆ. ದೆಹಲಿ ಪೊಲೀಸರ ಭದ್ರತೆಯ ಸಹಕಾರದೊಂದಿಗೆ ನಮ್ಮ ಭದ್ರತಾ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: D.K.ಜಿಲ್ಲೆಯಲ್ಲಿ 6 ಕಟ್ಟಡ ಬಾಕಿ; ಉಡುಪಿಯಲ್ಲಿ ಇನ್ನೂ ಆರಂಭಗೊಳ್ಳದ ಕಾಮಗಾರಿ